ಇತ್ತೀಚಿಗೆ ರೀಲ್ಸ್ ಮಾಡಲು ಯುವತಿಯೊಬ್ಬಳು ನದಿಗೆ ಹಾರಿ, ಪ್ರಾಣವನ್ನು ಕಳೆದುಕೊಂಡ ಘಟನೆ ಮಾಸುವ ಮುನ್ನ ಮತ್ತೊಂದು ಘಟನೆ ನಡೆದಿದ್ದು, ಯುವಕನೊರ್ವ ರಿಲ್ಸ್ ಮಾಡಲು ಹೋಗಿ ನೂರು ಅಡಿ ಬೆಟ್ಟದಿಂದ ಕೆಳಗೆ ಬಿದ್ದ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ಹೌದು…ರೀಲ್ಸ್ ಮಾಡಲು ಬೆಟ್ಟದ ತುದಿಯಲ್ಲಿ ನಿಂತ ಯುವಕ ಆಯತಪ್ಪಿ ನೂರು ಅಡಿ ಆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸಕಲೇಶಪುರ ತಾಲ್ಲೂಕಿನ ಗವಿಬೆಟ್ಟದಲ್ಲಿ ನಡೆದಿದೆ.
ಗಾಯಗೊಂಡ ಯುವಕನನ್ನು ರಾಶಿದ್ (18) ಎಂದು ಗುರುತಿಸಲಾಗಿದೆ. ಶನಿವಾರಸಂತೆಯಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಗವಿಬೆಟ್ಟಕ್ಕೆ ಬಂದಿದ್ದ ರಾಶಿದ್, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದನು. ಇದರಿಂದ ಆತನ ತಲೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಸ್ಥಳೀಯರು ಮತ್ತು ಯಸಳೂರು ಠಾಣೆ ಪೊಲೀಸರ ಸಹಾಯದಿಂದ ರಾಶಿದ್ನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರ ಸಲಹೆ ಮೇಲೆಗೆ ಹಾಸನದ ಹಿಮ್ಸ್ ಗೆ ಕರೆತಂದು ಕೊಡಿಸಲಾಗುತ್ತಿದೆ. ಚಿಕಿತ್ಸೆ ನೀಡಲಾಗುತ್ತಿದೆ.
ಯುವ ಜನತೆಯ ರೀಲ್ಸ್ ನ ಹುಚ್ಚಾಟ ಸಮಾಜಕ್ಕೆ ಕೆಟ್ಟ ಪರಿಣಾಮವೇ ಬೀರುತ್ತಿದೆ. ಪ್ರತಿ ದಿನ ರೀಲ್ಸ್ , ಲೈಕ್ಸ್ ಗಾಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
