ಚನ್ನರಾಯಪಟ್ಟಣ: ಭಾರತ ದೇಶದಲ್ಲಿ 23.5 ಕೋಟಿ ಮಂದಿ ಮಧುಮೇಹಿಗಳಿದ್ದು ಆತಂಕ, ಜವಾಬ್ದಾರಿ ಹೆಚ್ಚಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಹೃದಯ ತಜ್ಞ ಡಾ. ಕೆ.ನಾಗೇಶ್ ತಿಳಿಸಿದರು.

ಪಟ್ಟಣದಲ್ಲಿ ನಾಗೇಶ್ ಆಸ್ಪತ್ರೆ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ವರ್ಷ ಜಾಗೃತಿಗಾಗಿ, ಅರಿವಿಗಾಗಿ ನಾಗೇಶ್ ಆಸ್ಪತ್ರೆಯ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾಯಿಲೆ ನಾಗಾಲೋಟದಲ್ಲಿ ಹೋಗುತ್ತಿದೆ ಎಂದರು.
ಐಸಿಎಂ ಪ್ರಕಾರ 10 ಕೋಟಿ ಮಧುಮೇಹಿಗಳು, 13:50 ಕೋಟಿ ಪ್ರಿ ಡಯಾಬಿಟಿಕ್ ರೋಗಿಗಳಿದ್ದು, ಆರೋಗ್ಯ ಇಲಾಖೆಯ ಮೇಲೆ ಬೃಹತ್ ಜವಾಬ್ದಾರಿ ಇದೆ. ಶೇ.60ರಷ್ಟು ಈ ಕಾಯಿಲೆಯನ್ನ ನಿಯಂತ್ರಣ ಮಾಡಲು ಜೀವನ ಶೈಲಿ ಪ್ರಮುಖವಾದದ್ದು, ವಿಶ್ವಸಂಸ್ಥೆಯ ಘೋಷಣಾ ವಾಕ್ಯ, ಮಧುಮೇಹಿಗಳೇ ಬೇಗ ಚಿಕಿತ್ಸೆಗೆ ಒಳಪಡಿ ಎಂಬುದಾಗಿದೆ.

ಬಹುಪಾಲು ಪಾರ್ಶ್ವವಾಯು ಹೃದಯಘಾತ, ಗ್ಯಾಂಗ್ರಿನ್ ಎಲ್ಲ ಕಾಯಿಲೆಗಳ ಮೂಲ ಹಾಗೂ ಅಂಗ ವೈಫಲ್ಯತೆಗೆ, ಮಧುಮೇಹ ಕಾರಣವಾಗುತ್ತಿದೆ, ಸಕ್ಕರೆ ಕಾಯಿಲೆ ರಕ್ತನಾಳಗಳ ಕಾಯಿಲೆ ಎನ್ನಬಹುದು ನಿಮ್ಮ ಹೃದಯ ಮೆದುಳು ಕಿಡ್ನಿ ಕಾಪಾಡಿಕೊಳ್ಳಲು, ಮಧುಮೇಹ ಪರೀಕ್ಷೆ
ಮಾಡಿಸಿಕೊಳ್ಳುವುದು ಸೂಕ್ತ, ನಿಯಂತ್ರಣ ಇಲ್ಲದ ಮಧುಮೇಹಿಗಳ ಶೇ.80 ರಷ್ಟು ನಮ್ಮಲ್ಲಿದ್ದು, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ದೈಹಿಕ ಚಟುವಟಿಕೆ ನಿಯಮಿತ ಆಹಾರ ಸೇವನೆ ಪ್ರಮುಖ ವಾರದಲ್ಲಿ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.

ಹಾಸನ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯಧಿಕಾರಿಗಳಾದ ಡಾ. ಯುವರಾಜ್ ಜಾಗೃತಿ ಅರಿವು ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯ ಇಲಾಖೆ ವತಿಯಿಂದ ಎನ್ನಿಡಿ ಕಾರ್ಯಕ್ರಮದ ಅಡಿಯಲ್ಲಿ ಜನಸಾಮಾನ್ಯರ ಮನೆಗೆ ಭೇಟಿ ನೀಡಿ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇಷ್ಟಾದರೂ ಕಾಯಿಲೆ ಬಗ್ಗೆ ಜನಸಾಮಾನ್ಯರು ಉದಾಸೀನ
ಮಾಡುತ್ತಿದ್ದಾರೆ. ಮಧುಮೇಹದ ಬಗ್ಗೆ ಜಾಗೃತಿ ಅರಿವು ಚಿಕಿತ್ಸೆ ಅಗತ್ಯ ಎಂದರು.

ನಾಗೇಶ್ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿತ್ತಿ ಪತ್ರ ಹಿಡಿದು ಪ್ರಭಾತ್ ಬೇರಿಯೊಂದಿಗೆ ಮೆರವಣಿಗೆ ನಡೆಸಿದರು. ನಾಗೇಶ್ ಆಸ್ಪತ್ರೆ ವತಿಯಿಂದ ಪ್ರಮುಖ ಸ್ಥಳಗಳಲ್ಲಿ ಆಟೋ ಚಾಲಕರು ಕಾರು ಚಾಲಕರು ಸೇರಿದಂತೆ ವಿವಿಧ ಗುಂಪುಗಳ, ತಂಡಗಳ, ಉಚಿತ ಮಧುಮೇಹ ತಪಾಸಣಾ ಕಾರ್ಯ ನಡೆಯಿತು.
ನಾಗೇಶ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಕೆ ನಾಗೇಶ್,ಡಾ.ಭಾರತಿ ನಾಗೇಶ್, ಡಾ ಪ್ರಥಮ್, ಡಾ.ಡಿಂಪಲ್, ನಾಗೇಶ್ ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಫಿಲಿಪ್ಸ್, ಕೇಶವಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ.
