
ಹಾಸನ : ಕರ್ನಾಟಕ ಮುನಿಸಿಪಾಲಿಟಿ ಮತ್ತು ಬಜೆಟಿಂಗ್ ರೂಲ್ಸ್-2006 ನಿಯಮ 133(2) , ಪ್ರಕಾರ ಹಾಸನ ನಗರಸಭೆಯ 2025-26 ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ತಯಾರಿಸುವ ಸಂಬಂಧ ನೊಂದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು, ನೊಂದಾಯಿತ ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳು, ಇತರೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ಮುಖಂಡರುಗಳು, ಹಿರಿಯ ನಾಗರೀಕರು, ಮಾದ್ಯಮದವರು ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಲು ಎರಡನೇ ಸುತ್ತಿನ ಸಾರ್ವಜನಿಕ ಸಮಾಲೋಚನೆ ಸಭೆಯನ್ನು ಫೆ.28 ರಂದು ಅಪರಾಹ್ನ 3.30 ಗಂಟೆಗೆ, ಅಧ್ಯಕ್ಷರು ನಗರಸಭೆ,ಹಾಸನ ರವರ ಅಧ್ಯಕ್ಷತೆಯಲ್ಲಿ ನಗರದ ಸಂತೇಪೇಟೆ ಬಿ.ಎಂ ರಸ್ತೆಯಲ್ಲಿರುವ ನಗರಸಭೆಯ “ಕುವೆಂಪು ಸಭಾಂಗಣ” ದಲ್ಲಿ ನಡೆಸಲಾಗುವುದು.
ಸದರಿ ಸಭೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಹಾಗೂ ರಾಜಕೀಯ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ನಗರಸಭೆಯ 2025-26 ನೇ ಸಾಲಿನಲ್ಲಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ, ಚರ್ಚಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.