
ಮಾರ್ನಿಂಗ್ ಕ್ವಿಕ್ ನ್ಯೂಸ್ ಟೈಮ್
1.ಮೋದಿ, ರಾಹುಲ್ ಗಾಂಧಿ ಸೇರಿದ ಆಯ್ಕೆ ಸಮಿತಿ ಇನ್ನೆರಡು ದಿನಗಳಲ್ಲಿಮುಂದಿನ ಮುಖ್ಯ ಚುನಾವಣಾ ಆಯುಕ್ತರು ಯಾರೆಂದು ನಿರ್ಧಾರಿಸಲಿದೆ.
ಚುನಾವಣಾ ಆಯೋಗವು ಸಿಇಸಿ ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ಹೊಂದಿದೆ – ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು. ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ಅವರನ್ನು ಚುನಾವಣಾ ಸಮಿತಿಯ ಮುಖ್ಯಸ್ಥರ ಸಂಭಾವ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಅವರ ಅಧಿಕಾರಾವಧಿ ಜನವರಿ 26, 2029 ರವರೆಗೆ ಇರುತ್ತದೆ.
******
2.’ಶೀಶ್ ಮಹಲ್’ ನವೀಕರಣ ಹಗರಣ- ತನಿಖೆಗೆ ಕೇಂದ್ರ ಆದೇಶ
40,000 ಚದರ ಗಜಗಳಷ್ಟು (8 ಎಕರೆ) ವಿಸ್ತೀರ್ಣದ ಐಷಾರಾಮಿ ಮಹಲು (‘ಶೀಶ್ ಮಹಲ್’) ನಿರ್ಮಿಸಲು ಕೇಜ್ರಿವಾಲ್ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ.
*****
3. ML 2025: ಮಾಸ್ಟರ್ಸ್ ಲೀಗ್ಗೆ ಭಾರತ ತಂಡ ಪ್ರಕಟ
ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಎಂಬುದು ಮಾಜಿ ಕ್ರಿಕೆಟರುಗಳ ಟಿ20 ಲೀಗ್. ಈ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಮಾಜಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಟೂರ್ನಿಗಾಗಿ ಇದೀಗ ಭಾರತವು 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
*****
4.ವಿಕೇಂದ್ರೀಕರಣ ಸೂಚ್ಯಂಕದ ಶ್ರೇಯಾಂಕದಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿ
ಸೂಚಕಗಳ ಒಟ್ಟಾರೆ ವಿಶ್ಲೇಷಣೆಯು ರಾಜ್ಯದ ಶ್ಲಾಘನೀಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತದೆ ಎಂದು ವರದಿ ಹೇಳುತ್ತದೆ. ಕೇಂದ್ರ ವಿನ್ಯಾಸಗೊಳಿಸಿದ ಲಂಬ ಯೋಜನೆಗಳಲ್ಲಿ ಗಣನೀಯ ಪಾತ್ರಗಳನ್ನು ನಿಯೋಜಿಸುವಾಗ ಪಂಚಾಯತ್ಗಳಿಗೆ ಗಮನಾರ್ಹ ಸಂಖ್ಯೆಯ ಕಾರ್ಯಗಳನ್ನು ನಿಯೋಜಿಸುತ್ತದೆ.
****
5. ಕುರುಬೂರು ಶಾಂತಕುಮಾರ್ ಗೆ ಕಾರು ಅಪಘಾತದಲ್ಲಿ ಗಂಭೀರ ಗಾಯ; ಪಂಜಾಬ್ನಿಂದ ಬೆಂಗಳೂರಿಗೆ ಏರ್ ಲಿಫ್ಟ್
ಕುರುಬೂರ್ ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ನಿನ್ನೆ ಪಂಜಾಬ್ನ ಪಟಿಯಾಲ ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
*****
6. 4.30 ಕೋ.ರೂ ವೆಚ್ಚದಲ್ಲಿ 1.84 ಲಕ್ಷ ಬೀದಿನಾಯಿಗಳಿಗೆ ಲಸಿಕೆ- ಬಿಬಿಎಂಪಿ ನಿರ್ಧಾರ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಯೋಜಿತ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೀದಿ ನಾಯಿಗಳಿಗೆ ಬಹು-ರೋಗ ಲಸಿಕೆಯನ್ನು ನೀಡುತ್ತಿರುವುದು ಇದೇ ಮೊದಲು ಎಂದು ಹೇಳಿದರು.
*****
7. ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಪ್ರತಿಭಟನೆ: ಎಬಿವಿಪಿ ಕಾರ್ಯಕರ್ತರ ವಿರುದ್ಧ FIR
ಅನುಮತಿ ಪಡೆಯದೆ ನಾಡಪ್ರಭು ಕೆಂಪೇಗೌಡ(ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಯ 16 ABVP ಕಾರ್ಯಕರ್ತರ ವಿರುದ್ಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
*****
8. ಕಾಳಿ ನದಿ ಸೇತುವೆ ಪಿಲ್ಲರ್ ದಿಢೀರ್ ಕುಸಿತ; ತಪ್ಪಿದ ಭಾರೀ ಅನಾಹುತ
ಕಳೆದ ವರ್ಷ ಆಗಸ್ಟ್ 7 ರಂದು ಕಾಳಿ ಸೇತುವೆ ಕುಸಿತಗೊಂಡಿತ್ತು. ಕುಸಿದು ಬಿದ್ದಿದ್ದ ಕಾಳಿ ಸೇತುವೆ ದುರಸ್ತಿ ಮಾಡುತ್ತಿದ್ದಾಗ ಫಿಲ್ಲರ್ ಕುಸಿದು ಸ್ಲ್ಯಾಬ್ ಸಹಿತ ನದಿಗೆ ಬಿದ್ದ ಪರಿಣಾಮ ಹೊಸ ಸೇತುವೆಗೆ ಸಂಭವಿಸಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
*****
9. ಡೆಂಗ್ಯೂ ಹರಡಲು ಕಾರಣರಾಗುವವರಿಗೆ ಭಾರಿ ದಂಡ ವಿಧಿಸುವ ನಿಯಮ ಜಾರಿಗೆ ಹೈಕೋರ್ಟ್ ಆದೇಶ
ಡೆಂಗ್ಯೂ ರೋಗ ಪೀಡಿತರು ಗುಣಮುಖರಾಗಲು ಕೇವಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದೇ ತಮ್ಮ ಕರ್ತ್ಯವ್ಯ ಎಂದು ಭಾವಿಸದೆ, ಈ ರೋಗ ಹರಡುವುದಕ್ಕೆ ಕಾರಣರಾಗುವ ವ್ಯಕ್ತಿಗಳು, ಸಂಘ ಸಂಸ್ಥೆಗಳು ಹಾಗೂ ವಸತಿ ಸಮುಚ್ಚಯಗಳಿಗೆ ಭಾರೀ ದಂಡಕ್ಕೆ ಗುರಿಪಡಿಸುವಂತಹ ನಿಯಮಗಳನ್ನು ಜಾರಿ ಮಾಡುವಂತಾಗಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
******
10. ದೌರ್ಜನ್ಯ, ದಬ್ಬಾಳಿಕೆ ಬಹಳ ದಿನ ನಡೆಯಲ್ಲ: ಇದು ಮುಕ್ತಾಯವಲ್ಲ- ಹೊಸ ಅಧ್ಯಾಯ; ನಿಖಿಲ್ ಕುಮಾರಸ್ವಾಮಿ
ರಾಮನಗರದಲ್ಲಿ ಧಮ್, ತಾಕತ್ ಬಗ್ಗೆ ಮಾತನಾಡುತ್ತೀರಿ. ಈ ಪ್ರಕರಣದ ಬಗ್ಗೆಯೂ ಎಫ್ಐಆರ್ ಹಾಕಿ, ತನಿಖೆ ಮಾಡಿಸಿ” ಎಂದು ಆಗ್ರಹಿಸಿದರು.