ದೇಶದಲ್ಲೇ ಮೊದಲು: ಪಂಜಾಬ್, ಹರಿಯಾಣದ ರೈತರಿಗೆ ಮಣ್ಣಿನ ಇಂಗಾಲ ಕ್ರೆಡಿಟ್ ಹಣ ನೇರ ವರ್ಗಾವಣೆ!

ಪರಿಸರಸ್ನೇಹಿ ಕೃಷಿ ಪದ್ಧತಿ ಅಳವಡಿಸಿಕೊಂಡ ಪಂಜಾಬ್ ಮತ್ತು ಹರಿಯಾಣದ 2,500ಕ್ಕೂ ಹೆಚ್ಚು ಸಣ್ಣ ಹಿಡುವಳಿ ರೈತರಿಗೆ ‘ಆದಿ’ ಕಾರ್ಯಕ್ರಮದಡಿ ₹2.9 ಕೋಟಿಗೂ ಅಧಿಕ ಕಾರ್ಬನ್ ಕ್ರೆಡಿಟ್ ಪ್ರೋತ್ಸಾಹಧನವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ.