
ಬಾಳಿಗೊಂದು
ನಕ್ಷೆಯ ಗೀಚಲು..
ಬಾಳ್ವೆಗೊಂದು
ಗುರಿಯ ತೋರಲು..
ಮಡದಿಯು ಬೇಕು
ಅವಳ ಸಂಗಡ ಇರಬೇಕು..!!
ಮನಸ್ಸಿಗಿಷ್ಟು
ಪ್ರೀತಿಯ ತಿಳಿಸಲು..
ಮೌನಕ್ಕಷ್ಟು
ಮಾತು ಕಲಿಸಲು..
ಮಡದಿಯು ಬೇಕು
ಅವಳೊಂದಿಗೆ ಸಾಗಬೇಕು..!!
ಏಕಾಂತದ
ಬಂಧನವ ಬಿಡಿಸಲು..
ಅರೆ ನಿದ್ರೆಗೆ
ರೋಮಾಂಚನವ ನೀಡಲು..
ಮಡದಿಯು ಬೇಕು
ಅವಳನ್ನೊಮ್ಮೆ ಅಪ್ಪಬೇಕು..!!
ಏತಕ್ಕಾಗಿ ಈ ಯೌವನ
ಅವಳಿಗೊಸ್ಕರ ಅಲ್ಲವೇ..
ಏತಕ್ಕಾಗಿ ಈ ಜೀವನ
ಅವಳ ಬರುವಿಕೆಗಾಗಿ ಅಲ್ಲವೇ..!!
–ಅಪರಿಚಿತ ಮೌನಿ