ಮಾನವ ಪುರುಷೋತ್ತಮ್ಮನಾಗಲು ಸಹ ಧರ್ಮ ಅತ್ಯಗತ್ಯ. ಅಂತಹ ಸಹ ಧರ್ಮಗಳಲ್ಲಿ ಒಂದಾದ ಧರ್ಮ, ಅತಿಮುಖ್ಯವಾದ ಅಂಶ “ಸ್ನೇಹ” ಸಂಬಂಧ. ಸಾಮಾಜಿಕ ಜೀವನದಲ್ಲಿ ಬುದ್ದಿ ಜೀವಿ ಯಾವತ್ತು ಸಹ ಜೀವಿ. ಈ ಕಾರಣದಿಂದ ಸ್ನೇಹಾನುಬಂಧ ಅತಿ ಶ್ರೇಷ್ಟ. ನನ್ನ ಖಾಸಗಿ ವೃತ್ತಿಯನ್ನು ಶುರು ಮಾಡಿದಾಗ ನನ್ನ ಸ್ನೇಹಿತರ ಪಾತ್ರಗಳು ಅತ್ಯಮೂಲ್ಯ ಮತ್ತು ಮರೆಯುವಹಾಗಿಲ್ಲ. ಆದುದರಿಂದ ನಾನು ಅವರಿಗೆಲ್ಲ ತುಂಬು ಹೃದಯದ ಪ್ರಣಾಮಗಳನ್ನು ಅರ್ಪಿಸುತ್ತೇನೆ.
ಇಷ್ಟಲ್ಲದೆ ನನ್ನ ಇಂದಿನ ಪ್ರವೃತ್ತಿಗೆ, ನನ್ನ ಜ್ಞಾನ ಬಂಡಾರ ತುಂಬಲು ಸ್ನೇಹತರಿಂದ ಗಳಿಸಿದ ವಿಚಾರಧಾರೆಗಳ ವಿನಮಯ, ತರ್ಕಾ ಪ್ರವೃತ್ತಿ, ವೈಜ್ಞಾನಿಕ ವಿಷಯಗಳೆಲ್ಲವು ಸಹಕಾರಿಯಾಗಿದೆ. ಈ ಕಾರಣದಿಂದಲ್ಲವೆ ಒಳ್ಳೆಯ ಸ್ನೇಹಿತರನ್ನು ಪಡೆಯಬೇಕೆನ್ನುವದು. ಓದುಗರೆ ಸ್ನೇಹ ನೌಕೆಯಲ್ಲಿ ಮಿತ್ರರು ಪಯಣಿಸುವಾಗ ಆ ಹಗರುತನ, ನಿಹಂಭಾವ, ಸಹದೈರ್ಯಾನುಭವ ಹಾಗು ಸ್ವತಂತ್ರತೆಯನ್ನು ಯಾವುದೇ ಬಂಧನದ ನೌಕೆಯಲ್ಲಿ ಸಿಗಲಾರದು.
ದಾನಗಳಲ್ಲಿ ಅತಿ ಶ್ರೇಷ್ಟ ದಾನ ವಿದ್ಯಾದಾನ ಹೇಗೊ ಹಾಗೆಯೆ ಸ್ನೇಹ, ಭಾವ ಬಂಧನಗಳಲ್ಲಿ ಅಷ್ಟೇ ಶ್ರೇಷ್ಟ. ಮಿತ್ರ ಸಂಬಂಧವನ್ನು ಹೊರೆತು ಪಡಿಸಿ ಇತರೆ ಸಂಬಂಧಗಳಲ್ಲಿ ಹಂಗು, ಒತ್ತಡ, ಅಹಂಕಾರ, ನಿಷ್ಟೆಗಳ ದುರ್ಬಳಕೆ, ದಬ್ಬಾಳಿಕೆ ಹಾಗು ಅನೇಕ ತರಹದ ನಕಾರಾತ್ಮಕ ಭಾವನೆಗಳು ವ್ಯಕ್ತವಾಗುತ್ತವೆ ಆದರೆ ಸ್ನೇಹದ ವಿಚಾರದಲ್ಲಿ ಇವೆಲ್ಲವು ಔಪಚಾರಿಕೆಗಳಷ್ಟೆ. ಅಂದರೆ ಈ ಸಂಬಂಧದ ಬೆಸುಗೆ ಅಜರಾಮರ ಮತ್ತು ಒಂದು ತರಹದ araldite ಇದ್ದಂತೆ. ಇಲ್ಲಿ ಯಾವುದೆ ತರಹದ ಮೇಲು ಕೀಳೆಂಬ ಭಾವನೆಗಳು ಇರುವುದಿಲ್ಲ, ಕಟ್ಟುಪಾಡುಗಳು ಕಾಣುವುದಿಲ್ಲ, ಧರ್ಮ, ಜಾತಿ, ಪಂಥ ಹಾಗು ಅಂತಸ್ತುಗಳು ಇರುವುದಿಲ್ಲ. ಈ ಕಾರಣದಿಂದಲೊ ಎನೋ ಪೊಷಕರ ಹಿತನುಡಿ ಮಕ್ಕಳಿಗೆ ಅಪಸ್ವರವಾಗುತ್ತೆ ಆದರೆ ಅದೇ ನುಡಿ ಸ್ನೇಹಿತರಿಂದ ಬಂದರೆ ಹಿತವೆನ್ನಿಸಿಕೊಳ್ಳುತ್ತೆ. “ಹಿತ್ತಲ ಗಿಡ ಮದ್ದಲ್ಲ” ಎನ್ನೊ ಗಾದೆ ಇದರಿಂದ ಉದ್ಭವಿಸಿರಬಹುದೆಂಬುದು ನನ್ನ ಅನಿಸಿಕೆ.
ವೈರುತ್ಯವೊ ಅಥವ ತದ್ವಿರುದ್ದವೊ ತಿಳಿಯದು, ನೆನಪಿರಲಿ, ಈ ಸ್ನೇಹ ಸರಪಳಿ ಸಡಿಲವಾದದ್ದು. ಯಾವತ್ತಿದ್ದರು ಕಳಚಿಕೊಳ್ಳುವಂತಾದ್ದು. ಮನುಷ್ಯನಿಗೆ ಈ ಸರಪಳಿ ಕಳಚಿ ಮನಸ್ಸಿಗೆ ನೊವ್ವಾದರು ಅತಿಯಾಗಿ ಮನಸ್ಸನ್ನು ಘಾಸಿಸುವುದಿಲ್ಲ, ಅದರೆ ಅದೇ ವಂಶವಾಹಿನಿ ಒಳಗೊಂಡ ಸಂಬಂಧಗಳು ಕಳಚಿದರೆ ಅತೀವ ಮನೋ ವೇದೆನಗಳಾಗುವುದು. ಉದಾಹರಣೆಗೆ ತಂದೆ ಹಾಗು ಮಗನ ಸಂಬಂಧ. ಇಬ್ಬರು ಜೀವ ಇರೊವರಿಗೂ ಕಾದಡುತ್ತಿರುತ್ತಾರೆ, ಕಳಚಿ ಕೊಂಡಾಗ ದುಖಃತಪ್ತರಾಗುತ್ತಾರೆ. ಹಾಗೆಯೆ ಗಂಡ ಹೆಂಡಿರ ಸಂಬಂಧ ಮತ್ತು ಪ್ರೇಮಿಗಳ ಸಂಬಂಧ. ಇಂತಹ ವಿಶೇಷ ವಿಚಾರಗಳನ್ನ ನನ್ನ ಮೊದಲನೆ “ಮನಸ್ಸು ಮಂದಾರ” ಪುಸ್ತಕದಲ್ಲಿ ಸೂಕ್ಷ್ಮವಾಗಿ ತಿಳಿಸಿರುವೆನು.
ವೇದಾಂತದಲ್ಲಿ ದಾಂಪತ್ಯವು ಸ್ನೇಹವಾಗಿದ್ದರೆ ಮತ್ತು ಕ್ಷಮಯೇ ಪ್ರಧಾನವಾಗಿದ್ದರೆ ಎಂದಾದರೂ ಬೇರ್ಪಟ್ಟರೆ ಮನಸ್ಸಿಗೆ ನೋವಾಗುವುದು ಸಹಜ ಕ್ರಿಯೆ. ಅರ್ಥವನ್ನೇ ಮಾಡಿಕೊಳ್ಳದಂತ ದಾಂಪತ್ಯ ಜೀವನದಲ್ಲಿ ಅಕಸ್ಮಾತ್ ಬಿರುಕು ಉಂಟಾದಾಗ
grief ಜೊತೆಯಲ್ಲಿ guilt ಎಂಬ ಗೀಳಿಗೆ ಒಳಗಾಗಿ ಅತೀವ ಖಿನ್ನತೆಗೆ ಅಥವ ಮನೋ ವಿಕಲ್ಪಕ್ಕೆ ಗುರಿಯಾಗುತ್ತಾರೆ. ಇದನ್ನೆ ಮನೊ ವಿಜ್ಞಾನದಲ್ಲಿ love and hate relationship ಎಂದು ಕರೆಯುತ್ತಾರೆ. ಆದುದರಿಂದಲೆ ಪ್ರೇಮವನ್ನು ಪವಿತ್ರವಾದ ಪ್ರೀತಿಯಲ್ಲೇ ಕಾಣಬೇಕೆ ಹೊರತು ಕಾಮ ಕೇಳಿ ರೂಪದಲ್ಲಿ ನೋಡಬಾರದು.
ಈ grief, ಮನೊ ವಿಕಲ್ಪದ ಲಕ್ಷಣಗಳು ಅಥವ ಚಿನ್ಹೆಗಳು ಬೇರೆ ಖಿನ್ನತೆಗಳಿಗೆ ಹೊಲಿಸಿದರೆ ವಿಬಿನ್ನವಾಗಿ ತೊರುವುದು. ಅಳುವದೇ ಇರುವುದು, ಸದಾ ಭಾವ ಚಿತ್ರಗಳನ್ನು ಹಾಗು ಬಳಿಸಿದ ವಸ್ತುಗಳನ್ನು ನೋಡಬಯಸುವುದು ಹಾಗು ಆ ವಸ್ತುಗಳನ್ನು ಹತ್ತಿರ ಇರಸಿಕೊಳ್ಳುವುದು ಮತ್ತು ನನೆಪಿನ ಚಿತ್ರಗಳು ಗೀಳಿನಂತೆ ಮನಸ್ಸನ್ನು ಆವರಿಸುವುದು.
ಅಸ್ತಂಗತರಾದ ಒಬ್ಬ ಮಿತ್ರರು ಪದೆ ಪದೆ ನೆನಪಿಗೆ ಬರುತ್ತಾರೆ. ನಚಿಕೇತರಂತೆ ಇದ್ದ ಅವರು ತಮ್ಮ ಸೇವೆಯನ್ನು ತಾಯಿಗೆ ಮುಡಪಿಟ್ಟಿದ್ದರು. ಅವರಿಗೆ ಮಿತ್ರನಿಷ್ಟೆ ಎಷ್ಟಿತ್ತಂದರೆ ಅವರ ಮನೆಗೆ ತಲುಪುವ ಮುನ್ನ ನನ್ನ ಚಿಕಿತ್ಸಾಲಯಕ್ಕೆ ಬಂದು ಎಲ್ಲರನ್ನು ವಿಚಾರಿಸಿ ಟೀ ಕುಡಿದು ಹೋಗುತ್ತಿದ್ದರು. ತಾಯಿಯ ಅಗಲಿಕೆಯನ್ನು ಆ ಮಿತ್ರರು ಒಂದು ಕಿಂಚಿತ್ತು ದುಖಃವನ್ನು ತೋರುತ್ತಿರಲಿಲ್ಲ. ಕೆಲವು ತಿಂಗಳುಗಳ ನಂತರ ಇವರು ನನ್ನ ಚಿಕಿತ್ಸಾಲಯದಲ್ಲಿ ಟೇ ಕುಡಿದ ನಂತರ ಮನೆಗೆ ಹೋಗಿ ಶಾಂತವಾದ ರೀತಿಯಲ್ಲಿ ಆತ್ಮಹತ್ಯೆ ಮಾಡಿ ಕೊಂಡರು.
ನಾನು ಓಬ್ಬ ಮನೋ ವೈದ್ಯನಾಗಿ ಆ ಸ್ನೇಹಿತನನ್ನು ಬದುಕಿಸಿಲಾಗಿಲಿಲ್ಲ. ಆ ಕೊರಗು ಇಂದು ನನ್ನಲ್ಲಿ ನೆಲೆಯೂರಿಬಿಟ್ಟಿದೆ ಹಾಗು ಅನೇಕ ವೇಳೆ ಆ ಸ್ನೇಹಿತರು ನನ್ನ ನೆನಪಿಗೆ ಬರುತ್ತಾರೆ. ಆದರೆ ನಾನಂತು ಅವರ ತಾಯಿಯನ್ನು ಎಂದು ಮರೆಯಲು ಸಾದ್ಯವಿಲ್ಲ, ಕಾರಣ ನನ್ನ ಹೆಂಡತಿ ತವರು ಮನೆಗೆ ಹೊದಾಗಲೆಲ್ಲ ಆ ಸ್ನೇಹಿತನ ಮನೆಯಲ್ಲಿ ಆತನ ತಾಯಿ ಮಾಡಿದ ಸಾರು ಅನ್ನ ಇಂದಿಗೂ ಆ ಸ್ವಾದ ನನ್ನ ನಾಲಿಗೆ ತುದಿಯಲ್ಲಿ ಅಚ್ಚಾಗಿಯೇ ಉಳಿದುಬಿಟ್ಟಿದೆ.
ಸ್ವಾಮಿ ವಿವೇಕಾನಂದರು ಅವರ ಅನುಯಾಯಿಗಳನ್ನು ಕುರಿತು ಹೇಳಿದ್ದ ಕಥೆ ನೆನಪಾಯಿತು. ಒಮ್ಮೆ ಜ್ಞಾನಿ ಹಾಗು ಒಬ್ಬ ನೀಚ ನಾವಿಕನ ಜೊತೆ ದೋಣಿಯಲ್ಲಿ ವಿಹಾರಿಸುತ್ತಿದ್ದಾಗ, ಜ್ಞಾನಿಯ ದೃಷ್ಟಿ ನೀಚನ ಮೇಲೆ ಹಾಗೆಯೇ ನೀಚನ ದೃಷ್ಟಿ ಜ್ಞಾನಿಯ ಮೇಲೆ ನೆಟ್ಟಿದ್ದವು. ಜ್ಞಾನಿಗೆ ನೀಚನು ಏನೋ ಮಾಡುವನೆಂಬ ಅಪನಂಬಿಕೆ, ನೀಚನಿಗೆ ಜ್ಙಾನಿಯ ಕುರಿತು ಅವನಲ್ಲಿ ತುಂಬಿರಬಹುದಾದ ಜ್ಞಾನದ ಯೋಚನೆ. ಇಬ್ಬರ ಮನಸ್ಸುಗಳಲ್ಲಿ ಇಂಗಿತಗಳು ತುಂಬಿಕೊಂಡಿರಬೇಕಾದರೆ ಮಾಯೆಯೆಂಬ ಚಂಡಮಾರುತಕ್ಕೆ ಇವರ ದೋಣಿ ಸಿಕ್ಕಿ ಮುಳುಗುತ್ತಿರಲು, ಸಂದೇಹ ಮತ್ತು ಇಲ್ಲದ ಯೋಚನೆಯನ್ನು ಮರೆತು ದೇವರಲ್ಲಿ ಮೊರೆ ಹೋದರು.
ಮೊರೆಹೋದ ಆ ಕ್ಷಣದಲ್ಲೆ ಭಗವಂತನು ಪ್ರತ್ಯಕ್ಷನಾಗಿ “ಎಲೇ ನಾಚಿಕೆಗೇಡಿ ಜ್ಞಾನಿಯೇ ನಿನಗೆ ಜ್ಞಾನವಿದ್ದು ನಕಾರಾತ್ಮಕ ಅಪನಂಬಿಕೆಗಳನ್ನು ತುಂಬಿಕೊಂಡಿದ್ದೀಯಾ. ಈ ಕ್ಷಣದಲ್ಲೆ ಅದನ್ನು ಬಿಡು. ನೀನು ನೀಚನೆಂದುಕೊಂಡಿರುವವನು ನಿಜವಾದ ಜ್ಞಾನಿ. ಅವನಲ್ಲಿ ಸಕಾರತ್ಮಕ ಯೋಚನೆಯನ್ನು ಗಮನಿಸು ಹಾಗು ಅವನಲ್ಲಿ ಕ್ಷಮೆಯನ್ನು ಯಾಚಿಸಿ ಸ್ನೇಹಿತನಂತೆ ಕಾಣು” ಎಂದು ಹೇಳಿ ಅದೃಶ್ಯನಾದನು. ಜ್ಞಾನಿಗೆ ಜ್ಞಾನೊದಯ ಆಗಿ ಆಗ ಅವನು ಕ್ಷಮೆ ಯಾಚಿಸಲು, ಸೂರ್ಯನು ತನ್ನ ಸಕಾರಾತ್ಮಕ ಬೆಳಕಿನಿಂದ ನಕಾರತ್ಮಕ ಕತ್ತಲ ಚಂಡಮಾರುತವನ್ನು ನುಂಗಿದ.
ಈರ್ವರು ನಾವಿಕನ ಜೊತೆ ದಡ ಸೇರಿದರೆಂಬುದು ಕಥೆ. ಅಂದರೆ ಬಾಳಿನ ನೌಕೆಯಲ್ಲಿ ಎಂದೆಂದಿಗೂ ಸ್ನೇಹ ಎಂಬ ನಂಬಿಕೆ ದಡವನ್ನು ಸೇರಿಸುತ್ತದೆ ಎಂಬುದು ಈ ಕಥೆಯ ಸಾರಂಶ. ಇದನ್ನೆ ಸಂತ ರಾಮಕೃಷ್ಣರು ಅರ್ಚಕನ ನಂಬಿಕೆಗಿಂತ ವೈಶ್ಯಯ ಯೋಚನೆಯೇ ಲೇಸು ಎಂದು ತಿಳಿಸಿದ್ದರು. ಓದುಗರೆ ಜೀವನದಲ್ಲಿ ಮಿತ್ರ ಭಾವನೆಯನ್ನು ಪವಿತ್ರಗೊಳಿಸಬೇಕಾದರೆ ಸಂದೇಹವನ್ನು ತೊರೆದು ನಂಬಿಕೆಯನ್ನು ವೃದ್ದಿಸಿದರೆ ಭಾಂದವ್ಯವು ಹಚ್ಚು ಹಸಿರಾಗಿ ಉಳಿಯುವುದಲ್ಲವೇ…………
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

