ಟಿ.ನರಸೀಪುರ : ಹಲವು ದಶಕಗಳ ಕನಸು…ನನಸು.ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಹಸ್ತಾಂತರ.ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ತಿಳಿಸಿದರು.
ಪಟ್ಟಣದ ಜೋಡಿ ಮುಖ್ಯರಸ್ತೆಯಲ್ಲಿ ಬರುವ ಸಿಲ್ಕ್ ಫ್ಯಾಕ್ಟರಿ ಸ್ಥಳದಲ್ಲಿ ಪೊಲೀಸ್ ಭದ್ರತೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ತಹಶಿಲ್ದಾರ್ ಟಿ.ಜೆ.ಸುರೇಶ್ ಆಚಾರ್ ರವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ರವರಿಗೆ ಐದು ಎಕರೆ ಭೂಮಿ ದಾಖಲೆ ಪತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಮಾತನಾಡಿ ಇಂದು ಕ್ರೀಡಾಂಗಣಕ್ಕೆ ನೀಡಿರುವ ಸ್ಥಳದ ಗುರುತಿಗೆ ಕಲ್ಲುಗಳನ್ನು ನೆಟ್ಟು ಗುರುತು ಮಾಡಲಾಗಿದೆ. ಟಿ.ನರಸೀಪುರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ ಕ್ರೀಡಾಪಟುಗಳಿಗೆ ಕ್ರೀಡಾಂಗಣ ನಿರ್ಮಾಣದಿಂದ ಅತ್ಯಂತ ಸಹಕಾರಿಯಾಗಲಿದ್ದು,ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಗುರುತಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ವರದಾನವಾಗಲಿದೆ.ಮುಖ್ಯಮಂತ್ರಿಗಳ ತವರು ಕ್ಷೇತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪರವರು,ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯರವರು ಹಾಗೂ ಸಂಸದರಾದ ಸುನಿಲ್ ಬೋಸ್ ರವರ ಸಹಕಾರದಿಂದ ಕ್ರೀಡಾಂಗಣ ಕಾಮಗಾರಿ ಕೆಲಸವನ್ನು ಒಂದೆರೆಡು ದಿನಗಳಲ್ಲಿ ಪ್ರಾರಂಭ ಮಾಡಲಾಗುವುದು.ತಹಶಿಲ್ದಾರ್ ರವರು ಭೂಮಿ ಹಸ್ತಾಂತರ ಪ್ರಕ್ರಿಯೆಗೆ ಎಲ್ಲಾ ಸಹಕಾರವನ್ನು ನೀಡಿದ್ದಾರೆ.ಕಳೆದ ಬಜೆಟ್ ನಲ್ಲೇ ಹಣ ಮಂಜೂರಾಗಿತ್ತು.ಟೆಂಡರ್ ಪ್ರಕ್ರಿಯೆಯನ್ನು ಹದಿನೈದು ದಿನಗಳಲ್ಲಿ ಮುಗಿಸಿ ಅತಿ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದೆಂದರು.
ತಹಶಿಲ್ದಾರ್ ಟಿ.ಜೆ.ಸುರೇಶ್ ಆಚಾರ್ ಮಾತನಾಡಿ ತಾಲ್ಲೂಕು ಕ್ರೀಡಾಂಗಣಕ್ಕಾಗಿ ಈ ಒಂದು ಜಾಗದಲ್ಲಿ ಕ್ರೀಡಾ ಇಲಾಖೆಗೆ ಸರ್ಕಾರದಿಂದ ಹಸ್ತಾಂತರವಾಗಿದ್ದ ಜಮೀನನ್ನು ಹದ್ದುಬಸ್ತು ಮಾಡಿ ಗುರುತನ್ನು ಹಾಕುವ ಮುಖಾಂತರ ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಈ ಸಂಬಂಧ ಕಂದಾಯ ಇಲಾಖೆಯಿಂದ ತಾಲ್ಲೂಕು ಸರ್ವೇಯರ್ ರನ್ನು ಕರೆದುಕೊಂಡು ಬಂದು ಐದು ಎಕರೆ ಜಾಗವನ್ನು ಗುರುತು ಕಲ್ಲುಗಳನ್ನು ಹಾಕುವ ಮೂಲಕ ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಡಾ.ಬಿ.ಮರಯ್ಯ ಮಾತನಾಡಿ ಮುಖ್ಯಮಂತ್ರಿಗಳು ಎರೆಡೂ ಕ್ಷೇತ್ರಗಳ ಜನತೆಯ ಹಾಗೂ ಕ್ರೀಡಾಪಟುಗಳ ಒತ್ತಾಯದ ಮೇರೆಗೆ ಜರೂರಾಗಿ ಕ್ರೀಡಾಂಗಣ ನಿರ್ಮಾಣವಾಗಬೇಕೆಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಟಿ.ನರಸೀಪುರ ತಾಲ್ಲೂಕಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭೂಮಿ ಹಸ್ತಾಂತರ ಪ್ರಕ್ರಿಯೆ ಮಾಡಿದ್ದು ,ಸಿಲ್ಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.ಅವರು ಆತಂಕ ಪಡುವುದು ಬೇಡ.ಹೆಚ್ಚುವರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ.ಪ್ರಸ್ತುತ ಇರುವ ಜಾಗದಲ್ಲಿ ಕಾರ್ಮಿಕರು ತಮ್ಮ ಕೆಲಸವನ್ನು ಮಾಡಿಕೊಂಡು ಹೋಗಬಹುದೆಂದರು.
ಡಾ.ಬಿ.ಮರಯ್ಯ ಉಪಾಧ್ಯಕ್ಷರು(ಮಾಜಿ)ತಾಲ್ಲೂಕು ಪಂಚಾಯತಿ ಟಿ.ನರಸೀಪುರ ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್,ಜಗದೀಶ್ ಧೂಳ್ ಶೆಟ್ಟಿ,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ದಿವಾಕರ್ ಮರಯ್ಯ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಇಇ ಎಸ್.ಆರ್.ಜಯಪ್ರಕಾಶ್ ಸೇರಿದಂತೆ ಇತರರಿದ್ದರು.
ವರದಿ : ಎಂ.ನಾಗೇಂದ್ರಕುಮಾರ್
