ಕೆ.ಆರ್.ಪೇಟೆ,ಮೇ.27: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮರಟೀಕೊಪ್ಪಲು ಗ್ರಾಮದ ರೈತನೊಬ್ಬ ಸಾಲದ ಬಾಧೆ ತಾಳಲಾರದೆ ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಮರಟೀಕೊಪ್ಪಲು ಗ್ರಾಮದ ನಾಗರಾಜೇಗೌಡರ ಮಗ ಮಂಜೇಗೌಡ(46) ಸಾಧಗೋನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೈತ ಎಂದು ಗುರುತಿಸಲಾಗಿದೆ.
ಮೃತ ಮಂಜೇಗೌಡ ಐದಾರು ಲಕ್ಷ ರೂಪಾಯಿಗಳನ್ನು ಜಮೀನು ಅಭಿವೃದ್ಧಿ ಪಡಿಸುವ ಸಲುವಾಗಿ ಹಾಗೂ ಬೇಸಾಯಕ್ಕಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಚಿನ್ನದ ಮೇಲೆ ಸಾಲ ಮತ್ತು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದರು. ಸಾಲದ ಬಾಧೆ ತಾಳಲಾರದೆ ತಮ್ಮ ಪತ್ನಿಯ ಊರು ವಡ್ಡಗುಡಿ ಗ್ರಾಮಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಇದೇ ದಾರಿಯಲ್ಲಿ ಸಿಗುವ ಸಾಧಗೋನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ಪತ್ನಿ ಶೃತಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೃತ ಮಂಜುನಾಥ್ ಪತ್ನಿ ಶೃತಿ ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಘಟನೆ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶ್ರೀನಿವಾಸ್ ಆರ್.
