ಒಬ್ಬ ಸ್ನೇಹಿತನಿದ್ದ. ಈತ ತುಂಬ ಒಳ್ಳೆಯವನು. ಯಾರಿಗೂ ಕೆಟ್ಟದ್ದನ್ನು ಬಯಸಿದವನಲ್ಲ. ತನ್ನ ವೃತ್ತಿಯಲ್ಲಿ ರಾತ್ರಿ ಹಗಲು ದುಡಿದು ಸಾಕಷ್ಟು ಹಣ ಗಳಿಸಿದ್ದ. ಆದರೇ ಯಾರೋಬ್ಬರಿಗೂ “ಟಿ” ಅಥವ “ಕಾಫಿ” ಕೊಡಸಿದವನಲ್ಲ. ಈತನ ಈ ಸ್ವಭಾವದಿಂದ ನನ್ನ ಸ್ನೇಹಿತರೊಂದಿಗೆ ಮಾತನಾಡುವಾಗ ಇವನನ್ನು ‘ಮಹಾ ದಾನಿ’ ಎಂಬ ಬಿರುದುನೊಂದಿಗೆ ಪರಿಚಯುತ್ತಿದ್ದೆ. ಕಾರಣ, ತಾನು ಹೋಗುವಾಗ ಎಲ್ಲವನ್ನು ಬಿಟ್ಟು ಹೋಗುವ ಕಾರಣಕ್ಕೆ. ಈತನಿಗೆ ಮಕ್ಕಳು ಇರಲಿಲ್ಲ. ಆದರೆ ಗಳಿಸಿದ್ದನ್ನು ಎಲ್ಲರಿಗೂ ಹಂಚಿದವನಿಗೆ ‘ಪುಣ್ಯವಂತ’ ಎಂದೆನ್ನುತ್ತಾರೆ. ಹೋಗುವಾಗ ಪುಣ್ಯ ಮಾತ್ರ ತೆಗೆದುಕೊಂಡು ಹೋಗಲು ಸಾಧ್ಯ. ಪುಣ್ಯವಂತರನ್ನು ಸೂಕ್ಷ್ಮ ದರ್ಶನದಲ್ಲಿ ಹುಡುಕಬೇಕು.
ಆದರೆ ಈ ಪುಣ್ಯ ನಮಗೆ ನಂಬಿಕೆ ಇರಬಹುದು ಆದರೆ ಒಂದತ್ತು ಸತ್ಯ, ನಾವು ಮಾಡಿದ ಪುಣ್ಯ ನಮ್ಮ ವಂಶವಾಹಿನಿಯಲ್ಲಿ ಕೆತ್ತಲ್ಪಟ್ಟು ಮುಂದಿನ ಪೀಳಿಗೆಗೆ ಕಳಿಸಬಹುದು. ಮಾಹಾದಾನಿಗಳನ್ನು ಎಲ್ಲಡೆ ನೋಡಬಹುದು. ಈ ಹಿಂದೆ ಭಾರತದ ಜನರು ದುಡಿದದ್ದನ್ನು ಖರ್ಚು ಮಾಡದೆ ಬಿಟ್ಟು ಹೋಗಿದ್ದೆ ಜಾಸ್ತಿ. ಪ್ರಸ್ತುತದಲ್ಲೂ ಈ ತರಹದ ನಡುವಳಿಕೆ ಇದೆ. ಕಾರಣಗಳು ಅಗಾಧವಾಗಿ ಇದ್ದರು ನಮ್ಮ ಆರ್ಥಿಕ, ಸಾಮಾಜಿಕ ಮತ್ತು ಸರ್ಕಾರದ ನೀತಿಗಳಿಂದ ದುಡಿದಿದ್ದನ್ನು ನಮ್ಮ ಮಕ್ಕಳಿಗೆ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಇದೆ.
ಹಿಂದೆ ಅಪ್ಪ ಅಜ್ಜಂದರಿಗೆ ಜೀವನ ಸಾಗಿಸುವುದೇ ಕಠಿಣವಾಗಿತ್ತು. ಹೋಗುವಾಗ ತೆಗೆದುಕೊಂಡು ಹೋಗಿದ್ದು ಅಲ್ಪ ಪುಣ್ಯ, ನಮಗೆ ಬಿಟ್ಟು ಹೋಗಿದ್ದು ಉಳಿಸಿಕೊಂಡಿದ್ದ ಚಿರಾಸ್ತಿ. ಇಷ್ಟೆಲ್ಲದೆ ಪೂರ್ವಜರು ದೇವರ ವಿಗ್ರಹಗಳನ್ನು, ಸಾಲಿಗ್ರಾಮಗಳನ್ನು, ಪೂಜಾ ಸಾಮಗ್ರಿ ಮತ್ತು ಯಂತ್ರಗಳನ್ನು ಬಿಟ್ಟು ಹೋಗಿದ್ದಾರೆ. ದೇವರ ಕೋಣೆಯಲ್ಲಿ ನಾನು ಪೂಜೆ ಮಾಡುತ್ತಿದ್ದಾಗ ನನ್ನ ಗಮನ ಈ ‘ಯಂತ್ರ’ ದ ಮೇಲೆ ನಾಟಿತ್ತು. “ವಿಷ್ಣು” ವಿನ ಪಾದ ಮತ್ತು “ಸುಬ್ರಹ್ಮಣ್ಯ” ನ ಯಂತ್ರ. ಇಲ್ಲಿಯ ಯಂತ್ರ ಮೆಷಿನ್ ತರಹದ್ದ? ಅಲ್ಲ. ತಾಮ್ರದ ತಗಡಿನ ಹಾಳೆಯ ಮೇಲೆ ಬರೆದ ಸಮ ಸೂತ್ರತೆಯ ವರ್ತುಲ ವಲಯಗಳು, ಚೌಕಟ್ಟಿನ ವಲಯಗಳು, ಐಕ್ಯಗೊಳಿಸಿದ ತ್ರಿಕೋನ ವಲಯ ಮತ್ತು ಮಧ್ಯದಲ್ಲಿ ಕಾಣುವ ಕೇಂದ್ರ ಬಿಂದು. ಇವುಗಳ ನಡುವೆ ಮೀನು, ಆಮೆ, ಹೂವು, ಕುಂಭ ಇತ್ಯಾದಿ ಚಿಹ್ನೆಗಳನ್ನು ಕಂಡೆ. ಇವುಗಳಿಂದ ಪ್ರೇರಿತನಾದ ನಾನು ಸ್ವಯಂ ಆಗಿ ತಿಳಿದುಕೊಳ್ಳುವುದಕ್ಕೆ ಆಸಕ್ತನಾದೆ.

ವರ್ತುಲ ಮತ್ತು ಚೌಕಟ್ಟಿನ ಆಕೃತಿಗಳ ಬಗ್ಗೆ ಕೊನೆಗೆ ತಿಳಿಸುವ ಪ್ರಯತ್ನ ಮಾಡುವೆ. ನನ್ನ ಆಸಕ್ತಿಯು ತ್ರಿಕೋನ ಚಿನ್ಹೆಗಳ ಮೇಲೆ ಬಿತ್ತು. ಇದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇಮ್ಮಡಿಸಿತು. ನಾನು ಸಂಶೋಧಕನಲ್ಲ, ಪಂಡಿತನಲ್ಲ ಮತ್ತು ಸಂತನೂ ಅಲ್ಲ. ಒಬ್ಬ ಮನೋ ವೈದ್ಯನಾಗಿ ತಿಳಿದುಕೊಳ್ಳುವ ಆಸೆ. ನನಗೆ ನೆನಪಿಲ್ಲ, ಉತ್ತರ ಭಾರತ ಪ್ರವಾಸ ಕೈಗೊಂಡಾಗ ಅಲ್ಲಿಯ ವಾಶ್ ರೂಂಗೆ ಹೋದಾಗ ಅಲ್ಲಿಯ ಬಾಗಿಲನ ಮೇಲೆ ಸೀದಾ ತ್ರಿಕೋನ ಮತ್ತು ಉಲ್ಟಾ ತ್ರಿಕೋನ ಚಿನ್ಹೆಗಳು ಇದ್ದವು. ಸೀದಾ ತ್ರಿಕೋನದ ಚಿನ್ಹೆ ಹೆಂಗಸರ ಮತ್ತು ಉಲ್ಟಾ ತ್ರಿಕೋನ ಗಂಡಸರ ಶೌಚಾಲಯ ಅದಾಗಿತ್ತು. ನನಗೆ ಇತ್ತೀಚಿಗೆ ನನ್ನ ಆರ್ಟ್ಸ ಮಿತ್ರರಿಂದ ತಿಳಿದ ವಿಷಯ ಹೆಂಗಸರ ಚಿಹ್ನೆ ಸೀದಾ ತ್ರಿಕೋನ ಎಂಬುದು. ಆಗ ನನಗೆ ವೈದ್ಯ ಅಂಗರಚನಾ ಶಾಸ್ತ್ರದ ಪ್ರಕಾರ ಹೆಂಗಸರ ಭುಜದ ಅಳತೆ ಕಮ್ಮಿ ಇದ್ದು ಇವರ ಸೊಂಟದ ಅಳತೆ ಹೆಚ್ಚು ಇರುತ್ತೆ. ಗಂಡಸರದು ವಿರುದ್ಧ. ಬುಜದ ಅಳತೆ ಅಗಲ ಮತ್ತು ಸೊಂಟ ಚಿಕ್ಕದಾಗಿರುತ್ತೆ. ಈ ವಿಷಯ ಓದಿದ್ದು ನನ್ನ ನೆನಪಿಗೆ ಬಂದು ದೇವರ ಮನೆಯ ಯಂತ್ರದಲ್ಲಿ ಕಾಣಿಸಿಕೊಂಡ ತ್ರಿಕೋನ ಚಿಹ್ನೆಗಳ ಮೂಲ ಅರ್ಥ ತೆರೆದಿಡುವ ಮನಸ್ಸು ಹೆಚ್ಚಾಯಿತು.

ಯಾರಾದರು ಇಂತಹ ಯಂತ್ರಗಳನ್ನು ಗಮನಿಸಿದಾಗ ಮಧ್ಯ ವಲಯದಲ್ಲಿ ಸಿದಾ ತ್ರಿಕೋನ ಮತ್ತು ಉಲ್ಟಾ ತ್ರಿಕೋನ ಕೂಡಿ ಷಟ್ ಮೂಲೆಯ ಚಿಹ್ನೆ ಇದ್ದು ಮಧ್ಯೆ ಕೆಂಪು ಬಿಂದುವನ್ನು ನೂಡಬಹುದು. ಇದರರ್ಥ ಜೀವ ಬಿಂದು ಎಂದು ಹೇಳಲಾಗುತ್ತದೆ ಅಥವ “ಬ್ರಹ್ಮಾಂಡದ ಸೃಷ್ಟಿ” ಎಂದು ಕರೆಯುತ್ತಾರೆ. ಕೆಲವು ಶಿವ ಮಂದಿರಗಳಲ್ಲಿ ಲಿಂಗವನ್ನು ಷಟ್ ಮೂಲೆಯ ಉಚ್ಚಾಸನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುತ್ತದೆ. ಮೂಲತಹ “ತಂತ್ರ” ಧರ್ಮ ಗ್ರಂಥಗಳು “ಶಿವ” ಮತ್ತು “ಪಾರ್ವತಿ” ಮಧ್ಯೆ ನೆಡೆಯುವ ಜೀವಕ್ಕೆ ಆಧಾರವಾದ ಪ್ರೀತಿಯ ಐಕ್ಯಾ ಮನೋ ಭಾವ ಆಗಿರುತ್ತದೆ. ಈ ವಿಷಯವನ್ನು ಆಧರಿಸಿ ಒಂದು ಸಮೀಕರಣವಿದೆ “ಲಿಂಗ + ಯೋನಿ = ಜೀವ”. ಶಿವರಾತ್ರಿಯ ದಿನದಂದು ಶಿವನಿಗೆ ಪೂಜೆ ಪುನಸ್ಕಾರಗಳು ನೆಡೆಯುತ್ತವೆ. ಶಿವರಾತ್ರಿಯ ರಾತ್ರಿಯಂದು ಹಿಂದು ಧರ್ಮದ ಪ್ರಕಾರ ಬೆಳಕೇ ಕಾಣದ ಮತ್ತು ನಿಶ್ಯಬ್ದ ವಾತಾವರಣದ ಈ ರಾತ್ರಿಯಂದು ಜೀವ ಕುಲಕ್ಕೆ ಕಾರಣ ಕರ್ತನಾದ ಈಶ್ವರನನ್ನು ಕುರಿತು ಧ್ಯಾನವನ್ನು ಮಾಡಬೇಕು ಎಂಬುದು.
ಈಶ್ವರ ಕೇಳುವುದು ಧ್ಯಾನವಷ್ಷೆ. ಈ ಧ್ಯಾನ “ಜೀವ, ಜೀವ ಉದ್ಧಾರ ಮತ್ತು ಜೀವ ವಿಕಸಿತೆ” ಗಳ ಬಗ್ಗೆ ಕೂಡಿರಬೇಕು. ಶಿವರಾತ್ರಿಯಂದು ಅತಿ ಜೋರಾಗಿ ಸಂಗೀತ ಸಂಯೋಜಿಸಿ ಹಾಡಿನಿಂದ ಕುಣಿದು ಕುಪ್ಪಳಿಸುವುದು ಅಲ್ಲ. ಶಿವರಾತ್ರಿಯ ರಾತ್ರಿ “ಮೌನ ಮತ್ತು ಧ್ಯಾನ” ವೇ ಮುಖ್ಯವಾಗಿ ಇರಬೇಕು. ಶಿವರಾತ್ರಿಯ ದಿನ ದುಶ್ಕ್ರುತ್ಯವನ್ನು ತ್ಯಜಿಸಬೇಕು ಮತ್ತು ಉತ್ಕೃಷ್ಟವನ್ನು ಭಜಿಸಬೇಕು. ಈ ರಾತ್ರಿಯಂದು ಮಾನವ ತನ್ನನ್ನು ತಾನೇ ಪರಿವರ್ತಿಸಕೊಳ್ಳಬೇಕು. ಇದೇ ಶಿವರಾತ್ರಿಯ ಮೂಲ ಧ್ಯೇಯ.
ಇಟಾಲಿ ದೇಶದ ಗಣಿತಜ್ಞ ಮತ್ತು ತರ್ಕ ಶಾಸ್ತ್ರಜ್ಞ ಗಿಯಾಲಿಯೋ ಗಿಯರೆಲ್ಲೊ 1977 ನೆ ಇಸವಿಯಲ್ಲಿ ತಾರ್ಕಿಕ ಯುಕ್ತಿಯೊಂದನ್ನು ತಿಳಿಸಿದ್ದ “ಹೌದು, ನಮಗೆ ಆತ್ಮ ಇದೆ, ಈ ಆತ್ಮವನ್ನು ಕೋಟ್ಯಂತರ ಸೂಕ್ಷ್ಮ ರೋಬೋಟ್ಸಗಳಿಂದ ಮಾಡಲಾಗಿದೆ”.
ಬ್ರಿಟಿಷ್ ದೇಶದ ಶರೀರ ಶಾಸ್ತ್ರಜ್ಞ ಡಾ ವಿಲಿಯಂ ಹಾರ್ವೆ (1567 – 1657) ಇವರ ಚಿಕ್ಕ ಅನ್ವೇಷಣೆಯಿಂದ ಶರೀರ ಶಾಸ್ತ್ರದ ದಿಕ್ಕನ್ನೆ ಬದಲಿಸಿದರು. ಮುಂದು ತೋಳಿನಲ್ಲಿ ಕಾಣುವ ರಕ್ತನಾಳ ಅಥವ ಅಭಿಧಮನಿಯನ್ನು ಸ್ವಲ್ಪ ಬಲದಿಂದ ಒತ್ತಿ ಇಟ್ಟುಕೊಂಡಾಗ ಕೈಯಿಂದ ಶುರು ಆಗುವ ರಕ್ತನಾಳ ಊದುತ್ತಾ ಹೋಗುತ್ತೆ. ಅದುಮವುದನ್ನು ಬಿಟ್ಟಾಗ ರಕ್ತನಾಳ ತನ್ನ ಹಿಂದಿನ ಸ್ಥಿತಿಗೆ ಮರಳುತ್ತೆ. ಈ ಅನ್ವೇಷಣೆಯಿಂದ ನಮ್ಮಲ್ಲಿರುವ ರಕ್ತ, ಚಲನಾ ಶೀಲವೆಂದು ತಿಳಿಯಿತು.

ನಮ್ಮ ಶರೀರದಲ್ಲಿ ಎರೆಡು ವಿದ್ಯುತ್ ಘಟಕಗಳಿವೆ. ಒಂದು ಮೆದುಳಿನಲ್ಲಿ, ಇನ್ನೊಂದು ನಮ್ಮ ಹೃದಯದಲ್ಲಿ. ಮೆದುಳನ್ನು “ವಿದ್ಯುತ್ ಅಂಗಳ” ಅಥವ ಪವರ್ ಹೌಸ್ ಎಂದು ಕರೆಯಲಾಗುವುದು. ಕೋಟಿ ಕೋಟ್ಯಾಂತರ ಕೋಶಗಳಲ್ಲಿ ಇರುವ “ಮೈಟೋಕಾಂಡ್ರಿಯಾ” ನಿಜವಾದ ಶಕ್ತಿ ಕೇಂದ್ರ. ಶಕ್ತಿಯ ರಸಾಯನಿಕ ವಸ್ತು “ಅಡೆನೋಸಿನ್ ಟ್ರೈಫಾಸ್ಫೇಟ್ (ಎ ಟಿ ಪಿ)” ನ್ನು ಈ ಮೈಟೋಕಾಂಡ್ರಿಯ ತಯಾರು ಮಾಡುತ್ತದೆ.
ಈ ವಿದ್ಯುತ್ ಶಕ್ತಿ ಎಲ್ಲಾ ಶರೀರದ ಅಂಗಾಂಗಕ್ಕೆ ವಿದ್ಯುತ್ತನ್ನು ಪ್ರವಹಿಸಿ ಅವುಗಳ ನಿರ್ದಿಷ್ಟ ಕಾರ್ಯಗಳಿಗೆ ಕಾರಣ ಕರ್ತ ಆಗುತ್ತದೆ. ಹೃದಯದಲ್ಲಿ “ಎ ವಿ ನೋಡ್” ನಿಂದ ವಿದ್ಯುತ್ ತಯಾರಾಗಿ ಹೃದಯ ಬಡಿತಕ್ಕೆ ದಾರಿ ಆಗುತ್ತದೆ. ಇವೆರಡನ್ನೂ ನಾನು ಸೃಷ್ಟಿಕರ್ತನ ಉಡುಗೊರೆ ಎಂದೆನ್ನುತ್ತೇನೆ. ಇವುಗಳು ನಾವು ಜೀವಂತ ಇರೊವರಿಗೂ ಚಾರ್ಜ್ ಮಾಡದ “ಇನ್ವರ್ಟರ್” ಎಂದು ಕರೆಯುತ್ತೇನೆ. ಗಣಕ ಯಂತ್ರ , ವಿದ್ಯುತ್ ಮತ್ತು ಸಿಲಿಕಾನ್ ಬಿಲ್ಲೆಯಿಂದ ತನ್ನ ಕೆಲಸ ನಿರ್ವಹಿಸುತ್ತದೆ. ಆದರೆ ಅತೀಂದ್ರಿಯ ಮಾನವನು ಸ್ವಯಂ ವಿದ್ಯುತ್ ಮತ್ತು ಕಾರ್ಬನ್ ಬಿಲ್ಲೆಯಿಂದ ಅಲ್ಲವೇ ಕೆಲಸ ಸಾಗುವುದು…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]