
ಪ್ರೇಮ ಪತ್ರಕ್ಕೆ ಕಾದಿಹಳು ಗೆಳತಿ
ಪ್ರೇಮ ಪತ್ರಕ್ಕೆ
ಕಾದಿಹಳು ಗೆಳತಿ
ಅಂಚೆಯ ಡಬ್ಬಿಗೆ ಒರಗಿ..
ಏನೆಂದು ಬರೆಯಲಿ
ಹೃದಯವೇ ನನ್ನಲ್ಲಿಲ್ಲದಾಗ..!!
ವರ್ಣಿಸಲಾಗದು
ಎದೆಯ ಬಡಿತವ
ಬಿಳಿಯ ಹಾಳೆಯಮೇಲೆ..
ಚಿತ್ರಿಸಲಾಗದು
ಮನಸ್ಸಿನ ಲಾವಣ್ಯವ
ಪದಗಳ ಕುಂಚದಮೇಲೆ..!!
ಕಟ್ಟಿರುವೆ ಕನಸೊಂದ
ಬಚ್ಚಿಟ್ಟ ಮಾತಲಿ..
ಸೃಷ್ಟಿಸಿರುವೆ ಸಾಲೊಂದ
ನೆತ್ತರ ಶಾಹಿರಿಯಲಿ..
ನೀನಿಲ್ಲದ ನಾಳೆಗಳು
ಚಂದ್ರನಿಲ್ಲದ ಹುಣ್ಣಿಮೆಯಂತೆ..
ಜೊತೆಗಿರದ ದಿನಗಳು
ಮೇಘವಿಲ್ಲದ ಬಾನಿನಂತೆ..
ಉತ್ತರಕ್ಕೆ ಕಾಯುವೆ
ಸದಾ ಜೀವನವಿಡೀ…
ಆರಕ್ಷಕನು ನಾನು
ಬಂಧನಕ್ಕೆ ಒಳಗಾಗಿರುವೆ..
— ಇಂತಿ ನಿಮ್ಮ ಪ್ರೀತಿಯ ಅಪರಿಚಿತ ಮೌನಿ