
ಇನ್ಮುಂದೆ ಈ ಯುಪಿಐ ವಹಿವಾಟುಗಳಿಗೆ ಅವಕಾಶ ಇರಲ್ಲ. ಈ ಪಿಎಸ್ಪಿಗಳು ನಿಮ್ಮಲ್ಲಿವೆಯೇ ಎಂದು ಈಗಲೇ ಪರಿಶೀಲಿಸಿಕೊಳ್ಳಿ. ಹೌದು, ಯುಪಿಐನಲ್ಲಿ ಹಣ ಪಾವತಿ (UPI Transaction) ಮಾಡಿದಾಗ ಒಂದು ಟ್ರಾನ್ಸಾಕ್ಷನ್ ಐಡಿ (Transaction ID) ಜನರೇಟ್ ಆಗುತ್ತದೆ.
ಅದರಲ್ಲಿ ಅಕ್ಷರ, ಸಂಖ್ಯೆ ಮತ್ತು ಸ್ಪೆಷಲ್ ಕ್ಯಾರಕ್ಟರ್ಗಳ ಸಂಯೋಜನೆ ಇರಬಹುದು. ಎನ್ಪಿಸಿಐ ನಿರ್ದೇಶನದ ಪ್ರಕಾರ, ಈ ವಹಿವಾಟು (Transaction) ಐಡಿ ಆಲ್ಫಾ ನ್ಯೂಮರಿಕ್ ಕ್ಯಾರೆಕ್ಟರ್ ಮಾತ್ರವೇ ಹೊಂದಿರಬೇಕು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಆನ್ಲೈನ್ ಶಾಪಿಂಗ್, ಒಬ್ಬರಿಂದ ಮತ್ತೊಬ್ಬರಿಗೆ ಹಣ ವರ್ಗಾವಣೆಯೂ ಡಿಜಿಟಲ್ ಪೇಮೆಂಟ್ (Digital Payment) ಮೂಲಕ ನಡೆಯುತ್ತದೆ. ಯುಪಿಐ ಪೇಮೆಂಟ್ಗೆ (ವಹಿವಾಟು) ಸಂಬಂಧಿಸಿದಂತಹ ಕೆಲವು ನಿಯಮಗಳು ಜಾರಿಗೆ ಬಂದಿವೆ. ಯುಪಿಐ ಟ್ರಾನ್ಸಾಕ್ಷನ್ ಐಡಿಯಲ್ಲಿ ಸ್ಪೆಷಲ್ ಕ್ಯಾರಕ್ಟರ್ಇದ್ದರೆ ಅವುಗಳಿಗೆ ಅವಕಾಶ ಇರಲ್ಲ. ನಿಮ್ಮಲ್ಲಿರುವ ಯುಪಿಐ ಆಪ್ನಲ್ಲಿ ಈ ರೀತಿಯ ಟ್ರಾನ್ಸಾಕ್ಷನ್ ಐಡಿ ಬಳಸುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಸೆಂಟ್ರಲ್ ಸಿಸ್ಟಂ ನಿಮ್ಮ ವಹಿವಾಟನ್ನು ತಿರಸ್ಕರಿಸಬಹುದು.
ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಶನ್ (ಎನ್ಪಿಸಿಐ) ಯುಪಿಐ ಟ್ರಾನ್ಸಾಕ್ಷನ್ ಐಡಿ ನೀಡುವ ಪ್ರಕ್ರಿಯೆಯನ್ನು ಸಂಬದ್ದಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ. ಎನ್ಪಿಸಿಐ ಹೊರಡಿಸಿರುವ ನಿರ್ದೇಶನಗಳ ಪ್ರಕಾರ, ಯುಪಿಐ ಆಪರೇಟರ್ಗಳು ಯಾವುದೇ ವಹಿವಾಟಿನಲ್ಲಿ ಜನರೇಟ್ ಮಾಡುವ ವಹಿವಾಟು ಐಡಿಯಲ್ಲಿ ಆಲ್ಫಾನ್ಯೂಮರಿಕ್ ಕ್ಯಾರಕ್ಟರ್ಗಳು ಮಾತ್ರ ಇರಬೇಕು. ಅಂಕಿ ಮತ್ತು ಅಕ್ಷರಗಳ ಸಂಯೋಜನೆ ಮಾತ್ರವೇ ಇರಬೇಕು. ಸ್ಟಾರ್, ಅಂಡರ್ಸ್ಕೋರ್, ಹೈಫನ್ ಇತ್ಯಾದಿ ಬೇರೆ ವಿಶೇಷ ಕ್ಯಾರಕ್ಟರ್ಗಳು ಇರಬಾರದು ಎಂದು ಸೂಚನೆ ನೀಡಲಾಗಿದೆ.
ಇನ್ಮುಂದೆ ಈ ರೀತಿಯ ಪೇಮೆಂಟ್ ತಿರಸ್ಕಾರ!
ಯುಪಿಐ ಇಕೋ ಸಿಸ್ಟಂನ ಭಾಗಿದಾರರಿಗೆ ಕಳೆದ ಮಾರ್ಚ್ (2024) ತಿಂಗಳಲ್ಲೇ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಹೆಚ್ಚಿನ ಪಿಎಸ್ಪಿಗಳು ಈ ನಿಯಮಕ್ಕೆ ಬದ್ಧವಾಗಿವೆ. ಕೆಲವು ಪಿಎಸ್ಪಿಗಳು ಮಾತ್ರ ಈಗಲೂ ವಹಿವಾಟು ಐಡಿಯಲ್ಲಿ ಸ್ಪೆಷಲ್ ಕ್ಯಾರಕ್ಟರ್ ಬಳಸುತ್ತಿರುವುದು ತಳಿದುಬಂದಿತ್ತು. ಈ ಕಾರಣದಿಂದಾಗಿ, ಸ್ಪೆಷಲ್ ಕ್ಯಾರಕ್ಟರ್ ಇರುವ ವಹಿವಾಟು ಐಡಿ ಜನರೇಟ್ ಆದರೆ, ಅಂತಹ ಪೇಮೆಂಟ್ ತಿರಸ್ಕರಿಸಲು ನಿರ್ಧರಿಸಲಾಗಿದೆ. ಈ ನಿಮಮವು ಜಾರಿಗೆ ಬಂದಿದೆ.
ಪಿಎಸ್ಪಿ ಎಂದರೆ ಏನು?
ಪಿಎಸ್ಪಿ ಎಂದರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್. ಅಂದರೆ, ಬ್ಯಾಂಕ್ಗಳು ಇಲ್ಲಿ ಪಿಎಸ್ಪಿಗಳು. ಯುಪಿಐನಲ್ಲಿ 600ಕ್ಕೂ ಹೆಚ್ಚು ಪಿಎಸ್ಪಿಗಳಿವೆ. ನೀವು ಯುಪಿಐ ಆಪ್ (ಟಿಪಿಎಪಿ) ಮೂಲಕ ಹಣ ಟ್ರಾನ್ಸಾಕ್ಷನ್ ಮಾಡುವಾಗ ಪಿಎಸ್ಪಿ ಮೂಲಕವೇ ನಡೆಯುತ್ತದೆ. ಒಂದು ಯುಪಿಐ ಆಪ್ನಲ್ಲಿ ನೀವು ಹಲವು ಪಿಎಸ್ಪಿಗಳನ್ನು ಹೊಂದಿರಬಹುದು.
ಸ್ಪೆಷಲ್ ಕ್ಯಾರಕ್ಟರ್ ಇರಬಾರದು
ಎನ್ಪಿಸಿಐ ಸೂಚನೆಯ ಪ್ರಕಾರ, ವಹಿವಾಟು ಐಡಿಯಲ್ಲಿ ಸ್ಪೆಷಲ್ ಕ್ಯಾರಕ್ಟರ್ ಇರಬಾರದು. ಆಲ್ಫಾನ್ಯೂಮರಿಕ್ ಕ್ಯಾರಕ್ಟರ್ ಮಾತ್ರವೇ ಇರಬೇಕು. ಈ ನಿಯಮಗಳಿಗೆ ಬದ್ಧವಾಗಿಲ್ಲದ ಪಿಎಸ್ಪಿಗಳನ್ನು ಯುಪಿಐ ಆಪ್ಗಳು ತಮ್ಮ ಪ್ಲಾಟ್ಫಾರ್ಮ್ನಿಂದ ತೆಗೆದುಹಾಕಬೇಕಿದೆ. ನಿಮ್ಮ ಯುಪಿಐ ಆಪ್ಗಳಲ್ಲಿ ಈ ಹಿಂದೆ ಮಾಡಿರುವ ಪೇಮೆಂಟ್ಪರಿಶೀಲಿಸಿ, ಇವುಗಳ ಟ್ರಾನ್ಸಾಕ್ಷನ್ ಐಡಿ ಗಮನಿಸಿ. ಅದರಲ್ಲಿ ಸ್ಪೆಷಲ್ ಕ್ಯಾರೆಕ್ಟರ್ ಇದ್ದರೆ, ನಿಮ್ಮ ಹಣ ವಹಿವಾಟಿಗೆ ಆ ಆಪ್ ಬಳಸಬೇಡಿ.
ಯಾವ ಚಿಹ್ನೆಗಳನ್ನು ಬಳಸುವಂತಿಲ್ಲ
ಎನ್ಪಿಸಿಐ ಪ್ರಕಾರ, ಯುಪಿಐ ಐಡಿಯಲ್ಲಿ @, $, #. ^ ,%, * ಸೇರಿದಂತೆ ಇಂತಹ ಯಾವುದೇ ಚಿಹ್ನೆಗಳನ್ನು ಬಳಸುವಂತಿಲ್ಲ. ಯುಪಿಐ ಆಪ್ (UPI) ಮೂಲಕ ತುಂಬಾ ಸರಳವಾಗಿ ಹಣಕಾಸಿನ ವ್ಯವಹಾರಗಳನ್ನು ನಡೆಸಬಹುದು. ಇಲ್ಲಿ ಪ್ರತಿಯೊಂದು ವ್ಯವಹಾರದ ಐಡಿಯೂ ಬೇರೆಯಾಗಿರುತ್ತದೆ ಎಂದು ಎನ್ಪಿಸಿಐ ಮಾಹಿತಿ ನೀಡಿದೆ.