
ಜಿಯೋ ತನ್ನ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ. ಬಹುತೇಕ ಜಿಯೋ ಗ್ರಾಹಕರ ನೆಚ್ಚಿನ ಯೋಜನೆಯನ್ನು ಮತ್ತೆ ತಂದಿದೆ. ಹೌದು, ಇದು ಅಗ್ಗದ ರಿಚಾರ್ಜ್ ಪ್ಲಾನ್ ಆಗಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ನೀವು ಇಡೀ ತಿಂಗಳು ಮಾತನಾಡಬಹುದು ಮತ್ತು ಇಂಟರ್ನೆಟ್ ಬಳಸಬಹುದು.ಇದರ ಜೊತೆಗೆ ಜಿಯೋ ಎರಡು ಪ್ಲಾನ್ಗಳ ಬೆಲೆಯನ್ನು ಸಹ ಇಳಿಕೆ ಮಾಡಿದೆ. ಬನ್ನಿ, ಮರಳಿ ಬಂದ ಈ ಜಿಯೋ (Jio) ಪ್ಲಾನ್ ಯಾವುದು? ಈ ಯೋಜನೆಯಲ್ಲಿ ಯಾವೆಲ್ಲಾ ಪ್ರಯೋಜನಗಳಿವೆ? ಎನ್ನುವುದನ್ನು ತಿಳಿಯೋಣ.
ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಇತ್ತೀಚೆಗೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಕೇವಲ ವಾಯ್ಸ್ ಮಾತ್ರ ಯೋಜನೆಗಳನ್ನು ನೀಡುವಂತೆ ಸೂಚಿಸಿತ್ತು. ಈ ಪ್ಲಾನ್ಗಳಲ್ಲಿ ಡೇಟಾ ಸೌಲಭ್ಯ ಇಲ್ಲ. ಆದರೆ ಕರೆ (ಧ್ವನಿ) ಮತ್ತು ಎಸ್ಎಂಎಸ್ನ (SMS) ಸೌಲಭ್ಯಗಳು ಲಭ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ದಿನಗಳ ಹಿಂದೆ ಜಿಯೋ ಧ್ವನಿ (ವಾಯ್ಸ್) ಮಾತ್ರ ಯೋಜನೆಗಳನ್ನು ಪರಿಚಯಿಸಿತ್ತು. ಆದರೆ, ಇತ್ತ ಮೂರು ರಿಚಾರ್ಜ್ ಪ್ಲಾನ್ಗಳನ್ನು (189 ರೂ., 479 ರೂ. ಮತ್ತು 1,899 ರೂ.) ಸ್ಥಗಿತಗೊಳಿಸಲಾಗಿತ್ತು. ಇದರಿಂದ ಜಿಯೋ ಬಳಕೆದಾರರು ಅಸಮಾಧಾನಗೊಂಡಿದ್ದರು. ಇದನ್ನು ಗಮನಿಸಿದ ಜಿಯೋ, ಮತ್ತೆ ತನ್ನ ಈ ಮೌಲ್ಯದ ಯೋಜನೆಗಳಲ್ಲಿ ಒಂದನ್ನು ಮರಳಿ ತಂದಿದೆ.
ರಿಲಯನ್ಸ್ ಜಿಯೋ (Reliance Jio) ಮತ್ತೊಮ್ಮೆ 189 ರೂ. ಯೋಜನೆಯನ್ನು ಕೈಗೆಟುಕುವ ಪ್ಯಾಕ್ಗಳ ವರ್ಗದ ಅಡಿಯಲ್ಲಿ ಪಟ್ಟಿ ಮಾಡಿದೆ. ಈ ರೀಚಾರ್ಜ್ ಪ್ಲಾನ್ನೊಂದಿಗೆ ಬಳಕೆದಾರರು ಸೀಮಿತ ಡೇಟಾ, ಅನ್ಲಿಮಿಟೆಡ್ ಕಾಲ್ಸ್ ಮತ್ತು ಎಸ್ಎಂಎಸ್ (SMS) ಪ್ರಯೋಜನ ಪಡೆಯಬಹುದು. ಈ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿ.
ಜಿಯೋ 189 ರೂ. ಪ್ಲಾನ್ ಪ್ರಯೋಜನಗಳು
ಜಿಯೋ ತನ್ನ 189 ರೂ. ಯೋಜನೆಯಲ್ಲಿ ಬಳಕೆದಾರರಿಗೆ ಅನೇಕ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ಇತರೆ ಹಲವು ಯೋಜನೆಗಳಿಗಿಂತ ಉತ್ತಮವಾಗಿದೆ. ಈ ಯೋಜನೆಯಲ್ಲಿ ಒಟ್ಟು 2GB ಹೈ ಸ್ಪೀಡ್ ಡೇಟಾ ಲಭ್ಯವಿದೆ. ಇದು ಸೋಶಿಯಲ್ ಮೀಡಿಯಾ ಸೀಮಿತ ಬಳಕೆಯನ್ನು ಹೊಂದಿರುವ ಅಥವಾ ಕಡಿಮೆ ಆನ್ಲೈನ್ ವಿಡಿಯೋಗಳನ್ನು ವೀಕ್ಷಿಸುವ ಬಳಕೆದಾರರಿಗೆ ಉತ್ತಮವಾಗಿದೆ.
ಇದಲ್ಲದೆ, ಈ ಪ್ಲಾನ್ನಲ್ಲಿ ಅನ್ಲಿಮಿಟೆಡ್ (ಅನಿಯಮಿತ ಕರೆ) ಕಾಲ್ ಸೌಲಭ್ಯ ಸಿಗುತ್ತದೆ. ಹೆಚ್ಚುವರಿಯಾಗಿ, ನೀವು 28 ದಿನಗಳವರೆಗೆ ಒಟ್ಟು 300 ಎಸ್ಎಂಎಸ್ ಸೌಲಭ್ಯ ಸಹ ಪಡೆಯಬಹುದು. ಹೆಚ್ಚುವರಿ ಪ್ರಯೋಜನವಾಗಿ, ಜಿಯೋ (Jio) ಈ ಯೋಜನೆಯಲ್ಲಿ JioTV, JioCinema ಮತ್ತು JioCloudಗೆ ಚಂದಾದಾರಿಕೆಯನ್ನು ಸಹ ನೀಡುತ್ತದೆ.
ಈ ಎರಡು ಜಿಯೋ ಪ್ಲಾನ್ ಬೆಲೆ ಇಳಿಕೆ
ಜಿಯೋ ಇತ್ತೀಚೆಗೆ ತನ್ನ 1,958 ರೂ.ಗಳ ಯೋಜನೆ ಬಿಡುಗಡೆ ಮಾಡಿತು. ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕಾಲ್ಸ್ ಮತ್ತು 3,600 ಎಸ್ಎಂಎಸ್ ಲಭ್ಯವಿದೆ. ಇದು 365 ದಿನಗಳ (ಇಡೀ ವರ್ಷ) ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಟ್ರಾಯ್ (TRAI) ಸೂಚನೆ ನಂತರ, ಜಿಯೋ ಈ ಯೋಜನೆಯ ಬೆಲೆಯನ್ನು 1,748 ರೂ.ಗೆ ಇಳಿಕೆ ಮಾಡಿದೆ. ಆದರೆ, ಈ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳು ಮೊದಲಿನಂತೆಯೇ ಇರುತ್ತವೆ.
ಜಿಯೋ ಮತ್ತೊಂದು ಹೊಸ ಯೋಜನೆಯ ಬೆಲೆಯನ್ನು ಸಹ ಕಡಿಮೆ ಮಾಡಿದೆ. ಇದನ್ನು ಮೊದಲು 458 ರೂ.ಗೆ ಪರಿಚಯಿಸಲಾಗಿತ್ತು. ಆದರೆ, ಪ್ರಸ್ತುತ ಜಿಯೋ 448 ರೂ.ಗೆ ಇಳಿಕೆ ಮಾಡಿದೆ. ಈ ಯೋಜನೆಯಲ್ಲಿ ನೀವು ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 1,000 ಎಸ್ಎಂಎಸ್ ಸೌಲಭ್ಯಗಳ ಪ್ರಯೋಜನೆ ಪಡೆಯಬಹುದು.