ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾರ್ಯಕ್ಕೆ 30 ಲಕ್ಷ ರೂ ಸಿಎಂ ವಿಶೇಷ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆ ಅವೈಜ್ಞಾನಿಕ ಎಂದು ಗ್ರಾಮಸ್ಥರು ಆರೋಪಿಸಿ ಸಂಬಂಧಪಟ್ಟ ಅಧಿಕಾರಿ ಹಾಗೂ ಗುತ್ತಿಗೆದಾರನ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಗ್ರಾಮದಲ್ಲಿ ಗ್ರಾಮಸ್ಥರ ಜೊತೆಗೂಡಿ ಪ್ರತಿಭಟನೆ ನಡೆಸಿ ಮಾತನಾಡಿದ ಗ್ರಾ.ಪಂ ಮಾಜಿ ಸದಸ್ಯ ಮಲ್ಲೇಶ್ ನಮ್ಮ ಗ್ರಾಮದ ಅವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಮಾಡಿದ ಮೇರೆಗೆ ಅವರ ವಿಶೇಷ ಅನುದಾನದಲ್ಲಿ 30. ಲಕ್ಷರೂ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ ಅದರಂತೆ ನಮ್ಮ ಗ್ರಾಮದ ಪ್ರಮುಖ ಬೀದಿಗಳಿಗೆ ಸಿಮೆಂಟ್ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ ಆದರೆ ಅದು ನಮ್ಮ ಗ್ರಾಮದ ಜನರಿಗೆ ಸದ್ಬಳಕೆ ಹಾಗುವ ಮುನ್ನವೇ ಗುತ್ತಿಗೆದಾರನ ಹಣದಾಸೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಾಮಗಾರಿ ನಡೆದ ವಾರಕ್ಕೆ ಸಿ.ಸಿ ರಸ್ತೆಗಳು ಬಿರುಕು ಬಿಟ್ಟು ಅದ್ವಾನ ವ್ಯವಸ್ಥೆಗೆ ತಲುಪಿದೆ ಅದಲ್ಲದೆ ನೀಲಿ ನಕ್ಷೆಯಂತೆ ಚರಂಡಿಗಳನ್ನು ನಿರ್ಮಿಸಿದೆ ಅವೈಜ್ಞಾನಿಕವಾಗಿ ರಸ್ತೆಗಳಿಗೆ ಚರಂಡಿ ನಿರ್ಮಿಸಿ ಪರಿಣಾಮ ಆ ಗುಂಡಿಗಳಿಗೆ ನಮ್ಮ ಗ್ರಾಮದ ವಯೋವೃಧ ಜನರು ಹಾಗೂ ಜಾನುವಾರಗಳ ಬಿದ್ದು ಗಾಯಗೊಂಡಿದೆ ಇದರ ಬಗ್ಗೆ ಸಂಬಂಧಪಟ್ಟ ಸಹಾಯಕ ಇಂಜಿನಿಯರ್ ಜ್ಯೋತಿರಾಣಿಗೆ ಹಲವು ಬಾರಿ ಮನವಿ ಮಾಡಿದರು ಕ್ಯಾರೆ ಎನ್ನದೆ ಗುತ್ತಿಗೆದಾರ ಜೈನಹಳ್ಳಿ ದಿನೇಶ್ ಕೈಗೊಂಬೆಯಾಗಿ ಕಣ್ಮುಚ್ಚಿ ಕುಳಿತಿದ್ದಾರೆ.

ಹಣದಾಸೆಗೆ ಕಳಪೆ ಕಾಮಗಾರಿಯಾದರೂ ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರನ ಅಸಡ್ಡೆಗೆ ಬೇಸತ್ತು ಗ್ರಾಮಸ್ಥರೇ ತಮ್ಮ ಮನೆಯ ಮುಂದೆ ತಾವೇ ನೀರು ಹಾಕಿ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ಮಹಾದಾಸೆಯ ವಿಶೇಷ ಅನುದಾನ ಸದ್ಬಳಕೆ ಆಗದೆ ಹಳ್ಳ ಹಿಡಿಯುತ್ತದೆ ಇದಕ್ಕೆ ಕಾರಣಕರ್ತರಾದ ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಜಿಲ್ಲಾ ಮತ್ತು ತಾಲೂಕು ಕಚೇರಿಯ ಮುಂದೆ ನಮ್ಮ ಊರಿನ ಗ್ರಾಮಸ್ಥರು ಉಗ್ರ ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ಬಳಿಕ ಮಾತನಾಡಿದ ಗ್ರಾ.ಪಂ ಉಪಾಧ್ಯಕ್ಷ ಪ್ರಕಾಶ್ ನಮ್ಮ ಗ್ರಾಮದಲ್ಲಿ ಕಾಮಗಾರಿ ನಡೆಯುತ್ತಿರುವುದ ನಿಜಕ್ಕೂ ಸಂತಸ ತಂದಿದೆ ಆದರೆ ಗುತ್ತಿಗೆದಾರರ ಹಣದಾಸೆಗೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜನರಿಗೆ ಬಳಕೆ ಆಗಬೇಕಿದ್ದ ಕಾಮಗಾರಿ ವಾರಕ್ಕೆ ಅದ್ವಾನ ವ್ಯವಸ್ಥೆ ತಲುಪಿದೆ, ತಪ್ಪಿಸಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ್, ಗ್ರಾಮದ ಹಿರಿಯ ಮುಖಂಡ ಸ್ವಾಮಿಗೌಡ, ಮಂಜೇಗೌಡ, ದೊಡ್ಡೆಗೌಡ, ಪ್ರಕಾಶ್,ಚಿಕ್ಕೇಗೌಡ, ರಮೇಶ್, ಮಾದೇವ, ಮೋಹನ್,ಹಿರೇಗೌಡ, ಚಂದ್ರೆಗೌಡ, ಕರೀಗೌಡ ದೇವೇಗೌಡ, ಜವರಮ್ಮ, ಲೀಲಾವತಿ, ಪುಟ್ಟಲಕ್ಷ್ಮಿ,ರಾಜೇಗೌಡ,ನಂಗೇಗೌ,ಕುಮಾರ್,ರಮೇಶ್, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
