ಬೇಲೂರು: ತಾಲ್ಲೂಕಿನ ಮಾದಿಹಳ್ಳಿ ಹೋಬಳಿ ಶಂಕರೇಗೌಡರಿಗೆ ಸೇರಿದ 6 ಎಕರೆ ಜಮೀನಿನಲ್ಲಿ ಕಾಫಿ ಮೆಣಸು ತೆಂಗು ಹಾಗು ಸುತ್ತಲೂ 8೦೦ ಕ್ಕೂ ಹೆಚ್ಚು ಅಡಿಕೆ ಬೆಳೆ ಬೆಳೆದಿದ್ದರು.
ಇಂದು ಮಧ್ಯಾಹ್ನ 1.30ರ ಸಮಯದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು ರೈತ ನೋಡು ನೋಡುತ್ತಿದ್ದಂತೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ನೆರೆಹೊರೆಯವರು ಸೇರಿ ಬೆಂಕಿ ನಂದಿಸಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ. ತಕ್ಷಣ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ ಇನ್ನು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸಾಲಮಾಡಿ ಕಷ್ಟಪಟ್ಟು ನಮಗೆ ಇದ್ದಂತ 6 ಎಕರೆ ಭೂಮಿಯಲ್ಲಿ ಕಾಫಿ ಮೆಣಸು ತೆಂಗನ್ನು ಬೆಳೆದಿದ್ದವು ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಕರಕಲಾಗಿದೆ ಎಂದು ಶಂಕರೇಗೌಡ ಕಣ್ಣೀರು ಹಾಕಿದರು.
