ಕೆ.ಆರ್.ಪೇಟೆ- ತಾಲ್ಲೂಕು ಎಸ್.ಸಿ.ಎಸ್.ಟಿ ಸರ್ಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳ ಚಿನ್ನದ ಪದಕದ ಗೌರವಕ್ಕೆ ಭಾಜನರಾಗಿರುವ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಅವರನ್ನು ಕೆ.ಆರ್.ಪೇಟೆ ತಾಲ್ಲೂಕು ಸರ್ಕಾರಿ ಎಸ್.ಸಿ.ಎಸ್.ಟಿ ನೌಕರರ ವತಿಯಿಂದ ಸನ್ಮಾನಿಸಿ ಸಿಹಿ ತಿನಿಸುವ ಮೂಲಕ ಗೌರವಿಸಿಸಲಾಯಿತು.
ಬಳಿಕ ಮಾತನಾಡಿದ ತಾಲೂಕು ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಳಿಯೂರು ಯೋಗೇಶ್ ತಾಲ್ಲೂಕಿನ ಕರಿಯಾಶೀಲ ಮಹಿಳಾ ಸರ್ಕಾರಿ ಅಧಿಕಾರಿಗಳಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ಜನಸ್ನೇಹಿ ಪೊಲೀಸ್ ಕರ್ತವ್ಯವನ್ನು ಕೆಲಸ ಮಾಡುತ್ತಿರುವ ಪಟ್ಟಣ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸುಮಾರಾಣಿ ಶಿಸ್ತು ಮತ್ತು ಬದ್ಧತೆಯಿಂದ ಕಾಯಕವನ್ನು ಪರಿಗಣಿಸಿ ರಾಜ್ಯ ಸರ್ಕಾರದ ಗೌರವಾನ್ವಿತ ಚಿನ್ನದ ಪದಕ ಪಡೆದು ತಾಲೂಕಿಗೆ ಕೀರ್ತಿ ಹೆಚ್ಚಿಸಿರುವುದು ನಿಜಕ್ಕೂ ಸಂತಸದ ವಿಚಾರ. ಪ್ರತಿಷ್ಠಿತ ಪದಕಕ್ಕೆ ಗೌರವ ತರುವ ನಿಟ್ಟಿನಲ್ಲಿ ಠಾಣೆಗೆ ಬರುವ ಬಡಜನರ ಸಮಸ್ಯೆಗಳನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸುವ ಮೂಲಕ ನೊಂದವರ ನೋವಿಗೆ ಧ್ವನಿಯಾಗಿ ಮತ್ತಷ್ಟು ಗೌರವಾನ್ವಿತ ಗೌರವ ದೊರೆಕಲಿ ಎಂದರು.

ಈ ಸಂದರ್ಭದಲ್ಲಿ ಮುಖಂಡ ದೊಡ್ಡಸೋಮನಹಳ್ಳಿ ಮಂಜುನಾಥ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್,ಖಜಾಂಚಿ ಕುಮಾರ್,ಸಹ ಕಾರ್ಯದರ್ಶಿ ಗೋಪಾಲಕೃಷ್ಣ,ಸಹ ಕಾರ್ಯದರ್ಶಿ ನಂಜುಂಡ, ಶಿಕ್ಷಕಿ ಹೇಮಾವತಿ,ಗಂಗಾಧರ್, ಗೋಪಾಲ್,ಅಣ್ಣಯ್ಯ ಭಾರತಿ,ಬೆಟ್ಟಮ್ಮ,ಜಯಶೀಲ,ಮಂಡ್ಯ ಚಂದ್ರು ಸೇರಿದಂತೆ ಉಪಸ್ಥಿತರಿದ್ದರು.
-ಮನು ಮಾಕವಳ್ಳಿ ಕೆ ಆರ್ ಪೇಟೆ

[…] .https://vicharavisthara.com/chief-ministers-gold-medal-congratulation-to-k-r-pet-town-police-inspect… […]