ಶುಭೋದಯ
ಅನೇಕರ ಮನಸ್ಸಿನಲ್ಲಿ, ಅದರಲ್ಲಿಯೂ ಯುವಕರ ಮನಸ್ಸಿನಲ್ಲಿ,
ವಿಚಾರವಾದ ಅಂದರೆ ನಾಸ್ತಿಕವಾದ ಎಂಬ ಭಾವನೆ ಇದೆ. ಅನೇಕ ಹಿರಿಯರೂ ಕೂಡ ಆ ಭಾವನೆ ಬರುವ ಹಾಗೇ ಮಾತನಾಡುತ್ತಾರೆ.
ವಿಚಾರವಾದ ಅನ್ನುವುದು ನಾಸ್ತಿಕವಾದ ಅಲ್ಲ.
-
– ಕುವೆಂಪು
********************************************************
1. IND vs NZ: ಮಳೆಯಿಂದ 3 ಪಂದ್ಯಗಳು ರದ್ದು; ಭಾರತ- ಕಿವೀಸ್ ಪಂದ್ಯಕ್ಕೂ ಇದೆಯಾ ಮಳೆಯ ಆತಂಕ?
Champions Trophy 2025: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮಾರ್ಚ್ 2 ರಂದು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಲಿವೆ. ದುಬೈ ಪಿಚ್ ಬ್ಯಾಟ್ಸ್ಮನ್ಗಳಿಗೆ ಸವಾಲಾಗಿದ್ದು, ಆರಂಭದಲ್ಲಿ ವೇಗದ ಬೌಲರ್ಗಳು, ನಂತರ ಸ್ಪಿನ್ನರ್ಗಳು ಮೇಲುಗೈ ಸಾಧಿಸಬಹುದು. ಅದರಲ್ಲೂ ಗುರಿ ಬೆನ್ನಟ್ಟುವ ತಂಡಕ್ಕೆ ಬ್ಯಾಟಿಂಗ್ ಕಷ್ಟಕರವಾಗಲಿದೆ. ಹವಾಮಾನವು ಅನುಕೂಲಕರವಾಗಿದ್ದು, ಮಳೆಯಾಗುವ ಸಾಧ್ಯತೆಗಳಿಲ್ಲ.

**************************************************
2.ಆನ್ಲೈನ್ ವಹಿವಾಟುಗಳಲ್ಲಿ ಯಾವುದೇ ಸಮಸ್ಯೆ ಆಗದು; ಇಡಿ ನೋಟಿಸ್ಗೆ ಪೇಟಿಎಂ ಪ್ರತಿಕ್ರಿಯೆ
2015ರಿಂದ 2019ರವರೆಗಿನ 2 ಅಂಗಸಂಸ್ಥೆಗಳಾದ ಲಿಟಲ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ನಿಯರ್ಬೈ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ವಾಧೀನಕ್ಕೆ ಸಂಬಂಧಿಸಿದ ಉಲ್ಲಂಘನೆಗಳಿಗೆ ಶೋಕಾಸ್ ನೋಟಿಸ್ ಸಂಬಂಧಿಸಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ. ತನ್ನ ಗ್ರಾಹಕರು ಮತ್ತು ಪಾಲುದಾರರಿಗೆ ನಿರಂತರ ಸೇವೆಗಳನ್ನು ಖಚಿತಪಡಿಸಿಕೊಳ್ಳುವುದು ಪೇಟಿಎಂ ಕಂಪನಿಯ ಆದ್ಯತೆಯಾಗಿದೆ.

***********************************************
3.ಅರಣ್ಯ ಭೂಮಿ ಒತ್ತುವರಿ ಆರೋಪ: ಸಚಿವ ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು
ಬೆಂಗಳೂರು: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳು ಎಸ್. ವೈದ್ಯ ಅವರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಾಗಿದೆ. ಕಾರವಾರ ಜಿಲ್ಲೆಯ ಭಟ್ಕಳ ಪಟ್ಟಣದ ಆರ್ಟಿಐ ಕಾರ್ಯಕರ್ತರಾದ ಶಂಕರ್ ನಾಯಕ್, ನಾಗೇಂದ್ರ ನಾಯಕ್ ಮತ್ತು ನಾಗೇಶ್ ನಾಯಕ್ ಅವರು ಸಚಿವ ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

*********************************************
4.ಬೆಂಗಳೂರು ವಿವಿ-ICSI ನಡುವೆ ಶೈಕ್ಷಣಿಕ ಒಪ್ಪಂದ: 2030 ರ ವೇಳೆಗೆ 30 ಸಾವಿರ ಹೆಚ್ಚುವರಿ ಹುದ್ದೆಗಳ ಸೃಷ್ಟಿ!
ಬೆಂಗಳೂರು: ಕೇಂದ್ರ ಸಾಂಸ್ಥಿಕ ವ್ಯವಹಾರಗಳ ವ್ಯಾಪ್ತಿಗೆ ಒಳಪಡುವ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ – ಬೆಂಗಳೂರು ಚಾಪ್ಟರ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ನಡುವೆ ಶಿಕ್ಷಣದಲ್ಲಿ ಸಹಭಾಗಿತ್ವ ಹೊಂದಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹಕಾರ ಪ್ರಾರಂಭವಾಗಲಿವೆ ಎಂದು ಐಸಿಎಸ್ಐ ನೂತನ ರಾಷ್ಟ್ರೀಯ ಅಧ್ಯಕ್ಷ ಸಿ.ಎಸ್. ಧನಂಜಯ್ ಶುಕ್ಲಾ ಹೇಳಿದ್ದಾರೆ.

*********************************************
5.ಕಾಂಗ್ರೆಸ್ ಸರ್ಕಾರ ಸುಭದ್ರ, ಅದೃಷ್ಟ ಒಲಿದು ಬಂದಾಗ ಡಿಕೆಶಿ CM ಆಗ್ತಾರೆ: ಜಿ.ಟಿ ದೇವೇಗೌಡ
ಮೈಸೂರು: ಸದ್ಯ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಅದೃಷ್ಟ ಒಲಿದು ಬಂದಾಗ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಭಾರೀ ಭದ್ರವಾಗಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಇದ್ದಾರೆ. 138 ಸ್ಥಾನದಿಂದ ಕಾಂಗ್ರೆಸ್ ಸುಭ್ರದ್ರವಾಗಿದೆ.

********************************************


[…] ಮಾರ್ನಿಂಗ್ ಕ್ವಿಕ್ ನ್ಯೂಸ್ ಟೈಮ್ […]