
ನಥಿಂಗ್ ಫೋನ್ (3a) ಸ್ಮಾರ್ಟ್ಫೋನ್ ಮಾರ್ಚ್ 4 ರಂದು ಬಿಡುಗಡೆಯಾಗಲಿದೆ. ಕಂಪನಿಯು ಮಾರ್ಚ್ನಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ನಲ್ಲಿ (MWC 2025) ಹೊಸ ಫೋನ್ಗಳನ್ನು ಅನಾವರಣಗೊಳಸಲಿದೆ. ಈಗಾಗಲೇ ಮುಂಬರುವ ಫೋನಿನ ಮೈಕ್ರೋ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಲೈವ್ ಆಗಿದೆ.
ಕಂಪನಿಯು ಹೊಸ ಫೋನ್ಗಳ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ವರದಿಯ ಪ್ರಕಾರ ನಥಿಂಗ್ ಫೋನ್ 3a (Nothing Phone 3a) ಜೊತೆಗೆ ನಥಿಂಗ್ ಫೋನ್ (3a) ಪ್ರೊ (Nothing Phone 3a Pro) ಅನ್ನು ಮಾರ್ಚ್ 4 ರಂದು ಲಾಂಚ್ ಮಾಡಲಾಗುತ್ತದೆ. ಈ ನಥಿಂಗ್ ಫೋನ್ 3a ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದೆ.
ನಥಿಂಗ್ ಫೋನ್ (3A) ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನಲ್ಲಿ 50MP + 50MP + 8MP ಕ್ಯಾಮೆರಾಗಳು ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7s ಜೆನ್ 3 ಪ್ರೊಸೆಸರ್ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.8 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಈಗಾಗಲೇ ಇದು ಮೊಬೈಲ್ ಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ನಥಿಂಗ್ ಫೋನ್ (3a) ಫೋಟೋ ಲೀಕ್
ನಥಿಂಗ್ ಫೋನ್ (3A) ಸ್ಮಾರ್ಟ್ಫೋನ್ನ ಹಿಂದಿನ ಪ್ಯಾನೆಲ್ನ ಫೋಟೋ ಬಹಿರಂಗವಾಗಿದೆ. ಈ ಮೂಲಕ ಫೋನಿನ ಹಿಂದಿನ ಲುಕ್ ಮತ್ತು ಕ್ಯಾಮೆರಾ ಸೆಟಪ್ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಎಲ್ಲಾ ಮೂರು ಕ್ಯಾಮೆರಾಗಳನ್ನು ಅಡ್ಡಲಾಗಿ ಅಳವಡಿಸಲಾಗಿದೆ. ಒಂದೇ ಮಾಡ್ಯೂಲ್ನಲ್ಲಿ ಎರಡು ಲೆನ್ಸ್ ಅಳವಡಿಸಲಾಗಿದೆ. ಮೂರನೇ ಲೆನ್ಸ್ ಅದರ ಬದಿಯಲ್ಲಿ ಇದೆ. ವರದಿಯ ಪ್ರಕಾರ, ಈ ನಥಿಂಗ್ ಫೋನ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಬರಲಿದೆ.
ನಥಿಂಗ್ ಫೋನ್ (3a) ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ನಥಿಂಗ್ ಫೋನ್ (3a) ಸ್ಮಾರ್ಟ್ಫೋನ್ 6.8 ಇಂಚಿನ ಪೂರ್ಣ ಎಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿರುತ್ತದೆ. ವರದಿಯ ಪ್ರಕಾರ, ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ವರದಿಯ ಪ್ರಕಾರ, ನಥಿಂಗ್ ಫೋನ್ (3A) ಮೊಬೈಲ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7s ಜೆನ್ 3 ಪ್ರೊಸೆಸರ್ ಆಕ್ಟಾಕೋರ್ ಪ್ರೊಸೆಸರ್ ಹೊಂದಿರುತ್ತದೆ. ಇದನ್ನು 4ನ್ಯಾನೋಮೀಟರ್ ಫ್ಯಾಬ್ರಿಕೇಶನ್ಗಳ ಮೇಲೆ ನಿರ್ಮಿಸಲಾಗಿದೆ. ಈ ನಥಿಂಗ್ ಫೋನ್ (3a) ಇತ್ತೀಚಿನ ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.1 ನೊಂದಿಗೆ ಕೆಲಸ ಮಾಡುತ್ತದೆ.
ಸ್ಟೋರೇಜ್ ಆಯ್ಕೆ
ನಥಿಂಗ್ ಫೋನ್ (3a) ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ನೀವು 8GB RAM + 128GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು.
ಕ್ಯಾಮೆರಾ ಸೆಟಪ್
ನಥಿಂಗ್ ಫೋನ್ (3a) ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ 2X ಆಪ್ಟಿಕಲ್ ಜೂಮ್ ಸಾಮರ್ಥ್ಯದೊಂದಿಗೆ 50 ಮೆಗಾಪಿಕ್ಸೆಲ್ ದ್ವಿತೀಯ (ಟೆಲಿಫೋಟೋ ಲೆನ್ಸ್) ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ (ಅಲ್ಟ್ರಾ ವೈಡ್ ಆಂಗಲ್ ಲೆನ್ಸ್) ಕ್ಯಾಮೆರಾ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ನಥಿಂಗ್ ಫೋನ್ (3a) ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಸ್ಮಾರ್ಟ್ಫೋನ್ನಲ್ಲಿ 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.