ದೇಶದ ಹೆಚ್ಚಿನ ಭಾಗಗಳಲ್ಲಿ ಬಿಸಿಲು ತೀವ್ರವಾಗಿರುವ ಸಮಯದಲ್ಲಿ, ಹವಾಮಾನದಲ್ಲಿ ಅಚ್ಚರಿಯ ಬದಲಾವಣೆ ಕಂಡು ಬಂದಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸುವಂತೆ, ಕೇರಳಕ್ಕೆ ಸಾಮಾನ್ಯವಾಗಿ ಜೂನ್ 1 ರಂದು ಆಗಮಿಸುವ ಮಾನ್ಸೂನ್ ಈ ಬಾರಿ ಮೇ 26–27 ರ ಸಮಯದಲ್ಲಿ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ.
2009 ನಂತರ ಈಷ್ಟು ಬೇಗ ಮುಂಗಾರು ಅಪ್ಪಳಿಸುವುದು ಇದೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಮೇ 22 ರಿಂದ ದಕ್ಷಿಣ ಅರೇಬಿಯನ್ ಸಮುದ್ರದ ನೈಋತ್ಯ ಮಾನ್ಸೂನ್ ದಕ್ಷಿಣ ಭಾಗಗಳು, ಲಕ್ಷದ್ವೀಪ, ಕೊಮೊರಿನ್, ಕೇರಳ ಮತ್ತು ತಮಿಳುನಾಡಿನ ಕೆಲ ಭಾಗಗಳಿಗೆ ಮುಂಗಾರು ಮುಂದುವರಿಯುವ ಸಾಧ್ಯತೆ ಇದೆ.
ಮಾನ್ಸೂನ್ ಸಾಮಾನ್ಯವಾಗಿ ಜುಲೈ 8 ರೊಳಗೆ ಇಡೀ ದೇಶವನ್ನು ಆವರಿಸುತ್ತಿದ್ದು, ಸೆಪ್ಟೆಂಬರ್ 17 ರಂದು ವಾಯುವ್ಯ ಭಾರತದಿಂದ ಹಿಮ್ಮೆಟ್ಟುತ್ತದೆ. ಕಳೆದ ವರ್ಷ, ಮಾನ್ಸೂನ್ ಮೇ 30 ರಂದು ಕೇರಳಕ್ಕೆ ಪ್ರವೇಶಿಸಿತ್ತು.
2025 ರ ಮುಂಗಾರು ಋತುವಿನಲ್ಲಿ ಏಪ್ರಿಲ್ನಲ್ಲಿ ಹೆಚ್ಚುವರಿ ಮಳೆಯ ಮುನ್ಸೂಚನೆ ನೀಡಲಾಯಿತು. ಈ ವರ್ಷ ಎಲ್ ನಿನೊ ಪರಿಣಾಮ ಕಡಿಮೆ ಇರುವ ನಿರೀಕ್ಷೆಯಿದೆ.
