ಕೊರಟಿಕೇರಿ, ಜೂನ್ 13: ಚಿಕ್ಕಮಗಳೂರು ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾಂಸ್ಕೃತಿಕ ಗ್ರಾಮ ಕೊರಟಿಕೇರೆಯಲ್ಲಿ, 15 ವರ್ಷಗಳ ನಂತರ ದೇವಸ್ಥಾನಗಳ ಸಮ್ಮುಖದಲ್ಲಿ ನಡೆಯುತ್ತಿರುವ ಗ್ರಾಮದೇವತೆ ಶ್ರೀ ರಾಮಲಿಂಗೇಶ್ವರ ಹಾಗೂ ಚೌಡೇಶ್ವರಿ ಅಮ್ಮನವರ ಊರಹಬ್ಬ ಜಾತ್ರೆ ಮಹೋತ್ಸವ ಭಕ್ತಿ-ಭಾವನೆ, ಸಂಸ್ಕೃತಿ ಮತ್ತು ಜನಾಂಗಗಳ ಏಕತೆಯ ಸಡಗರದಲ್ಲಿ ನೆರವೇರಿತು.
ಈ ಪುಣ್ಯಸಂದರ್ಭದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಜಗದ್ಗುರು ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಸೇರಿದಂತೆ ಅದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ದೇವಾಂಗ ಗುರುಪೀಠದ ದಯಾನಂದಪುರಿ ಸ್ವಾಮೀಜಿ, ಮಂಡ್ಯದ ಶ್ರೀ ಪುರುಷೋತ್ತಮಾನಂದನಾಥ, ಬೆಡದಹಳ್ಳಿಯ ಶ್ರೀ. ರುದ್ರಮುನಿ ಸ್ವಾಮೀಜಿ ಮುಂತಾದ ಯತಿಶ್ರೀಗಳು ಭಾಗವಹಿಸಿ ಹಬ್ಬದ ಸಂಸ್ಕೃತಿ, ಶಾಂತಿ, ದಾನಧರ್ಮ, ಮತ್ತು ಭಕ್ತಿಯ ಮೌಲ್ಯಗಳ ಬಗ್ಗೆ ಆಶಯ ವ್ಯಕ್ತಪಡಿಸಿದರು.

ಮಹತ್ವದ ಉಲ್ಲೇಖಗಳು:
-
“ಸಂಸ್ಕೃತಿ ಉಳಿಸುವ ಹಬ್ಬಗಳು ಭಾವೈಕ್ಯತೆಯ ಭದ್ರಕೋಟೆ” ಎಂದು ಚುಂಚಶ್ರೀಗಳು ಕರೆ ನೀಡಿದರು.
-
“ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದಾಗ ಮಾತ್ರ ಶಾಂತಿ ಸಿಗುತ್ತದೆ” ಎಂಬ ನುಡಿಗಳನ್ನು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ರಾಜಕೀಯ ಹಾಗೂ ಸಾರ್ವಜನಿಕ ಹಾಜರಿ:

ಹಬ್ಬದ ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಟಿ. ಮಂಜು, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಎಂ.ಡಿ. ಲಕ್ಷ್ಮೀನಾರಾಯಣ್,ಮಂಡ್ಯದ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಬೆಡದ ಹಳ್ಳಿಯ ಶ್ರೀ ಪಂಚಭೂತೇಶ್ವರ ಮಠದ ಶ್ರೀ.ರುದ್ರಮುನಿ ಸ್ವಾಮೀಜಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ತುರುವೇಕೆರೆ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್ , ಬಿ. ಪ್ರಕಾಶ್, ಆರ್.ಟಿ.ಓ.ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಆರ್.ಟಿ.ಓ.ಮಲ್ಲಿಕಾರ್ಜುನ್, ಟೆಎಪಿಸಿಎಂಎಸ್ ನಿರ್ದೇಶಕ ಕೆ.ಎಸ್.ದಿನೇಶ್, ಸಮಾಜ ಸೇವಕ ಮೊಟ್ಟೆ ಮಂಜು, ಎಳೆನೀರು ವ್ಯಾಪಾರಿ ಕುಮಾರ್, ಬೆಂಗಳೂರಿನ ಮಹಿಳಾ ಹೋರಾಟಗಾರ್ತಿ ಮಹಾಲಕ್ಷ್ಮಿ, ಉಧ್ಯಮಿ ಡಾ.ಬಿ.ರಾಜಶೇಖರ್, ತಾ. ಪಂ. ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಶ್ರೀ ಚೌಡೇಶ್ವರಿ ದೇವಾಲಯ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಗೋವಿಂದರಾಜು, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಎನ್. ಕುಮಾರ್, ತಾಲೂಕು ಬಿಜೆಪಿ ಹಿರಿಯ ಉಪಾಧ್ಯಕ್ಷ ಭಾರತೀಪುರ. ಪುಟ್ಟಣ್ಣ, ತಾ.ಪಂ.ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ಕೆ.ಎಸ್.ರವಿಚಂದ್ರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಕೊರಟೀಕೆರೆ ರಾಜೇಶ್, ರವಿ, ಭಾರತೀಪುರ ಮಂಜುನಾಥ್ ಸೇರಿದಂತೆ ಸಾವಿರಾರು ಜನರು ಊರಹಬ್ಬದಲ್ಲಿ ಭಾಗವಹಿಸಿದ್ದರು. ಮತ್ತು ವಿವಿಧ ಸಮುದಾಯದ ನಾಯಕರು, ಸಾರ್ವಜನಿಕರು ಸಹಭಾಗಿಯಾಗಿದ್ದರು.

ವೈಭವದ ಮೆರವಣಿಗೆ ಹಾಗೂ ಜಾನಪದ ಕಲಾ ತಂಡಗಳು, ಸಾಧು ಸಂತರಿಗೆ ಬೆಳ್ಳಿಯ ಸಾರೋಟಿನಲ್ಲಿ ಮೆರವಣಿಗೆ ಮಾಡುವುದು ಈ ಹಬ್ಬದ ಆಕರ್ಷಣೆಯಾಗಿತ್ತು.
ಈ ಹಬ್ಬ, ಕೊರೋನಾ ಕಾರಣದಿಂದ ಮೂರು ವರ್ಷ ತಡವಾಗಿ ಆಯೋಜನೆಗೊಂಡು, 15 ವರ್ಷಗಳ ನಂತರ ಭಕ್ತಿ, ಸಂಸ್ಕೃತಿ ಮತ್ತು ಏಕತೆಯ ಪ್ರತೀಕವಾಗಿ ಉಜ್ವಲವಾಗಿ ನೆರವೇರಿತು
