ಭಾರತೀಯ ಯುವ ಸಾಹಿತ್ಯಕ್ಕೆ ಐತಿಹಾಸಿಕ ಹೆಜ್ಜೆ: ಯುವ ಪುಸ್ತಕ ಸರಣಿಗೆ ಭವ್ಯ ಚಾಲನೆ

FIHCR ಮತ್ತು ಓಲಾ ಫೌಂಡೇಶನ್ ಆಶ್ರಯದಲ್ಲಿ ಯುವಾ ಪುಸ್ತಕ ಸರಣಿಗೆ ಬೆಂಗಳೂರಿನಲ್ಲಿ ಭವ್ಯ ಚಾಲನೆ ದೊರೆಯಿತು. ಇತಿಹಾಸವನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದ ಈ ಸರಣಿಯು, ಆಂಗ್ಲದೊಂದಿಗೆ ಆರು ಭಾರತೀಯ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡು ಹೊಸ ದಾಖಲೆ ನಿರ್ಮಿಸಿದೆ.