“ಜಯದೇವಿತಾಯಿ ಲಿಗಾಡೆ”
~~~~~~~~~~~~~~~~~~~
1. ಜಯದೇವಿತಾಯಿ ಲಿಗಾಡೆ ಅವರ ಜನ್ಮಸ್ಥಳ ಯಾವುದು?
1)ಅಥಣಿ. 2)ಸೊಲ್ಲಾಪುರ. 3)ಬೆಳಗಾವಿ
2. ಜಯದೇವಿತಾಯಿ ಲಿಗಾಡೆ ಅವರ ಜನ್ಮ ದಿನಾಂಕ ಯಾವುದು?
1) 23 ಜೂನ್ 1912 2)23 ಜೂನ್ 1904 3)23 ಜೂನ್ 1919
3. ಜಯದೇವಿತಾಯಿ ಲಿಗಾಡೆ ಅವರ ತಾಯಿಯ ಹೆಸರೇನು?
1)ಲಕ್ಕವ್ವ. 2)ಲಿಂಗವ್ವ. 3)ಸಂಗವ್ವ
4. ಜಯದೇವಿತಾಯಿ ಲಿಗಾಡೆ ಅವರ ತಂದೆಯ ಹೆಸರೇನು?
1)ಚನ್ನಮಲ್ಲಪ್ಪ. 2)ಚೆನ್ನಮಲ್ಲಿಕಾರ್ಜುನ. 3)ಶಾಂತಮಲ್ಲಪ್ಪ
5. ಅಸ್ಪೃಶ್ಯತೆ ನಿವಾರಣೆಗಾಗಿ ಜಯದೇವಿತಾಯಿ ಲಿಗಾಡೆಯವರು ಸ್ಥಾಪಿಸಿದ ಸಂಘ ಯಾವುದು?
1)ದಲಿತ ಪೋಷಕರ ಸಂಘ. 2)ಶರಣ ಸಮಾಜ. 3)ಸಮಾನತೆಯ ಸಮಾಜ
6. ಜಯದೇವಿತಾಯಿ ಲಿಗಾಡೆ ಅವರು ತಮ್ಮ ‘ತಾರಕ ತಂಬೂರಿ’ ಕೃತಿಯ ಕವನಗಳಲ್ಲಿ ಬಳಸಿದ ಅಂಕಿತನಾಮ ಯಾವುದು?
1)ಜಯ ಸಿದ್ಧರಾಮ. 2)ಜಯ ಜಯ ರಾಮ. 3)ಜಯದೇವ ರಾಮ
7. ಜಯದೇವಿತಾಯಿ ಲಿಗಾಡೆ ಅವರನ್ನು ಕುರಿತ ‘ಸಾಲು ದೀಪಗಳು’ ಕೃತಿಯ ಕರ್ತೃ ಯಾರು?
1)ಶಶಿಕಲಾ ವೀರಯ್ಯ ಸ್ವಾಮಿ. 2)ಶಾಂತಾದೇವಿ ಮಾಳವಾಡ. 3)ಸಾರಾ ಅಬೂಬಕ್ಕರ್
8. ಜಯದೇವಿತಾಯಿ ಲಿಗಾಡೆ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಕಲಬುರ್ಗಿ. 2)ಬೆಳಗಾವಿ. 3)ಮಂಡ್ಯ
9. ಜಯದೇವಿತಾಯಿ ಲಿಗಾಡೆ ಅವರು ಸುಮಾರು ನಾಲ್ಕು ಸಾವಿರ ಪದ್ಯಗಳನ್ನು ರಚಿಸಿರುವ ಪ್ರಕಾರ ಯಾವುದು?
1)ಷಟ್ಪದಿ ಛಂದಸ್ಸು. 2)ತ್ರಿಪದಿ ಛಂದಸ್ಸು. 3)ಚೌಪದಿ ಛಂದಸ್ಸು
10. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಜಯದೇವಿತಾಯಿ ಲಿಗಾಡೆ ಅವರು ಸ್ಥಾಪಿಸಿದ ಶಾಲೆಗಳ ಸಂಖ್ಯೆ ಎಷ್ಟು?
1) 27 2) 36 3)18
11. ಜಯದೇವಿತಾಯಿ ಲಿಗಾಡೆ ಅವರು ರಚಿಸಿದ ಮಹಾಕಾವ್ಯ ಯಾವುದು?
1)ಶಿವಲಿಂಗೇಶ್ವರ ಚರಿತ್ರೆ. 2)ಸಿದ್ಧರಾಮೇಶ್ವರ ಪುರಾಣ. 3)ರಾಮಲಿಂಗೇಶ್ವರ ಮಹಿಮೆ
12. ಜಯದೇವಿತಾಯಿ ಲಿಗಾಡೆ ಅವರ 1952 ಕವನಗಳನ್ನುಒಳಗೊಂಡ, ಮೊದಲ ಕೃತಿ ಯಾವುದು?
1)ಜಯಗೀತ. 2)ಭಾರತೀಯ ಕವಿತಾ. 3)ಸಾವಿರ ಪದಗಳು
13. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಮಹಿಳೆಯರಲ್ಲಿ ಜಯದೇವಿತಾಯಿ ಲಿಗಾಡೆ ಎಷ್ಟನೇಯವರು?
1)ಮೂರನೆಯವರು. 2)ಎರಡನೆಯವರು. 3)ಮೊದಲಿಗರು
14. ಹದಿನಾಲ್ಕು ಭಾಷೆಗಳಿಗೆ ತರ್ಜುಮೆಯಾದ ಜಯದೇವಿತಾಯಿ ಲಿಗಾಡೆ ಅವರ ಕವನ ಯಾವುದು?
1)ಜಯಗೀತೆ. 2)ಹಿಗ್ಗುತಿದೆ ವಿಶ್ವ. 3)ಬಂದೇವು ಕಲ್ಯಾಣಕೆ
15. ಜಯದೇವಿತಾಯಿ ಲಿಗಾಡೆ ಅವರು ದೈವಾಧೀನರಾದ ದಿನಾಂಕ ಯಾವುದು?
1)26 ಜುಲೈ 1986 2)20 ಜುಲೈ 1986 3)30 ಜುಲೈ 1986
~~~~~~~~~~~~~~~~~~~~~~~~
★ಉತ್ತರಗಳು:-
1)ಸೊಲ್ಲಾಪುರ
2) 23 ಜೂನ್ 1912
3)ಸಂಗವ್ವ
4)ಚನ್ನಮಲ್ಲಪ್ಪ
5)ಶರಣ ಸಮಾಜ
7)ಜಯಸಿದ್ಧರಾಮ
8)ಶಶಿಕಲಾ ವೀರಯ್ಯಸ್ವಾಮಿ
9)ಮಂಡ್ಯ
10)ತ್ರಿಪದಿ ಛಂದಸ್ಸು
11)ಸಿದ್ಧರಾಮೇಶ್ವರ ಪುರಾಣ
12)ಜಯಗೀತ
13) ಮೊದಲಿಗರು
14) ಹಿಗ್ಗುತಿದೆ ವಿಶ್ವ
15) 26 ಜುಲೈ 1986
******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
