ನವದೆಹಲಿ: ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವ ಆರೋಗ್ಯ ಸಭೆಯ 78ನೇ ಅಧಿವೇಶನದಲ್ಲಿ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ (PM Modi) ಎಲ್ಲ ದೇಶಗಳನ್ನೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಹ್ವಾನಿಸಿದ್ದಾರೆ. “ಜೂನ್ ತಿಂಗಳಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನ ಬರುತ್ತಿದೆ. ಈ ವರ್ಷದ ಥೀಮ್ ‘ಭೂಮಿಗಾಗಿ, ಆರೋಗ್ಯಕ್ಕಾಗಿ ಯೋಗ’ ಎಂಬುದಾಗಿದೆ. ಜಗತ್ತಿಗೆ ಯೋಗವನ್ನು ನೀಡಿದ ರಾಷ್ಟ್ರದ ಪ್ರಧಾನಿಯಾಗಿ ಎಲ್ಲಾ ದೇಶಗಳನ್ನು ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ನಾನು ಆಹ್ವಾನಿಸುತ್ತೇನೆ. ಐಎನ್ಬಿ ಒಪ್ಪಂದದ ಯಶಸ್ವಿ ಮಾತುಕತೆಗಾಗಿ ನಾನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಅಭಿನಂದಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
