ಕೆ.ಆರ್.ಪೇಟೆ: ಶ್ರವಣಬೆಳಗೊಳ ಮಾರ್ಗದ ಮುಖ್ಯ ರಸ್ತೆಯಲ್ಲಿರುವ ತಾಲ್ಲೂಕಿನ ಕಸಬಾ ಹೋಬಳಿಯ ತೇಗನಹಳ್ಳಿ ಹಾಗೂ ಮಾರ್ಗೋನಹಳ್ಳಿ ಮರಡೀಲಿಂಗೇಶ್ವರ ಮುಖ್ಯ ದ್ವಾರದ ಗೇಟ್ ಮುಂಭಾಗದಲ್ಲಿ ಸುಮಾರು 16.ವರ್ಷಗಳಿಂದ ಭಕ್ತರ ಇಷ್ಟಾರ್ಥ ಸಿದ್ಧಿ ಕಲ್ಪಿಸಿ ಶ್ರೀ ಕ್ಷೇತ್ರವಾಗಿ ಹೊರಹೊಮ್ಮಿರುವ ಶ್ರೀ ಚಂದಗೋಳಮ್ಮ, ಶ್ರೀ ವರಸಿದ್ದಿ ಶ್ರೀ ಲಕ್ಷ್ಮಿದೇವಿಯ ದೇವಾಲಯದ ಅಭಿವೃದ್ಧಿಯನ್ನು ಸಹಿಸದೆ,ಹಾಗೂ ದೇವಾಲಯದ ಪ್ರಧಾನ ಅರ್ಚಕ ರಾಜೇಶ್ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡಿ ದೇವಾಲಯದ ಮೇಲೆ ಕಪ್ಪು ಮಸಿ ಬಳಿಯುವ ಯತ್ನ ನಡೆಯುತ್ತಿದೆ ಎಂದು ದೇವಾಲಯದ ಆವರಣದಲ್ಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಿಡಿಕಾರಿದರು.
ದೇವಾಲಯದ ಭಕ್ತೆ ಸುಚಿತ್ರ ಮಾತನಾಡಿ ಇದು ಭಕ್ತರ ಪಾಲಿನ ಪುಣ್ಯ ಕ್ಷೇತ್ರ ಇಲ್ಲಿ ಯಾವ ವಾಮಾಚಾರವೂ ನಡೆಯುವುದಿಲ್ಲ ವಿಶೇಷ ದಿನಗಳಲ್ಲಿ ಪೂಜೆ-ಪುನಸ್ಕಾರ, ಭಜನೆ ನಡೆಯುತ್ತಿದೆ. ಭಕ್ತರ ಇಷ್ಟಾರ್ಥ ಸಿದ್ಧಿ ಕಲ್ಪಿಸಿ ಶ್ರೀ ಕ್ಷೇತ್ರವಾಗಿ ಹೊರಹೊಮ್ಮುತ್ತಿರುವ ದೇವಾಲಯವನ್ನು ನೋಡಿ ಸಹಿಸದ ಕೆಲವು ಕಿಡಿಗೇಡಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.ದೇವಾಲಯದ ಬೆಳವಣಿಗೆಯನ್ನು ತಡೆಯಲು ಸುಳ್ಳು ದೂರು ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.ಗೋಮಾಳದ ಜಾಗದಲ್ಲಿ ಅಕ್ರಮ ದೇವಾಲಯ ಎನ್ನುವುದು ಸುಳ್ಳು.

ಭಕ್ತರ ಶ್ರದ್ಧೆ, ನಂಬಿಕೆಯಿಂದಲೇ ಈ ದೇವಾಲಯ ಬೆಳೆದಿದೆ.ನಾವು ಎಲ್ಲರೂ ಸೇರಿ ದೇವಾಲಯವನ್ನು ಕಾಪಾಡುತ್ತೇವೆ. ಸುಳ್ಳು ಆರೋಪ ಮಾಡುವವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಅವರು ಗ್ರಾಮದ ಸರ್ವೆ ನಂಬರ್ 58ರಲ್ಲಿರುವ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ದೇವಾಲಯ ಕಟ್ಟಿಕೊಂಡು, ವಾಮಾಚಾರ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡುತಿದ್ದಾರೆ.ಇತ್ತೀಚೆಗೆ ದೇವಾಲಯ ಜೀರ್ಣೋದ್ಧಾರ ಸಹಿಸದೇ ಕೆಲವು ಶಕ್ತಿಗಳು ಆರೋಪ ಹೊರಿಸುತ್ತಿದ್ದಾರೆ.ಇದನ್ನು ತಾಯಿ ಚಂದುಗೋಳಮ್ಮ ನೋಡಿಕೊಳ್ಳುತ್ತಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ಈ ವಿಚಾರವಾಗಿ ಎರಡೂ ಕಡೆ ವಾದ-ಪ್ರತಿವಾದ ನಡೆಯುತ್ತಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ಅಪಪ್ರಚಾರ ಮಾಡುವ ಕೆಲ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಭಕ್ತರು ರಕ್ಷಣಾ ಇಲಾಖೆಯನ್ನು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಳ್ಳೆಕೆರೆ ವೆಂಕಟಲಕ್ಷ್ಮಮ್ಮ,ಐಕನಹಳ್ಳಿ ಸುಶೀಲಮ್ಮ, ಸುಂದ್ರಮ್ಮ, ಮಂಜುಳಾ, ದೇವಿರಮ್ಮ, ಚುಂಚೆಗೌಡ,ಚೌಡೇನಹಳ್ಳಿ ಶಂಕರೇಗೌಡ, ವಿಜಯ್,ಜ್ಯೋತಿ,ಶಾರದಮ್ಮ, ಸುಚಿತ್ರ,ರೇವಣ್ಣ ರಾಧ,ಚಂದ್ರಕಲಾ,ನಿತಿನ್,ಲಕ್ಷ್ಮಣ್, ಪೂಜಾ,ನಾಗರಾಜ್,ರಾಮೇಗೌಡ,ನಾಗರತ್ನ, ಶ್ರಾವಣಬೆಳಗೂಳ, ಸವಿತಮ್ಮ, ಗೌರಮ್ಮ, ದರ್ಶನ್, ಪಾವನಿ,ಹರ್ಷ ಸೇರಿದಂತೆ ಅಪಾರ ಭಕ್ತರು ಇದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್. ಪೇಟೆ*
