ಹಾಸನ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್)ನ ಮಂಗಳೂರು ಎಲ್ಪಿಜಿ ವಿಭಾಗದ ವತಿಯಿಂದ ಹಾಸನ ಜಿಲ್ಲೆಯಲ್ಲಿ ಭಾರತ್ ಗ್ಯಾಸ್ ಎಲ್ಪಿಜಿ ಪ್ರಚಾರ ಅಭಿಯಾನ ಆಯೋಜಿಸಲಾಗಿದ್ದು, ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಹಲವಾರು ಗ್ರಾಹಕರು ಹೊಸ ಗ್ಯಾಸ್ ಸಂಪರ್ಕಕ್ಕಾಗಿ ನೋಂದಾಯಿಸಿಕೊಂಡರು.
ಅಭಿಯಾನದ ಅಂಗವಾಗಿ ಭಾರತ್ ಗ್ಯಾಸ್ ಎಲ್ಪಿಜಿ ಸೇವೆಗಳ ಪ್ರಮುಖ ವೈಶಿಷ್ಟ್ಯಗಳು, ಗ್ರಾಹಕರಿಗೆ ದೊರೆಯುವ ಸೌಲಭ್ಯಗಳು ಹಾಗೂ ವಿವಿಧ ಸೇವೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಡಿಜಿಟಲ್ ನೋಂದಣಿ, ಗ್ಯಾಸ್ ಸಂಪರ್ಕ ಪಡೆಯುವ ವಿಧಾನ, ಸಿಲಿಂಡರ್ ವಿತರಣೆ, ಸುರಕ್ಷಿತ ಬಳಕೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ಆಧುನಿಕ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು. ಕಡಿಮೆ ತೂಕದ ಹಾಗೂ ಸುಲಭವಾಗಿ ನಿರ್ವಹಿಸಬಹುದಾದ ಸಿಲಿಂಡರ್ಗಳ ವೈಶಿಷ್ಟ್ಯಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಿಪಿಸಿಎಲ್ ಮಂಗಳೂರು ವಿಭಾಗದ ಅಧಿಕಾರಿಗಳು ಹಾಗೂ ಭಾರತ್ ಗ್ಯಾಸ್ ವಿತರಕರು ಭಾಗವಹಿಸಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು. ಗ್ಯಾಸ್ ಸಂಪರ್ಕ ಪಡೆಯಲು ಆಸಕ್ತಿ ಹೊಂದಿದ್ದ ಸಾರ್ವಜನಿಕರಿಗೆ ನೋಂದಣಿ ಪ್ರಕ್ರಿಯೆ ಕುರಿತು ಮಾರ್ಗದರ್ಶನ ನೀಡಲಾಯಿತು.
ಭಾರತ್ ಗ್ಯಾಸ್ ಸೇವೆಗಳನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿಸುವುದು, ಎಲ್ಪಿಜಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಹೊಸ ಗ್ರಾಹಕರಿಗೆ ಸಂಪರ್ಕ ಕಲ್ಪಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿತ್ತು.
ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಹಲವರು ಹೊಸ ಗ್ಯಾಸ್ ಸಂಪರ್ಕಕ್ಕಾಗಿ ನೋಂದಣಿ ಮಾಡಿಸಿಕೊಂಡಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ.
