ಈಗಿನ ಒತ್ತಡದ ಬದುಕಿನಲ್ಲಿ ವಿಶ್ರಾಂತಿ ಸಿಕ್ಕಿದ್ರೆ ಸಾಕಪ್ಪ ಎನ್ನುವಂತಾಗಿದೆ. ಆಗಿನ ಕಾಲದಲ್ಲಿ ಬೆಳಗ್ಗೆ ಬೇಗ ಎದ್ದು, ತಮ್ಮ ಕೆಲಸಗಳನ್ನ ಶುರು ಮಾಡ್ತಾ ಇದ್ರು. ಹೊತ್ತೊತ್ತಿಗೆ ತಿಂದು, ಹೊತ್ತೊತ್ತಿಗೆ ಕಣ್ತುಂಬ ನಿದ್ದೆ ಮಾಡ್ತಾ ಇದ್ದರು. ಕೃಷಿಯಿಂದಾನೋ, ಕೆಲಸದಿಂದಾನೋ ಬರ್ತಾ ಇದ್ದಂತ ಮೂರು ಕಾಸು ಅಂದಿನ ಕಾಲದವರಿಗೆ ಸಾಕಾಗಿತ್ತು.
ಆದ್ರೆ ಈಗ ಹಾಗಲ್ಲ. ದುಡ್ಡಿನ ಹಿಂದೆ ಓಡುತ್ತಾ, ಆರೋಗ್ಯವನ್ನೇ ಮರೆತಿದ್ದೀವಿ. ಅದರಲ್ಲೂ ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಅದನ್ನ ತಂಪು ಮಾಡಿಕೊಳ್ಳುವ ಉಸಾಬರಿಗೂ ಹೋಗಲ್ಲ. ಅದರಿಂದ ಕಣ್ಣುರಿ, ಮೂತ್ರ ಮಾಡೋದಕ್ಕೂ ಕಷ್ಟ, ಪಾದವಂತೂ ಪದ ಹೇಳ್ತಾ ಇರುತ್ತೆ. ಹೀಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಅದಕ್ಕೆಲ್ಲ ಕಾರಣ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿರೋದು.
ಹೀಟ್ ಆಗಿರುವಂತ ಬಾಡಿ ಬೇಗನೇ ತಂಪಾಗಬೇಕು ಅಂದ್ರೆ ಅದಕ್ಕೆ ಗೋಂದು ಬೇಗನೆ ಪರಿಹಾರವನ್ನು ನೀಡುತ್ತದೆ. ನಿಮಗೆ ಹೊರಗೆ ಗೋಂದು ಸಿಗುತ್ತದೆ. ಅದನ್ನ ಸ್ವಲ್ಪೇ ಸ್ವಲ್ಪ ತಗೊಂಡು, ಅದಕ್ಕೆ ನೀರು ಬೆರೆಸಿ ನೆನೆಯಲು ಬಿಡಿ. ಮೂರ್ನಾಲ್ಕು ಗಂಟೆಗಳ ಬಳಿಕ ಅದು ಜಲ್ಲಿ ಜಲ್ಲಿ ಟೈಪ್ ಆಗುತ್ತದೆ. ಅದನ್ನ ತೆಗೆದುಕೊಂಡು ಮಜ್ಜಿಗೆಗೆ ಹಾಕಿ ಕುಡಿಯಿರಿ. ಮಜ್ಜಿಗೆ ಇಲ್ಲದೆ ಹೋದರೆ ನೀರಿನಲ್ಲಿ ಬೇಕಾದರೂ ಹಾಕಿ ಕುಡಿಯಿರಿ. ಬಾಡಿ ಬೇಗನೆ ತಂಪಾಗುತ್ತದೆ.
ಈ ಗೋಂದಲ್ಲಿ ಕ್ಯಾಲ್ಸಿಯಂ ಹಾಗೂ ಫೈಬರ್ ಅಂಶ ಜಾಸ್ತಿ ಇರುವ ಕಾರಣ ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆ ಇದ್ದರು ದೂರವಾಗುತ್ತದೆ. ಅಷ್ಟೇ ಅಲ್ಲ ಮೂಳೆ ಕೂಡ ಸ್ಟ್ರಾಂಗ್ ಆಗುತ್ತೆ. ಹೀಗಾಗಿ ಒಂದೇ ಪದಾರ್ಥದಿಂದ ಹಲವು ರೋಗಗಳಿಗೆ ಪರಿಹಾರ ಸಿಗುತ್ತೆ ಅನ್ನೋದಾದ್ರೆ ಸೇವಿಸುವುದು ಉತ್ತಮ ಅಲ್ವೆ.

[…] ದೇಹ ಸಿಕ್ಕಾಪಟ್ಟೆ ಹೀಟ್ ಆಗಿದ್ಯಾ..? ಕಣ್ಣುರ… […]