ಕೆ.ಆರ್.ಪೇಟೆ: ಶ್ರಮಿಕ ವರ್ಗ ತನ್ನ ಆರೋಗ್ಯ ಲೆಕ್ಕಿಸದೆ ದುಡಿಯಲು ಚಿಂತಿಸುತ್ತದೆ ಆದರೆ ಅರೋಗ್ಯ ಕೈಕೊಟ್ಟಾಗ ದುಡಿದ ಹಣವನ್ನು ಆರೋಗ್ಯಕ್ಕಾಗಿ ಆಸ್ಪತ್ರೆಗೆ ಸುರಿಯುತ್ತದೆ ಹಾಗಾಗಿ ಇಂತಹ ಉಪಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಸದ್ಬಳಿಕೆ ಮಾಡಿಕೊಂಡು ಪ್ರತಿಯೊಬ್ಬರೂ ಆರೋಗ್ಯದತ್ತ ಕಾಳಜಿ ವಹಿಸಬೇಕು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಹಿರಿಕಳಲೆ ಗ್ರಾಮದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ಕಟ್ಟಡ ಹಾಗೂ ಅವಲಂಬಿತರಿಗೆ ಗ್ರಾಮ ವಿಕಾಸ ಕೇಂದ್ರ, ಮಂಡ್ಯ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಟೂಲ್ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಕೂಲಿ ಕಾರ್ಮಿಕರು ತಮ್ಮ ಕುಟುಂಬದ ಸದಸ್ಯರ ಒಳಿತಿಗಾಗಿ ತನ್ನ ಆರೋಗ್ಯವನ್ನು ಲೆಕ್ಕಿಸದೆ ಹಗಲು ಇರುಳು ಶ್ರಮವಹಿಸಿ ಅನಾರೋಗ್ಯಕ್ಕೆ ತುತ್ತಾದಾಗ ವರ್ಷ ವಿಡಿ ದುಡಿದ ಹಣವನ್ನು ಆಸ್ಪತ್ರೆಗೆ ದುಂದು ವೆಚ್ಚ ಮಾಡುತ್ತಾರೆ. ಅಂತಹ ಶ್ರಮಿಕ ವರ್ಗಕ್ಕೆ ಇಂತಹ ಉಪಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ವರದಾನವಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರಗಳನ್ನು ಸರ್ಕಾರ ರಾಜ್ಯಾದಂತ ಆಯೋಜಿಸಲಾಗಿದೆ. ಮುನೆಚ್ಚರಿಕೆ ಕ್ರಮವಾಗಿ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತ ಸಮಾಜಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯ ತಪಾಸಣೆ ಶಿಬಿರದಲ್ಲಿ ದೈಹಿಕ ಪರೀಕ್ಷೆ, ಲಿವರ್, ಆಡಿಯೋ ಮೆಟ್ರಿ ಸ್ಟ್ರೀನ್ ಟೆಸ್ಟ್, ನೇತ್ರ ತಪಾಸಣೆ, ಸಿಬಿಸಿ, ಇಎಸ್ಆರ್ ಪರೀಕ್ಷೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷೆ, ಕಿಡ್ನಿ ಕಾರ್ಯ ಪರೀಕ್ಷೆ, ರಕ್ತದಲ್ಲಿ ಕೊಬ್ಬಿನಾಂಶ ಪರೀಕ್ಷೆ, ಮಲೇರಿಯಾ ಪ್ಯಾರಸೈಟ್ ಪರೀಕ್ಷೆ, ಮೂತ್ರ ಪರೀಕ್ಷೆ, ಥೈರಾಯಿಡ್ ಪರೀಕ್ಷೆ, ರಕ್ತದಲ್ಲಿ ಕಬ್ಬಿಣ, ಮೆಗ್ನಿಷಿಯಂ ಪ್ರಮಾಣ ಪರೀಕ್ಷೆ, ಜಿಜಿಟಿಪಿ ಪರೀಕ್ಷೆ, ಸಿಆರ್ಪಿ ಕ್ವಾಂಟಿಟೇಟಿವ್ ಪರೀಕ್ಷೆ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ವಿಡಿಆರ್ಎಲ್, ರಕ್ತದ ಗುಂಪು ಪರೀಕ್ಷೆ, ಶ್ವಾಸಕೋಶದ ಕಾರ್ಯ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಿ ಟೂಲ್ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮಕೃಷ್ಣ,ಜವರೇಗೌಡ,ಮಂಜುನಾಥ್,ರಾಜೇಶ್, ಕೃಷ್ಣಗೌಡ, ರಮೇಶ್,ರೈತ ಮುಖಂಡರ ಬಸವರಾಜು,ಯೋಗೇಶ್,ಮಂಜೇಗೌಡ,ಶಿವಲಿಂಗೇಗೌಡ,ಭಾರತ್,ಯೋಗೇಶ್,ಚಿರಂಜೀವಿ,ಕೌಶಿಕ್,ಗ್ರಾಮ ವಿಕಾಸ್ ಸಂಸ್ಥಾಪಕ ಮಹೇಶ್, ಸೇರದಂತೆ ಉಪಸ್ಥಿತರಿದ್ದರು.
– ಮನು ಮಾಕವಳ್ಳಿ, ಕೆ ಆರ್ ಪೇಟೆ
