
ಶುಭೋದಯ
ಯಾವಾಗ ಮೌನದಿಂದಿರಬೇಕು ಎಂಬುದನ್ನು ತಿಳಿಯದವನಿಗೆ
ಯಾವಾಗ ಮಾತನಾಡಬೇಕು ಎಂಬುದೂ ತಿಳಿಯುವುದಿಲ್ಲ
—ಪ.ಸೈರಸ್
***********************************************************************************************
1. ಜಟಾಪಟಿ ನಡುವೆ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕಾರ: ವಿಪಕ್ಷಗಳಿಂದ ಸಭಾತ್ಯಾಗ
ಕರ್ನಾಟಕ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಉದ್ವಿಗ್ನ ಚರ್ಚೆಯ ನಡುವೆ ಅಂಗೀಕಾರಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಮಂಡಿಸಿದ ಮಸೂದೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತಾದರೂ, ಅಂಗೀಕಾರ ಕಂಡಿದೆ. ಈ ವೇಳೆ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭಾತ್ಯಾಗ ಮಾಡಿದ್ದಾರೆ.
********************************************
2.ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕರ್ತವ್ಯ ನಿರ್ವಹಣೆ ಕಡ್ಡಾಯ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಬೆಂಗಳೂರು : ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕಾರ್ಯ ನಿರ್ವಹಿಸಲಿದ್ದು, ಯಾವುದೇ ಕಾರಣಕ್ಕೂ ಬೇರೆ ಸ್ಥಳಗಳಲ್ಲಿ ಪ್ರಾಕ್ಟೀಸ್ ಮಾಡುವಂತಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
*****************************************************************************
3.ಇ–ಕಾಮರ್ಸ್ ಕಂಪನಿಗಳು APMC ನಿಯಂತ್ರಣಕ್ಕೆ: ತಿದ್ದುಪಡಿ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ
ತಿದ್ದುಪಡಿ ಮಸೂದೆ ಪರಿಣಾಮವಾಗಿ ಉಗ್ರಾಣಗಳಲ್ಲಿ (ವೇರ್ ಹೌಸ್) ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೂ ಸೆಸ್ ಪಾವತಿ ಕಡ್ಡಾಯವಾಗಲಿದೆ. ಇದರೊಂದಿಗೆ ಇ- ಪ್ಲಾಟ್ ಫಾರ್ಮ್ ಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ನೀಡುವ, ಸೆಸ್ ವಿಧಿಸಿ, ವಸೂಲಿ ಮಾಡುವ ಮತ್ತು ಪರವಾನಗಿ ರದ್ದುಪಡಿಸುವ ಅಥವಾ ಅಮಾನತುಪಡಿಸುವ ಅಧಿಕಾರ ಎಪಿಎಂಸಿ ಅಧಿಕಾರಿಗಳಿಗೆ ಲಭಿಸಲಿದೆ.
**************************************************
4.ಅನ್ಯ ಧರ್ಮದ ಯುವತಿಯರನ್ನ ಪ್ರೀತಿಸಿ ಮದುವೆಯಾಗಿ: ನನ್ನ ಹೇಳಿಕೆಗೆ ನಾನು ಬದ್ಧ ಎಂದ ಸೂಲಿಬೆಲೆ
ಮಂಗಳೂರಿನಲ್ಲಿ ಟಿವಿ9 ಜೊತೆಗೆ ಮಾತನಾಡಿರುವ ಚಕ್ರವರ್ತಿ ಸೂಲಿಬೆಲೆ, ಲವ್ ಜಿಹಾದ್ ಅಂದರೆ ಅವರು ಪ್ರೀತಿ ಅಂತಾರೆ. ಅದಕ್ಕೆ ನಾನು ನೀವು ಕೂಡ ಪ್ರೀತಿ ಮಾಡಿ ಮದುವೆ ಆಗಿ ಅಂತಾ ಹೇಳಿದ್ದೀನಿ. ನಿನ್ನೆಯ ಹೇಳಿಕೆಗೆ ನಾನು ಬದ್ದವಾಗಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆಗೆ DYFI ಮತ್ತು SDPI ನಂತಹ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
********************************************************************************
5.ಏಪ್ರಿಲ್ 1, 2025 ರಿಂದ ದೇಶದಲ್ಲಿ ಎಲ್ಲ ಬ್ಯಾಂಕ್ಗಳ ಯುಪಿಐ ವಹಿವಾಟುಗಳು ಸ್ಥಗಿತ?
UPI New Rules: ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ. ಏಪ್ರಿಲ್ 1, 2025 ರಿಂದ UPI ವಹಿವಾಟುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಗ್ರಾಹಕರು ಈ ಸೇವೆಯನ್ನು ಮೊದಲಿನಂತೆಯೇ ಬಳಸುವುದನ್ನು ಮುಂದುವರಿಸುತ್ತಾರೆ. ಆದಾಗ್ಯೂ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
********************************