ಶುಭೋಧಯ
ನಮ್ಮಲ್ಲಿ ಎಷ್ಟೇ ಯುಕ್ತಿ ಸಾಧನವಿರಲಿ(Resource),
ಎಲ್ಲಿಯ ತನಕ ನಮಗೆ ಆ ಸಾಧನವನ್ನು ನಿಯಮಬದ್ಧವಾಗಿ ಉಪಯೋಗಿಸಿಕೊಳ್ಳಲು ಬರುವುದಿಲ್ಲವೋ
ಅಲ್ಲಿಯ ತನಕ ಆ ಸಾಧನ ಇದ್ದೂ ವ್ಯರ್ಥ
– ಭಗವದ್ಗೀತೆ
*********************************************************************
1.ರಷ್ಯಾದ ಮೇಲೆ ಹೊಸ ನಿರ್ಬಂಧ, ಸುಂಕದ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್!
ವಾಷಿಂಗ್ಟನ್: ಉಕ್ರೇನ್ ಗೆ ಮಿಲಿಟರಿ ನೆರವು ಬಂದ್ ಮಾಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ಮೇಲೆ ಹೊಸ ನಿರ್ಬಂಧ ಮತ್ತು ಸುಂಕದ ಬೆದರಿಕೆ ಹಾಕಿದ್ದಾರೆ.
ಹೌದು. “ರಷ್ಯಾ ಇದೀಗ ಯುದ್ಧಭೂಮಿಯಲ್ಲಿ ಉಕ್ರೇನ್ ಅನ್ನು ಸಂಪೂರ್ಣವಾಗಿ ‘ಬಡಿಯುತ್ತಿದೆ’ ಎಂಬ ಅಂಶವನ್ನು ಆಧರಿಸಿ, ಕದನ ವಿರಾಮ ಮತ್ತು ಶಾಂತಿಯ ಅಂತಿಮ ಇತ್ಯರ್ಥ ಒಪ್ಪಂದ ಆಗುವವರೆಗೆ ನಾನು ರಷ್ಯಾದ ಮೇಲೆ ದೊಡ್ಡ ಪ್ರಮಾಣದ ಬ್ಯಾಂಕಿಂಗ್ ನಿರ್ಬಂಧಗಳು, ನಿರ್ಬಂಧಗಳು ಮತ್ತು ಸುಂಕಗಳನ್ನು ಹಾಕಲಾಗುವುದು ಎಂದು ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ರಷ್ಯಾ ಮತ್ತು ಉಕ್ರೇನ್ ಈಗ ತಡಮಾಡದೆ ಮಾತುಕತೆ ನಡೆಸಿ ಎಂದು ಅವರು ಹೇಳಿದ್ದಾರೆ.
********************************************
2.ಬೆಂಗಳೂರಿನಲ್ಲಿ ವಿಶ್ವೇಶ ತೀರ್ಥ ಸ್ಮಾರಕ ಆಸ್ಪತ್ರೆ ಉದ್ಘಾಟಿಸಿದ ಅಮಿತ್ ಶಾ
ಬೆಂಗಳೂರು: ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಶ್ರೀ ಕೃಷ್ಣ ಸೇವಾಶ್ರಮ ಟ್ರಸ್ಟ್ ನಿರ್ಮಿಸಿರುವ ಶ್ರೀ ವಿಶ್ವೇಶ ತೀರ್ಥ ಸ್ಮಾರಕ ಆಸ್ಪತ್ರೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಉದ್ಘಾಟಿಸಿದರು. ಇದನ್ನು 60 ಕೋಟಿ ರೂ. ವೆಚ್ಚದಲ್ಲಿ, ಎರಡು ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, 150 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಸಮಾಜದ ಬಡವರು ಮತ್ತು ಹಿಂದುಳಿದ ವರ್ಗಗಳಿಗೆ ಉಚಿತ ಚಿಕಿತ್ಸೆಗಾಗಿ ಆಧುನಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮುಂಬರುವ ಹಲವು ವರ್ಷಗಳವರೆಗೆ ಜನರಿಗೆ ಸೇವೆ ನೀಡಲಿದೆ ಎಂದು ಹೇಳಿದರು.

***********************************************
3.ಬಾಂಗ್ಲಾದೇಶದ ‘ಹಿಂಸಾತ್ಮಕ ಉಗ್ರರ’ ಬಿಡುಗಡೆಯ ಬಗ್ಗೆ ಭಾರತ ಕಳವಳ!
ನವದೆಹಲಿ: ಬಾಂಗ್ಲಾದೇಶದ ಜೈಲಿನಿಂದ ಹಿಂಸಾತ್ಮಕ ಉಗ್ರರ ಬಿಡುಗಡೆಯ ಬಗ್ಗೆ ಭಾರತ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದು, ಹಿಂದೂಗಳು, ಇತರ ಅಲ್ಪಸಂಖ್ಯಾತರು ಮತ್ತು ಅವರ ಧಾರ್ಮಿಕ ಸಂಸ್ಥೆಗಳನ್ನು ರಕ್ಷಿಸುವುದು ಮಧ್ಯಂತರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಒತ್ತಾಯಿಸಿದೆ.
ಬಾಂಗ್ಲಾದೇಶದ ಆಂತರಿಕ ಪರಿಸ್ಥಿತಿಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ನಾವು ಸ್ಥಿರ, ಶಾಂತಿಯುತ, ಅಂತರ್ಗತ ಮತ್ತು ಪ್ರಗತಿಪರ ಬಾಂಗ್ಲಾದೇಶವನ್ನು ಬೆಂಬಲಿಸುತ್ತೇವೆ. ಇದರಲ್ಲಿ ಎಲ್ಲಾ ಸಮಸ್ಯೆಗಳನ್ನು ಪ್ರಜಾಪ್ರಭುತ್ವ ವಿಧಾನ ಮತ್ತು ಎಲ್ಲರನ್ನೂ ಒಳಗೊಳುವ ಚುನಾವಣೆ ನಡೆಸುವ ಮೂಲಕ ಪರಿಹರಿಸಲಾಗುತ್ತದೆ ಎಂದು ಹೇಳಿದರು.

******************************************
4.IND vs NZ: ಪ್ರಯಾಸದ ಪ್ರಯಾಣ; ಫೈನಲ್ಗೂ ಮುನ್ನ ನೆಪ ಹೇಳಲು ಶುರು ಮಾಡಿದ ನ್ಯೂಜಿಲೆಂಡ್
Champions Trophy 2025: ಭಾರತ ತಂಡ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಓಟ ಮುಂದುವರೆಸಿ ಫೈನಲ್ಗೆ ಪ್ರವೇಶಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ, ವಿದೇಶಿ ತಂಡಗಳು ಒಂದೇ ಮೈದಾನದ ಲಾಭ ಪಡೆಯುತ್ತಿದೆ ಎಂದು ಆರೋಪಿಸುತ್ತಿವೆ. ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೀಡ್, ದುಬೈ ಪರಿಸ್ಥಿತಿ ಮತ್ತು ವರುಣ್ ಚಕ್ರವರ್ತಿಯ ಬೌಲಿಂಗ್ನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಫೈನಲ್ನಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ.

**************************************************
5. ಬೆಂಗಳೂರು: ಮಾರ್ಚ್ 9 ರಂದು ಪೊಲೀಸ್ ಓಟ; 10,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ!
ಬೆಂಗಳೂರು: ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಮಾರ್ಚ್ 9ರಂದು ಆಯೋಜಿಸಲಾಗಿರುವ ಪೊಲೀಸ್ ಓಟ(KSP RUN)ದಲ್ಲಿ ಪೊಲೀಸ್ ಸಿಬ್ಬಂದಿ, ಸೈನಿಕರು, ಕ್ರೀಡಾಪಟುಗಳು ಸೇರಿದಂತೆ 10,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷವಾಕ್ಯದಡಿ ನಡೆಯಲಾಗುತ್ತಿರುವ ಓಟದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ, ಸೈಬರ್ ಅಪರಾಧ, ಹಸಿರು ಬೆಂಗಳೂರು ಕುರಿತು ಅರಿವು ಮೂಡಿಸಲಾಗುತ್ತಿದೆ. ಅಂದು ಬೆಳಗ್ಗೆ 6-30ಕ್ಕೆ 10 ಕಿ. ಮೀ ಓಟ ಹಾಗೂ 7-30 ಕ್ಕೆ 5 ಕಿ. ಮೀ ಓಟ ಆರಂಭವಾಗಲಿದೆ.


