ಶುಭೋದಯ
ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ , ಶಿಕ್ಷಿಸುವ ಅಧಿಕಾರ ಉಂಟು.
– ರವೀಂದ್ರನಾಥ್ ಟ್ಯಾಗೋರ್.
********************************
1.Champions Trophy 2025: ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಗೆ ಭರ್ಜರಿ ಜಯ, ಫೈನಲ್ ಗೆ New Zealand ಲಗ್ಗೆ!
ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಭರ್ಜರಿ ಜಯ ಸಾಧಿಸಿದ್ದು, ಫೈನಲ್ ನಲ್ಲಿ ಭಾರತದ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾಗೆ ಗೆಲ್ಲಲು 363 ರನ್ಗಳ ಗುರಿ ನೀಡಿತ್ತು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ 9ವಿಕೆಟ್ ನಷ್ಟಕ್ಕೆ 312 ರನ್ ಗಳನ್ನಷ್ಟೇ ಶಕ್ತವಾಯಿತು. ಆ ಮೂಲಕ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು.
***************************************
2.ಗೋಹತ್ಯೆ ನಿಷೇಧಕ್ಕೆ ಒತ್ತಾಯದ ನಡುವೆ ಭಾರತದಲ್ಲಿ ಗೋಮಾಂಸ ಉತ್ಪಾದನೆ, ರಫ್ತು 2025 ರಲ್ಲಿ ಹೆಚ್ಚಳ!
ನವದೆಹಲಿ: ದೇಶಾದ್ಯಂತ ಗೋಹತ್ಯೆ ನಿಷೇಧ ಕಾಯ್ದೆಯ ಜಾರಿ ಬಗ್ಗೆ ಆಗ್ರಹ ಕೇಳಿಬರುತ್ತಿರುವಾಗಲೇ ಇಂಥದ್ದೊಂದು ವರದಿ ಪ್ರಕಟವಾಗಿದೆ.
ಅಮೆರಿಕಾದ ಕೃಷಿ ಇಲಾಖೆಯ ಮುನ್ನೋಟದ ಪ್ರಕಾರ, ಭಾರತದಲ್ಲಿ ಗೋಮಾಂಸ ಉತ್ಪಾದನೆ ಹಾಗೂ ರಫ್ತು 2025 ರಲ್ಲಿ ಹೆಚ್ಚಳ ಕಾಣಲಿದೆ. ದನದ ಮಾಂಸ ಉತ್ಪಾದನೆ, ರಫ್ತಿನೆಡೆಗೆ ಭಾರತ ಸರ್ಕಾರದ ನೀತಿ ಬೆಂಬಲವನ್ನು ಇದು ಸೂಚಿಸುತ್ತಿದೆ. ಇದರ ಪರಿಣಾಮವಾಗಿ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಹೆಚ್ಚಳವಾಗಲಿದೆ.
2024 ರಲ್ಲಿ 4.57 MMT ಇದ್ದ ಗೋಮಾಂಸ ಉತ್ಪಾದನೆ ಈ ವರ್ಷ 4.64 ಮಿಲಿಯನ್ ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದ್ದರೆ, ಕಳೆದ ವರ್ಷ 1.56 ಮೆಟ್ರಿಕ್ ಟನ್ ಇದ್ದ ರಫ್ತು ಈ ವರ್ಷ 1.64 ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದೆ.
*****************************************
3.ಗ್ರಾಹಕರಿಗೆ ವಿದ್ಯುತ್ ಸ್ಮಾರ್ಟ್ ಮೀಟರ್ ಶಾಕ್: ದರ ಶೇ.400ರಿಂದ 800ರಷ್ಟು ಏರಿಕೆ
ವಿದ್ಯುತ್ ದರ ಏರಿಕೆಯ ಸಲುವಾಗಿ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದ್ದು, ಈಗಾಗಲೇ ಗ್ರಾಹಕರಿಗೆ ನಡುಕ ಶುರುವಾಗಿದೆ. ಇದರ ಮಧ್ಯೆ ಹಲವು ವರ್ಷಗಳಿಂದ ಇಂಧನ ಇಲಾಖೆ ಜಾರಿ ಮಾಡಲು ಉದ್ದೇಶಿಸಿದ್ದ ಸ್ಮಾರ್ಟ್ ಮೀಟರ್ಗಳ ಅಳವಡಿಕೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಫೆಬ್ರವರಿ 15 ರಿಂದ ಅನ್ವಯ ಆಗುವಂತೆ ಸ್ಮಾರ್ಟ್ ಮೀಟರ್ ಗಳ ಅಳವಡಿಕೆ ಕಡ್ಡಾಯಗೊಳಿಸಿ ಬೆಸ್ಕಾಂ ಆದೇಶ ಹೊರಡಿಸಿದೆ.
********************************
4.ಭಾರತದ ಮೇಲೆ ಅಮೆರಿಕದ ಟ್ಯಾರಿಫ್ ಪರಿಣಾಮ ಯಾಕೆ ನಗಣ್ಯ? ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ನಲ್ಲಿ ಕೇಕಿ ಮಿಸ್ತ್ರಿ ಉತ್ತರ
Keki Mistry speaks at Money9 Financial Freedom Summit 2025: ಅಮೆರಿಕದ ಸರ್ಕಾರ ಜಾರಿಗೆ ತಂದಿರುವ ರೆಸಿಪ್ರೋಕಲ್ ಟ್ಯಾರಿಫ್ ಕ್ರಮ ಭಾರತದ ಮೇಲೆ ಎಷ್ಟು ಪರಿಣಾಮ ಬೀರಬಹುದು ಎನ್ನುವುದು ಚರ್ಚೆಯ ಸರಕಾಗಿದೆ. ಟಿವಿ9 ನೆಟ್ವರ್ಕ್ ಆಯೋಜಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಕಾರ್ಯಕ್ರಮದಲ್ಲಿ ಎಚ್ಡಿಎಫ್ಸಿ ಸಿಇಒ ಕೇಕಿ ಮಿಸ್ತ್ರಿ ಮಾತನಾಡುತ್ತಾ, ಈ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅವರ ಪ್ರಕಾರ ಅಮೆರಿಕದ ಟ್ಯಾರಿಫ್ ಕ್ರಮದಿಂದ ಭಾರತದ ಜಿಡಿಪಿ ಮೇಲೆ ಹೆಚ್ಚೆಂದರೆ ಶೇ. 2-3ರಷ್ಟು ಪರಿಣಾಮ ಬೀರಬಹುದು.
******************************
5.ಬೆಂಗಳೂರಿನಲ್ಲಿ ವೈಟ್ ಆ್ಯಂಡ್ ಬ್ಲಾಕ್ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: ಮೂವರ ಬಂಧನ
ಬೆಂಗಳೂರಿನಲ್ಲಿ ನಡೆದ ಒಂದು ಕೋಟಿ ರೂ. ದರೋಡೆಯಲ್ಲಿ ಮೂವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ವೈಟ್ ಆ್ಯಂಡ್ ಬ್ಲಾಕ್ ಹೆಸರಿನಲ್ಲಿ ವಂಚಿಸಿ ಒಂದು ಕೋಟಿ ರೂ ದರೋಡೆ ಮಾಡಲಾಗಿತ್ತು. ಆದರೆ ಒಬ್ಬ ಆರೋಪಿಯನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
**********************************