ಮನಸು ಮೃದಂಗ
(ಲೇಖನಗಳ ಸಂಕಲನ)
ಆಂಗಿಕ ಭಾಷೆ
ದೇಶ ಹಾಗು ರಾಜ್ಯ ರಾಜಧಾನಿಗಳಲ್ಲಿ ನಡೆಯಬಾರದ ಎರಡು ಹತ್ಯೆ ಪ್ರಕರಣಗಳು ಇತ್ತೀಚಿಗೆ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಬಂದಿದ್ದು ಎಲ್ಲರಿಗು ತಿಳಿದಿರುವ ವಿಷಯ. ಮೊದಲನೆ ಕೂಲೆಗಾರ ಒಬ್ಬ ಪ್ರತಿಷ್ಟಿತ ರಾಜಕಾರಿಣಿಯ ಮಗ, ಮಗದೊಬ್ಬ ಕಾರಿನ ಚಾಲಕ. ಹಣ, ನಶೆ ಹಾಗು ಅಹಂಗಳ ಪ್ರಭಾವದಿಂದ ಆ ಯುವಕ ಒಂದು ಕ್ಷುಲ್ಲಕ ಕಾರಣಕ್ಕೆ ಪಬ್ ಒಂದರಲ್ಲಿ ಅರೆ ಕಲಸ ಮಾಡುತಿದ್ದ ಸೌಂಧರ್ಯವರ್ಧಿನಿಯನ್ನು ವಿನಃಕಾರಣ ಗುಂಡಿಕ್ಕಿ ಕೊಂದ. ಮತ್ತೋರ್ವ ಪ್ರಭುದ್ದತೆಯನ್ನು ಹೊಂದಿವನಾದರೂ ಕಾಮಾಂಧೆಗೆ ಸೋತು, ನಂಬಿಕೆಗೆ ದ್ರೋಹವನ್ನು ಎಸಗಿ ಒಬ್ಬ ಮಹಿಳಾ ಮಾಹಿತಿ ತಂತ್ರಜ್ಞಾನಿಯನ್ನು ಬೋಗಿಸಿ ಅತೀ ಹೀನಾಯವಾಗಿ ಹತ್ಯೆಗೈದಿದ್ದ. ಈ ಎರೆಡು ಪ್ರಕರಣಗಳು ದೇಶದ ಶಾಂತಿ ಪ್ರಿಯರಿಗೆ ನಿದ್ರೆ ಕೆಡಿಸಿತ್ತು. ಕಾಲ ಕ್ರಮೇಣ ಜನ ಸಾಮಾನ್ಯರಲ್ಲಿ ಆ ನೆನಪು ಅಳಿಸಿ ಹೋಯಿತು.
ಕೆಲ ವರ್ಷಗಳ ನಂತರ ಮಾನ್ಯ ಸರ್ವೋಚ್ಚ ನ್ಯಾಯಲಯ ಮೊನ್ನೆಯಷ್ಟೇ ತನ್ನ ತೀರ್ಪನ್ನು ನೀಡಿತು. “ಮಾಡಿದ್ದುಣ್ಣೋ ಮಹರಾಯ” ನಾಣ್ನುಡಿಯಂತೆ ಉಚ್ಚ ನ್ಯಾಯಧೀಶರು ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನಿತ್ತು ಕ್ರಿಷ್ಣ ಜನ್ಮಸ್ಥಾನಕ್ಕೆ ಅಟ್ಟಿದ್ದರು. ಹತ್ಯಗೆ ಈಡಾದವರ ಪೋಷಕರ, ಸಂಬಂಧಿಗಳ ಹಾಗು ಮಿತ್ರರ ಮನೋ ಮೂಖ ವೇದನೆ ಇಂದಿಗೂ ಆರಲಿಲ್ಲ. “ಸತ್ತವನು ಎದ್ದು ಬರುವುದಿಲ್ಲ” ಎನ್ನೊ ವಿಧಿ ಸಿದ್ದಾಂತ ಹಾಗು ಹಗುರ ಮನೋ ತರ್ಕ ವರ್ತನೆಗಳಿಂದ ಹೇಗೋ ನಡಿದಿದ್ದೆಲ್ಲವೂ ಮರೆತಂತಾಗಿದೆ. ಸಹಜವಾಗಿ ನಮ್ಮ ದೇಶದ ಜನ ಸಾಮನ್ಯರೆಲ್ಲಾ ಸಹನಾಮಯಿಗಳು ಹಾಗೂ ಸಂಯಮ ಸಂಬೂತರು. ಇದರಿಂದಾಗಿ ಜನರ ಆಶಯ “ಮತ್ತೆಂದೂ ಇಂತಹ ದುರ್ಘಟನೆಗಳು ನಮ್ಮ ದೇಶದಲ್ಲಿ ನಡಿಯದರಿಲಿ” ಎಂಬುದು.
ಅಹಿತಕರ ಘಟನೆ ನೆಡೆಯಿತು, ಮುಗ್ದರು ಸತ್ತರು, ಜನ ಮರೆತರು ಮತ್ತು ಕೂಲೆಗಾರರನ್ನು ಕಂಬಿ ಹಿಂದೆ ಕಳಿಸಿದ್ದೂ ಆಯತು. ಆದರೆ ಅನೇಕ ದೃಶ್ಯಮಾಧ್ಯಮ ವಾಹಿನಿಗಳಲ್ಲಿ ವಿಚಾರ ವಾದಿಗಳು, ನಿವೃತ್ತ ನ್ಯಾಯಧೀಶರು, ಶ್ರೇಷ್ಟ ವಕೀಲರು, ಮಾನವ ಹಕ್ಕು ಪರಿಪಾಲಕರು ತಮ್ಮ ವಾದ, ಪ್ರತಿವಾದ, ಸಂವಾದ, ತರ್ಕ, ಚರ್ಚೆ, ವಿಚಾರ, ವೇಶಾವೇಷಗಳೆಲ್ಲವು ನಡೆದವು. ಮುಗ್ದನಿಗೆ ಮದುವೆಯ ಡೋಲಿನಂತೆ ಬಾಸವಾಯಿತು, ಇದೆಲ್ಲಾ ನಿರಿನ ಮೇಲೆ ಗುಳ್ಳೆ ಎಂದನಿಸಿತು. ಈ ಎರೆಡು ಪ್ರಕರಣಗಳು ಮುಗಿದುಹೋದ ಆಧ್ಯಾಯವಾದರೂ ನಾನೊಬ್ಬ ಮನೋ ವೈದ್ಯನಾದ್ದರಿಂದ ಸೂಕ್ಷ್ಮಾತಿ ಸೂಕ್ಷ್ಮತೆಯಿಂದ ಚಿಂತಿಸಿದಾಗ ‘ಈ ಕೊಲೆಗಾರರು ಹೇಗೆ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು’ ಎನ್ನುವ ವಿಚಾರ ನನ್ನ ಮನಸ್ಸನ್ನು ಕಾಡತೊಡಿಗಿತು.
“My lord, accused is innocent, teased mentally by the diseased, accused soveignirity of manhood was tested by diseased by offencive gestures my lord. This provoked accused. I plead no guilty my honour”
(ಮಹಾಸ್ವಾಮಿ, ನಿಮ್ಮಲ್ಲಿ ನನ್ನ ವಿನಂತಿ; ಈ ಅಪರಾಧಿ ನಿರ್ದೋಷಿ. ಸತ್ತ ವ್ಯಕ್ತಿ ನನ್ನ ಕಕ್ಷಿಧಾರನ ಮನಸ್ಸನ್ನು ಘಾಸಿ ಗೊಳಿಸಿದ್ದಾಳೆ. ಪುರಷತ್ವದ ಬಗ್ಗೆ ಕೈ ಸನ್ಹಿಸಿ ಪ್ರಚೋದಿಸಿ ಈ ಕೃತ್ಯವನ್ನು ಎಸಗಲು ಸಹಕಾರಿಯಾಗಿದ್ದಾಳೆ ಮಹಾ ಸ್ವಾಮಿ.)
“My lord, diseased lured my client with sexual guestures through eyes which prompted to commit the act, I plead his innocnece my lord”
ಮಹಾ ಸ್ವಾಮಿ, ಅಪರಾಧಿ ಅಪರಾಧಿಯಲ್ಲ. ಇವನು ಮುಗ್ದ. ಆಕೆಯ ಹಾವ, ಭಾವ ಮತ್ತು ತನ್ನ ಕಣ್ಣಿನ ಸಂಜ್ಞೆಯಿಂದ ನನ್ನ ಕಕ್ಷಿಧಾರನನ್ನು ಪ್ರಚೋದಿಸಿದ್ದಾಳೆ ಮಹಾ ಸ್ವಾಮಿ. .
ಓದುಗರೆ… ಈ ಎರಡು ಪ್ರಕರಣಗಳಲ್ಲಿ ಅಪರಾಧಿಗಳ ಪರ ವಕಾಲತ್ತು ವಹಿಸಿದ್ದ ವಕೀಲರ ವಾದ “ನಾನ್ ರ್ಬಲ್ ಕಮ್ಯೂನಿಕೆಷನ್ ((non verbal communication” ಅಂದರೆ ಮಾತಿಲ್ಲದ ಶರೀರ ಸಂಜ್ಞೆ ವಿನಿಮಯವೇ ಮುಖ್ಯವಾಗಿತ್ತು. ವರ್ತಮಾನದ ವ್ಯವಹಾರ ಹಾಗು ವಾಣಿಜ್ಯ ವ್ಯವಸ್ಥೆ ಆ ಪ್ರಾಂತ್ಯದ ಭಾಷೆಯ ಮೂಲಕವೆ ಆಗಿರುತ್ತದೆ. ನಮ್ಮ ಭಾವನೆ, ಯೋಚನೆ, ಇಚ್ಚೆಗಳು, ಕಾರ್ಯಗೆಳಲ್ಲವು ಮತ್ತೊಬ್ಬರಿಗೆ ತಿಳಿಸಲು ಭಾಷೆ ಬಹು ಉಪಕಾರಿ. ನಾವೆಲ್ಲರು ಸಮಾಜ ಜೀವಿಗಳು. ಈ ಭಾಷೆಯ ಮೂಲಕವೆ ನಮ್ಮ ವ್ಯಕ್ತಿತ್ವ ಅವಲಂಬಿಸಿರುಸುತ್ತೆ. ಮಾತನಾಡುವದು ಮತ್ತು ನಡವಳಿಕೆಗಳು ಎರೆಡೂ ಸಹ ಮಾನವನಲ್ಲಿ ಸದಾ ಸಹಕರಿಸ ಬೇಕಾಗತ್ತದೆ, ಇಲ್ಲದೆ ಇದ್ದ ಪಕ್ಷದಲ್ಲಿ ಮಾನವನು ಮನೋ ವಿಕಲ್ಪ ಹಾಗೂ ನ್ಯೂನತೆಗಳಿಗೆ ಒಳಗಾಗುವನು.
ಭಾಷೆ ಹಳೆಯದಲ್ಲ, ಹಿಂದೆ ಮಾನವನ ನಡುವಳಿಕೆಗಳು ಮೂಕ ಭಾಷೆಗಳಿಂದ ಕೂಡಿತ್ತು ಅಥವ ಆಗಿತ್ತು, ಆದರೆ ಮಾನವನು ಬೆಳದೆಂತಲ್ಲಾ ಭಾಷೆ ಮಾತಾಗಿ ರೂಪುಗೊಂಡು ತನ್ನ ಮಾನವೀಯತೆಗೆ ಸಹಕಾರಿಯಾಗಿದೆ. ಯೋಚನೆ ಮತ್ತು ನಮ್ಮ ಮಾತು ಯಾವಗಲೂ ಸಹಮತ ಹೊಂದಿರಬೇಕು. ಇಲ್ಲವಾದರೆ ಮಾನವ ಸಹಜವಾಗಿ ಸಮಾಜ ಮುಖಿಯಾಗಲು ಕಷ್ಟವಾದೀತು. ಈ ಭಾಷಾ ನಿಯಂತ್ರಣ ಹಾಗು ನಿಪುಣತೆ ಮೆದುಳಿನ ಫೊರ್ ಬ್ರೈನ್ (fore brain and Broaca’s area) ಬೆಳವಣಿಗೆ ಮತ್ತು ತನ್ನ ನರ ರಚನೆ.

ನರ ಸಂವೇದನಾಶೀಲನೆ ಹಾಗು ನರ ಭೌತ ರಸಾಯನಿಕ ನಿರ್ದಿಷ್ಟ ಕಾರ್ಯ ಪ್ರವೃತ್ತಿಗಳನ್ನ ಒಳಗೊಂಡಿರುತ್ತದೆ. ಮಾನವನ ಪಂಚೇಂದ್ರಿಯಗಳ ಮೂಲಕ ಪ್ರಚೋದನೆಗೆ ಒಳಗಾದ ಸಂವೇದನೆಗಳು ನರ ಕೋಶಗಳ ಮೂಲಕ ಮಿದುಳಿನ ನರ ಕೇಂದ್ರ ಪುಂಜ ಹಾಗು ಮಂಡಲಗಳಿಗೆ ರವಾನಿಸಿ ಬಂದ ಸಂಜ್ಞೆಗಳನ್ನು ಮಾನವನಿಗೆ ಅರಿಯದೆ ಅತ್ಯಂತ ವೇಗದಲ್ಲಿ ಪರಷ್ಕರಿಸಿ, ಜೋಡಿಸಿ, ಸಂರಕ್ಷಿಸಿ ಬೇಕೆಂದಾಗ ಯೋಚನೆ, ವಿಚಾರ, ಭಾವನೆಗಳನ್ನ ಸಂಜ್ಞೆಗಳ ಮೂಲಕ ಮಿದುಳಿನ ಕೋಶಕ್ಕೆ ಕಳಸಿ, ಬಾಯಿ ಹಾಗು ನಾಲಿಗೆ ಮತ್ತು ನಮ್ಮ ಪುಪ್ಪಸದಿಂದ ಹೊರ ಬರುವ ಗಾಳಿಯ ಮುಕಾಂತರ ಭಾಷೆಯಾಗಿ ಪರಿವರ್ತನೆಗೊಂಡು ಮತ್ತೊಬ್ಬರಿಗೆ ತಮ್ಮ ಮಾತಿನ ಸಾಮರ್ಥ್ಯದಿಂದ ತಿಳಿಸಿಲಾಗುವದು. ಹೀಗಿದ್ದಾಗ ಭಾಷೆಯಲ್ಲಿ ಎರೆಡು ವಿಧ, ಒಂದು ಮಾತನಾಡಿ ತಿಳಿಸುವದು, ಇನ್ನೊಂದು ಮಾತನಾಡದೆ ತಿಳಿಸುವುದು. ಮಾತನಾಡಿದರೆ ಅರ್ಥವನ್ನು ಮಾಡಿಕೊಳ್ಳಬಹುದು, ಮಾತನಾಡದೆ ಹೊರ ಸೂಸುವ ಭಾಷೆಗೆ ಅರ್ಥ ಹುಡಕಲು ಸಾಮನ್ಯವಾಗಿ ಸಾದ್ಯವಾಗುವುದಿಲ್ಲ. ಆದುದರಿಂದ ಮಾತನಾಡದೆ ಇರುವ ಭಾಷೆ ತೀರ ಆಘಾತಕಾರಿ ಹಾಗು ಅಚಾತುರ್ಯದ ಪರಮಾವದಿ. ಇದರಿಂದಾಗಿ ಮಾನವ ಸಂಘರ್ಷಗಳಿಗೆ ಕೆಟ್ಟ ಹಾವ-ಭಾವ, ಸಂಜ್ಞೆಗಳು ಸಹಾ ಮೂಲ ಕಾರಣಳಾಗಬಹುದು. “ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ” ಗಾದೆ ಹಾಗೂ “ಆಚಾರವಿಲ್ಲದ ನಾಲಿಗೆ…” ಪದ ಇಲ್ಲಿ ಸಮಂಜಸವಲ್ಲವೆ?.
ನಮ್ಮ ಕಣ್ಣು, ಶರೀರ ಮತ್ತು ಇತರೆ ಅಂಗಗಳೆೆಲ್ಲವುಗಳಿಂದ ಮಾತಿಲ್ಲದೆ ಭಾಷಿಕರಿಸಬಹುದು. ಆದುದರಿಂದ ನಮ್ಮ ನಡತೆ ಅತ್ಯಮೂಲ್ಯ. ಮಾತನಾಡಿದ್ದಕ್ಕೆ ಸಾಕ್ಷಿ ಒದಿಗಿಸಬಹುದು, ಆದರೆ ನಾನು ಇಲ್ಲಿ ತಿಳಿಸಿದ ಭಾಷೆಗೆ ಯಾವುದೆ ಸಾಕ್ಷಿಯನ್ನು ಒದಿಗಿಸಲು ಸಾದ್ಯವಿಲ್ಲ. ಇಲ್ಲಿ ಆತ್ಮಸಾಕ್ಷಿಯೇ ನಿಜವಾದ ಸಾಕ್ಷಿ. ಪರಮ ಸಂತ ಪತಂಜಲಿಯು ಮೂರುವರೆ ಸಾವಿರ ವರ್ಷಗಳ ಹಿಂದಯೇ ತನ್ನ ಸೂತ್ರದಲ್ಲಿ ಈ ಆತ್ಮಸಾಕ್ಷಿಯನ್ನು ಉಲ್ಲೇಕಿಸಿರುವರು. ಇದನ್ನು ಸರಿಯಾದ ರೀತಿಯಲ್ಲಿ ನೆರವೇರಿಸಿದರೆ ಅನೇಕ ಅನಾಹುತಗಳನ್ನು ತಡೆಗಟ್ಟಬಹುದು.
ಅಂಗಾಂಗಳ ಪ್ರದರ್ಶನ, ಮೂತಿ ತಿರುಗಿಸುವದು, ಹೂಂಕರಿಸುವದು, ಕೈ ಕಾಲುಗಳನ್ನು ಕೆಟ್ಟ ರೀತಿಯಲ್ಲಿ ತೋರಿಸುವದು, ಕಣ್ಣು ಮಿಟುಕಿಸುವುದು, ಗುಪ್ತಾಂಗಗಳನ್ನು ಪ್ರದರ್ಶಿಸುವದು ಇವುಗಳಲ್ಲೆವು ನಾನು ತಿಳಿಸಿದ ಭಾಷೆಯಾಗಿರುತ್ತವೆ. ಈ ಭಾಷೆ ಮಾತಿನ ಭಾಷೆಗಿಂತ ಶಕ್ತಿಶಾಲಿಯಾಗಿರುತ್ತದೆ. ಇಂತಹ ಸಂಕೇತಗಳಿಂದ ಕೆಲವು ವೇಳೆ ಅತಿಯಾದ ಕೋಪದಿಂದ ಹತ್ಯೆ ನಡೆಯಬಹುದು ಮತ್ತು ಮನಿಸ್ಸಿನ ಸೂಕ್ಷ್ಮ ವೇದನೆಗೆ ಗುರಿಯಾಗಿ ಆತ್ಮಹತ್ಯೆಯಂತಹ ದುರ್ಘಟನೆಗಳು ನಡೆಯಬಹುದು.
ಅಪರಾಧ ಕೃತ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಪರಿಶೀಲಿಸುವ ಪ್ರಕ್ರಿಯೆಯನ್ನು “ಮಾನಸಿಕ ಪಂಚನಾಮ (psychological postmortem))” ಎಂದು ಕರೆಯಾಲಾಗುವದು. ನಮ್ಮ ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಉದಾಸಿನತೆಯಿಂದಲೋ ಏನೊ ಸಾಕಷ್ಟು ನ್ಯಾಯಲಯಗಳಲ್ಲಿ ತೀರ್ಪು ಶೀಘ್ರವಾಗಿ ನಡಯುತ್ತಿಲ್ಲ. ಆದುದಿರಿಂದಲೆ “ಸೋತವನು ಸತ್ತ, ಗೆದ್ದವನು ಸೋತ” ಗಾದೆ ಪ್ರಚಲಿತವಾಗಿರುವುದು. ಸರಕಾರ, ಅರಕ್ಷಕ, ಕಾನೂನು, ರಾಜಿಕೀಯ ವ್ಯವಸ್ಥೆಗಳು ಮನೋವಿಜ್ಞಾನ, ಸಮಾಜಶಾಶ್ತç, ಮಾಹಿತಿ ತಂತ್ರಗಾರರ ಜೊತೆ ಕೈ ಜೊಡಿಸಿದರೆ ತ್ವರಿತ ಗತಿಯಲ್ಲಿ ನ್ಯಾಯ ಕೊಡಿಸಬಹುದಲ್ಲವೇ? ಇದರಿಂದ ಅನೇಕ ಮುಗ್ದರ ಮಾರಣ ಹೋಮ ನಿಯಂತ್ರಿಸಬಹುದಲ್ಲವೆ?
“ಏರು ಧ್ವನಿ, ಅಪಹಾಸ್ಯ, ಕೊಂಕುನುಡಿ ಹಾಗೂ ಕುಚೋದ್ಯಗಳನ್ನು ಮಾಡದಿರೀ ಓದುಗರೆ”.
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


[…] ಆಂಗಿಕ ಭಾಷೆ […]