
ಶುಭೋದಯ
ಜ್ಞಾನಿ ಎಂದರೆ ಯಾರು..?? ಯಾವ ಕ್ಷಣವೂ ಕೂಡ ಜೀವನ ಭಾರ ಎನಿಸಿಕೊಳ್ಳದೆ, ಪ್ರತಿ ಕ್ಷಣವನ್ನು ಆನಂದಿಸುವ ಕಲೆಯನ್ನು ಹೊಂದಿದವನೇ ಜ್ಞಾನಿ.
ನೆಮ್ಮದಿಯ ಜೀವನವು ಯಶಸ್ವಿ ಜೀವನಕ್ಕಿಂತ ಶ್ರೇಷ್ಠವಾದದ್ದು ಏಕೆಂದರೆ ಯಶಸ್ಸನ್ನು ಬೇರೆಯವರ ಯಶಸ್ವಿನಿಂದ ಅಳೆಯುತ್ತಾರೆ.
******************
1. ಸಿದ್ದರಾಮಯ್ಯ ನಮ್ಮ ನಾಯಕ, ಎಲ್ಲಾ ಚುನಾವಣೆಗೆ ಬೇಕು: ಸಿದ್ದು ಹೆಸರು ದುರ್ಬಳಕೆ ಬೇಡ ಎಂದ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ, ಅವರೇ ನಮ್ಮ ನಾಯಕ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಸಿದ್ದು ಆಪ್ತ ಸಚಿವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದು ಆಪ್ತ ಸಚಿವರ ಹೇಳಿಕೆಗಳನ್ನೇ ದಾಳವಾಗಿ ತಿರುಗೇಟು ನೀಡಿರುವ ಅವರು, ರಾಜ್ಯ ಕಾಂಗ್ರೆಸ್ನ ಪಟ್ಟದ ಆಟಕ್ಕೆ ಟ್ವಿಸ್ಟ್ ನೀಡಿದ್ದಾರೆ. ಸಿದ್ದರಾಮಯ್ಯನೇ ನಮ್ಮ ನಾಯಕ, ಅವರ ಹೆಸರು ದುರುಪಯೋಗ ಬೇಡ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
**************************************
2. ಭಾರತದಲ್ಲಿ ಸೂಪರ್ಸೋನಿಕ್ ರಾಮ್ಜೆಟ್ ಎಂಜಿನ್ ನಿರ್ಮಿಸಿದ ಮೊದಲ ಖಾಸಗಿ ಕಂಪನಿ
ಬೆಂಗಳೂರಿನ ಹೈಪ್ರಿಕ್ಸ್ ಎನ್ನುವ ಹೊಸ ಸ್ಟಾರ್ಟಪ್ವೊಂದು ಸೂಪರ್ಸೋನಿಕ್ ರಾಮ್ಜೆಟ್ ಎಂಜಿನ್ ಅಭಿವೃದ್ಧಿಪಡಿಸಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಖಾಸಗಿ ಸಂಸ್ಥೆ ಎನಿಸಿದೆ. ಕೇವಲ ಐದು ತಿಂಗಳಲ್ಲಿ ತೇಜ್ ಹೆಸರಿನ ಈ ಎಂಜಿನ್ ತಯಾರಿಸಿರುವುದ ಗಮನಾರ್ಹ. ಹೈಪ್ರಿಕ್ಸ್ ಸಂಸ್ಥೆ ಈಗ ಕಿರಾ ಎಂ1 ಎನ್ನುವ ಆರ್ಟಿಲರಿ ಶೆಲ್ಗಳನ್ನು ನಿರ್ಮಿಸಲು ಮುಂದಾಗಿದೆ.
*************************************
3. ಗೊಂದಲಮಯ ಪ್ರಕಟಣೆಗಳಿಂದಾಗಿ ಕಾಲ್ತುಳಿತ: ಪ್ರಾಥಮಿಕ ತನಿಖೆ ಬಳಿಕ ದೆಹಲಿ ಪೊಲೀಸ್ ಮಾಹಿತಿ!
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಪ್ಲಾಟ್ಫಾರ್ಮ್ 16 ರಲ್ಲಿ ಪ್ರಯಾಗ್ರಾಜ್ ವಿಶೇಷ ರೈಲಿನ ಆಗಮನದ ಘೋಷಣೆಯು ಪ್ಲಾಟ್ಫಾರ್ಮ್ 14 ರಲ್ಲಿ ಪ್ರಯಾಗ್ರಾಜ್ ಎಕ್ಸ್ಪ್ರೆಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರಲ್ಲಿ ಭಾರಿ ಗೊಂದಲವನ್ನು ಉಂಟುಮಾಡಿತು. ಜನಸಂದಣಿ ನಿರ್ವಹಣೆ ಮತ್ತು ರೈಲ್ವೆ ಪ್ರಕಟಣೆಗಳಲ್ಲಿನ ಗಂಭೀರ ಲೋಪವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
************************************
4. ಅಮೆರಿಕಾದಿಂದ ಗಡಿಪಾರಾದ 112 ಭಾರತೀಯರ 3ನೇ ಬ್ಯಾಚ್ ಇಂದು ಭಾರತಕ್ಕೆ
ಅಮೆರಿಕದಿಂದ ಗಡಿಪಾರು ಮಾಡಲಾದ 112 ಜನರಲ್ಲಿ 31 ಮಂದಿ ಪಂಜಾಬ್ನವರು, 44 ಮಂದಿ ಹರಿಯಾಣದವರು, 33 ಮಂದಿ ಗುಜರಾತ್ನವರು, ಇಬ್ಬರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದವರಿದ್ದಾರೆ ಎಂದು ಮೂಲಗಳು ತಿಳಿಸಿವೆ.
**********************************
5. ಕೇಂದ್ರ ಜಲಜೀವನ್ ಮಿಷನ್ ಕೊಲ್ಲುತ್ತಿದೆ: ಸಿಎಂ ಸಿದ್ದರಾಮಯ್ಯ
ಜಲಜೀವನ್ ಮಿಷನ್ ಯೋಜನೆಗೆ ಬಜೆಟ್ನಲ್ಲಿ ಕಡಿಮೆ ಅನುದಾನ ನೀಡುವ ಮೂಲಕ ಕೇಂದ್ರ ಸರ್ಕಾರ ಯೋಜನೆಯನ್ನು ಕೊಲ್ಲುತ್ತಿದೆ. ಈ ಅನ್ಯಾಯ ಪ್ರಶ್ನಿಸಬೇಕಾಗಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಅವರಂಥ ಬಿಜೆಪಿ ನಾಯಕರು ನಿರ್ಲಜ್ಜರಾಗಿ ತಪ್ಪು ಮಾಹಿತಿ ಹರಡಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
*********************************
6. ಜಲ ಜೀವನ್ ಮಿಷನ್ ₹18,000 ಕೋಟಿ ಅನ್ಯಾಯ; ಸುಳ್ಳು ಹೇಳುವುದನ್ನು ಬಿಡಿ, ಸತ್ಯ ಹೇಳಿ ಎಂದ ಬೊಮ್ಮಾಯಿ
ಜಲ ಜೀವನ್ ಮಿಷನ್ ಯೋಜನೆಯಡಿ ರಾಜ್ಯಕ್ಕೆ ₹18,000 ಕೋಟಿ ಅನ್ಯಾಯವಾಗಿದೆ ಎಂಬುದು ಸುಳ್ಳು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯ ಸರ್ಕಾರ ಸತ್ಯವನ್ನು ತಿಳಿಸಿದರೆ ಸಹಕಾರ ನೀಡುವುದಾಗಿ ತಿಳಿಸಿದರು. ಖರ್ಚು ಮಾಡಿದ ಹಣಕ್ಕೆ ಕೇಂದ್ರ ಸರ್ಕಾರ ಮರುಪಾವತಿ ನೀಡುತ್ತದೆ, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದು ಸುಳ್ಳು ಎಂದರು.
*************************
7. ಸಿಎಂ ಸಿದ್ದರಾಮಯ್ಯ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ: ಆರ್.ಅಶೋಕ್ ಆಕ್ರೋಶ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭಾಗ್ಯ ನೀಡಿದ್ದು, ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
**************************
8. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವೇಳೆ ನಮ್ಮ ರಾಜ್ಯದ ಚರ್ಚೆ ಬಂದಾಗ ಅಭಿಪ್ರಾಯ ಹೇಳುವೆ: ಸಚಿವ ಸತೀಶ್ ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ವರಿಷ್ಠರು ಸೇರಿ ತೀರ್ಮಾನಿಸುತ್ತಾರೆ. ಪ್ರಸ್ತುತ ಬೇರೆ ರಾಜ್ಯಗಳ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಮ್ಮ ರಾಜ್ಯದ ಚರ್ಚೆ ಬಂದಾಗ ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
******************************
9.ಇಂಡಿಯನ್ ಪ್ರೀಮಿಯರ್ ಲೀಗ್ 2025ರ ವೇಳಾಪಟ್ಟಿ ಪ್ರಕಟ
ಕ್ರಿಕೆಟ್ ಪ್ರಿಯರು ಕುತೂಹಲದಿಂದ ಎದುರು ನೋಡುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ವೇಳಾಪಟ್ಟಿ ಪ್ರಕಟವಾಗಿದೆ. ಐಪಿಎಲ್ ಕಮಿಟಿ 18ನೇ ಆವೃತ್ತಿಯ ಸಂಪೂರ್ಣ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದೆಯೇ ಘೋಷಣೆ ಮಾಡಿದ್ದಂತೆ ಐಪಿಎಲ್ 2025ರ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಮೊದಲ ಪಂದ್ಯ ಕೋಲ್ಕತ್ತಾದ ಈಡೆನ್ ಗಾರ್ಡನ್ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕಣಕ್ಕಿಳಿಯಲಿದೆ. ಈ ಋತುವಿನ ಕ್ವಾಲಿಫೈಯರ್ 1 ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಹೈದರಾಬಾದ್ನಲ್ಲಿ ನಡೆದರೆ ಫೈನಲ್ ಪಂದ್ಯ ಕೋಲ್ಕತ್ತಾದಲ್ಲಿ ಜರುಗಲಿದೆ.
************************
10.ವಿವೇಕ್ ಸುಬ್ಬಾರೆಡ್ಡಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ
ಬೆಂಗಳೂರು: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಬೆಂಗಳೂರು ವಕೀಲರ ಸಂಘದ (ಎಎಬಿ) ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಬೆಂಗಳೂರು ವಕೀಲರ ಸಂಘಕ್ಕೆ 2025-28ರ ಅವಧಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ 6,820 ಮತಗಳನ್ನು ಪಡೆಯುವ ಮೂಲಕ ವಿವೇಕ್ ಸುಬ್ಬಾರೆಡ್ಡಿ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ. ಚುನಾವಣೆಯಲ್ಲಿ 13 ಸಾವಿರಕ್ಕೂ ಅಧಿಕ ಮಂದಿ ಮತ ಚಲಾಯಿಸಿದ್ದರು.
*******************