ಮುಂಬೈ :-ಟೀಂ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದ ಶಿಖರ್ ಧವನ್ ಬಳಿಕ ಹೊಸ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದರು. ಇದೀಗ ತನ್ನ ಹೊಸ ಗೆಳತಿಯನ್ನು ಶಿಖರ್ ಧವನ್ ಪರಿಚಯಿಸಿದ್ದಾರೆ
ಶಿಖರ್ ಧವನ್ ಅವರು ರಿಲೇಶನ್ ಶಿಪ್ ವಿಚಾರವನ್ನು ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ. ಇತ್ತೀಚಿನ ವಾರಗಳಲ್ಲಿ ಹಲವೆಡೆ ಕಾಣಿಸಿಕೊಂಡಿದ್ದ ಸೋಫಿ ಶೈನ್ ಅವರೊಂದಿಗಿನ ಪೋಸ್ಟ್ ಹಂಚಿಕೊಂಡು, “ನನ್ನ ಹೃದಯ (ಎಮೋಜಿ)” ಎಂಬ ಶೀರ್ಷಿಕೆಯೊಂದಿಗೆ ಘೋಷಣೆ ಮಾಡಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ, ಶಿಖರ್ ಧವನ್ ಮತ್ತು ಸೋಫಿ ಶೈನ್ ಅವರ ಫೋಟೋ ವೈರಲ್ ಆಗಿತ್ತು.
ಸೋಫಿ ಶೈನ್ ಅವರು ಐರ್ಲೆಂಡ್ ನವರಾಗಿದ್ದು, ಶಿಖರ್ ಧವನ್ ಮತ್ತು ಸೋಫಿ ಕಳೆದ ವರ್ಷ ಒಟ್ಟಿಗೆ ಕಾಣಿಸಿಕೊಂಡಿದ್ದರು. ನವೆಂಬರ್ 2024 ರಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಮುಂಚೆಯೇ, ಇಬ್ಬರೂ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಸೋಫಿ 44 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಸೋಫಿ ಶೈನ್ ಸದ್ಯ ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೋರೇಶನ್ ಗಾಗಿ ಉತ್ಪನ್ನ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
