ಟಿ.ನರಸೀಪುರ : ಸಚಿವರಾದ ಡಾ ಎಚ್ ಸಿ ಮಹದೇವಪ್ಪ ಸಹಕಾರ ಪಡೆದು ಸಧ್ಯದಲ್ಲೇ ಗ್ರಾಮಕ್ಕೆ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಿಸುವುದಾಗಿ ಸಚಿವರ ಆಪ್ತರು ಹಾಗೂ ಗ್ರಾಮದ ಹಿರಿಯ ಮುಖಂಡರಾದ ಎಂ. ಡಿ. ಬಸವರಾಜು ತಿಳಿಸಿದರು.
ತಾಲ್ಲೂಕಿನ ಮೂಗೂರು ಗ್ರಾಮದಲ್ಲಿರುವ ಕೆ ಪಿ ಎಸ್ ಶಾಲೆಯ ಕಾಲೇಜು ವಿಭಾಗದಲ್ಲಿ ನಡೆದ ಕ್ರೀಡಾ ಸಾಂಸ್ಕೃತಿಕ ಚ

ಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಹೋಬಳಿ ಕೇಂದ್ರ ಸ್ಥಾನಕ್ಕೆ ವ್ಯಾಸಂಗ ಮಾಡಲು ಬರುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಗೆ ಗ್ರಾಮಕ್ಕೆ ಸಮೀಪವಿರುವ ನೂತನವಾಗಿ ನಿರ್ಮಾಣಗೊಂಡ ಹಾಲಿ ಕಟ್ಟಡವನ್ನೇ ದುರಸ್ತಿ ಗೊಳಿಸಿ ಸಚಿವರ ಗಮನಕ್ಕೆ ತಂದು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿ,ಸಮಿತಿಗಳು ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಆಸ್ಥೆ ವಹಿಸಿ ಕೈ ಜೋಡಿಸಬೇಕು.ವಿದ್ಯೆ ಖದಿಯಲಾಗದ ಸಂಪತ್ತು ಅದನ್ನು ಮೈಗೂಡಿಸಿಕೊಂಡು ಗ್ರಾಮದ ಹಿರಿಯ ಮಹನೀಯರಂತೆ ಸಾಧನೆ ಮಾಡಿ ಕಲಿತ ಶಾಲೆಗೆ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರೈಸ್ ಮಿಲ್ ಇಂಡಸ್ಟ್ರಿಯಲ್ ಉದ್ಯಮಿಗಳಾದ ಮೂಗೂರು ಸುಧಾಕರ್ ಮಾತನಾಡಿ,
ರುವಿದ್ಯಾರ್ಥಿಗಳು ಓದುವಾಗಲೇ ತಮ್ಮ ಗುರಿಯನ್ನು ನಿರ್ಧರಿಸಿ ಕೊಳ್ಳಬೇಕು ಯಾವುದೇ ದೌರ್ಬಲ್ಯಕ್ಕೆ ಒಳಗಾಗಿದೆ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ವ್ಯಾಸಂಗ ಬಗ್ಗೆ ಹೆಚ್ಚಿನ ಗಮನ ಆಸಕ್ತಿಯನ್ನು ನಿರಂತರವಾಗಿ ಉಳಿಸಿಕೊಂಡರೆ ಯಾವುದೇ ಸಾದನೆಯನ್ನಾದರೂ ಮಾಡಬಹುದು ಎಂದರು ಪ್ರತಿ ವರ್ಷದಂತೆ ಈ ಬಾರಿಯೂ ದ್ವಿತೀಯ ಪಿಯುಸಿಯಲ್ಲಿ 575 ಅಂಕ ಪಡೆದ ಪವಿತ್ರಳಿಗೆ 10 ಸಾ.ರೂಗಳನ್ನು ರೈಸ್ ಮಿಲ್ ಇಂಡಸ್ಟ್ರಿಯಲ್ ಮಾಲೀಕರಾದ ಸುಧಾಕರ್ ರವರು ನೀಡಿದರು. ಮೂಗೂರು ಗೆಳೆಯರ ಬಳಗ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಂ ಡಿ ಬಸವರಾಜು, ಕೆ ಪಿ ಎಸ್ ಶಾಲೆಯ ಉಪಾಧ್ಯಕ್ಷ ಎಂ ಎನ್ ಸೋಮಣ್ಣ, ಕಾಲೇಜು ಸಿಬಿಸಿ ಅಧ್ಯಕ್ಷ ಜಯಂತ್, ಎಸ್ಡಿಎಂಸಿ ಅಧ್ಯಕ್ಷ ಎಂ ರಂಗಸ್ವಾಮಿ, ಕಾಲೇಜಿನ ಪ್ರಾಂಶುಪಾಲರಾದ ರಾಚಯ್ಯ, ಉಪಪ್ರಾಂಶುಪಾಲ ಸಿ ಪುಟ್ಟಸ್ವಾಮಿ, ಮೂಗೂರು ಗೆಳೆಯ ಬಳಗದ ಡಾ. ಶಿವಕುಮಾರ್, ನಂಜಪ್ಪ, ಮಹದೇವ ಶೆಟ್ಟಿ, ಬಸವಣ್ಣ, ಜಯಪಾಲ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದ.
–ಟಿ.ನರಸೀಪುರ
