
ಶುಭೋದಯ
ಪ್ರಶಂಸೆ ಮತ್ತು ಟೀಕೆಗಳನ್ನು ಸಮಸಮವಾಗಿ ಸ್ವೀಕರಿಸಬೇಕು. ಒಂದು ಹೂವಿನ ಗಿಡ ಸರಿಯಾಗಿ ಅರಳಲು ಮಳೆ ಮತ್ತು ಬಿಸಿಲು ಎರಡೂ ಬೇಕು.
ಅಷ್ಟಕ್ಕೂ ಪ್ರಶಂಸೆ ಮತ್ತು ಟೀಕೆಗಳು ವಾಸ್ತವ ಅಲ್ಲ, ಜನರ ಅಭಿಪ್ರಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು”
******** ********
1.ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿ ಗ್ಯಾರಂಟಿ ಯೋಜನೆ ಸ್ಥಗಿತದ ಆತಂಕದಲ್ಲಿದ್ದವರಿಗೆ ಸಿಎಂ ಗುಡ್ ನ್ಯೂಸ್
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಕೂಡಲೇ ಜನರ ಖಾತೆಗೆ ಜಮೆ ಮಾಡುವಂತೆ ಸೂಚಿಸುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
****
2.ರಾಜ್ಯದಲ್ಲಿ ‘ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ’ಗೆ ಮುಹೂರ್ತ ಫಿಕ್ಸ್
ಮುಂಬರುವಂತ ಮೇ ಅಂತ್ಯದಲ್ಲಿ ಮೀಸಲಾತಿ ಪಟ್ಟಿ ನೀಡಲಾಗುತ್ತದೆ. ಜೂನ್, ಜುಲೈ ನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಸಬಹುದಾಗಿ ಅಂತ ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
***
3.ಮಾನವ ಇತಿಹಾಸದಲ್ಲಿ USAID ಅತಿದೊಡ್ಡ ಹಗರಣ: ಭಾರತದಲ್ಲಿ ಇದರಿಂದ ಬಂದ ಹಣ ಯಾರ ಪಾಲಾಗಿದೆ ಎಂದು ಪ್ರಶ್ನಿಸಿದ ಪ್ರಧಾನಿ ಸಲಹೆಗಾರ
ಅಮೆರಿಕ ಸರ್ಕಾರವು ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಖರ್ಚು ಮಾಡಿದ ಹಣವನ್ನು ಯಾರು ಪಡೆದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರು ಪ್ರಶ್ನಿಸಿದ್ದಾರೆ. ಮುಂದುವರೆದು USAID ಅನ್ನು “ಮಾನವ ಇತಿಹಾಸದಲ್ಲಿ ಅತಿದೊಡ್ಡ ಹಗರಣ” ಎಂದು ಕರೆದಿದ್ದಾರೆ.
****
4.ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ಅರ್ಜಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ – ಹೊಸ ಅರ್ಜಿಗಳು ವಜಾ
ಪೂಜಾ ಸ್ಥಳಗಳ ಕಾಯ್ದೆ- 1991 ರ ಸಿಂಧುತ್ವ ಹಾಗೂ ವಿವಿಧ ಅಂಶಗಳನ್ನು ಸ್ಪಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆಯಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಇನ್ನು ಯಾವುದೇ ನೋಟಿಸ್ ಜಾರಿ ಮಾಡದ ಹೊಸ ಅರ್ಜಿಗಳನ್ನು ವಜಾಗೊಳಿಸಿದೆ.
****
5.ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ಏಪ್ರಿಲ್ ನೊಳಗೆ ‘3,000 ಲೈನ್ಮನ್’ ನೇಮಕ
ರಾಜ್ಯದಲ್ಲಿ ಖಾಲಿ ಇರುವ 3,000 ಸಾವಿರ ಲೈನ್ಮನ್ ಹುದ್ದೆಗಳ ನೇಮಕಾರತಿ ಪ್ರಕ್ರಿಯೆ ಏಪಿಲ್ ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
****
6.KPSC ಪರೀಕ್ಷೆಯಲ್ಲಿ ಭಾರಿ ಅಕ್ರಮ ಪತ್ತೆ: OMR ಶೀಟ್ ತಿದ್ದಿದ 10 ಮಂದಿ ಆಯ್ಕೆ ರದ್ದುಪಡಿಸಲು ನಿರ್ಧಾರ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 24 ಹುದ್ದೆಗಳ ನೇಮಕಾತಿಯಲ್ಲಿ 10 ಅಭ್ಯರ್ಥಿಗಳು ಒಎಂಆರ್ ಶೀಟ್ ತಿದ್ದಿ ಆಯ್ಕೆಯಾಗಿರುವ ಭಾರಿ ಅಕ್ರಮವನ್ನು ಕರ್ನಾಟಕ ಲೋಕಸೇವಾ ಆಯೋಗದ ತನಿಖಾ ಸಮಿತಿ ಪತ್ತೆ ಮಾಡಿದೆ.
***
7. ಪಾಕಿಸ್ತಾನದ ನೀಚ ಬುದ್ದಿ ಮತ್ತೆ ಬಟಾಬಯಲು; ಭಾರತವನ್ನು ಹೊರತುಪಡಿಸಿ ಉಳಿದ ದೇಶಗಳ ಧ್ವಜ ಹಾರಾಟ
ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಈ ಪೈಕಿ 7 ದೇಶಗಳ ಧ್ವಜಗಳನ್ನು ಕರಾಚಿಯ ಗಡಾಫಿ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಹಾರಿಸಲಾಗಿದೆ. ಆದರೆ ಭಾರತದ ತ್ರಿವರ್ಣ ಧ್ವಜವನ್ನು ಮಾತ್ರ ಅಲ್ಲಿ ಹಾರಿಸಲಾಗಿಲ್ಲ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಧ್ವಜಗಳ ಹಾರಾಟದ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಭಾರತದ ಬಾವುಟ ಇಲ್ಲದಿರುವುದು ಭಾರತೀಯರನ್ನು ಕೆರಳುವಂತೆ ಮಾಡಿದೆ.
*****
8. ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಇ- ಖಾತಾ!
ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ನಿಮಗೆ ಇನ್ನು ಇ ಖಾತಾ ಸಿಗುತ್ತಿಲ್ಲವೆಂದು ಬೇಸರ ಮಾಡಿಕೊಳ್ಳಬೇಡಿ ನಿಮ್ಮ ಮನೆ ಬಾಗಿಲಿದೆ ಬಂದು ಖಾತಾ ವಿತರಿಸುವ ವಿನೂತನ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.ಆನ್ಲೈನ್ನಲ್ಲಿ ಇ ಖಾತ ಗೆ ಅಪ್ಪೆ ಮಾಡಿರುವ ಅಸ್ತಿ ಮಾಲೀಕರ ಮನೆ ಬಾಗಿಲಿಗೆ ಖಾತಾ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
*****
9.ರಾಜ್ಯ ಸರ್ಕಾರದಿಂದ ‘ಗ್ರಾಮ ಆಡಳಿತಾಧಿಕಾರಿ, ಸಹಾಯಕರಿಗೆ’ ಗುಡ್ ನ್ಯೂಸ್.!
ರಾಜ್ಯದ ಗ್ರಾಮ ಆಡಳಿತಾಧಿಕಾರಿ, ಗ್ರಾಮ ಸಹಾಯಕರಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅದೇ ಆಧಾರ್ ಜೋಡಣೆಯಲ್ಲಿ ಶ್ರಮಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರಿಗೆ ಸಂಭಾವನೆ ನೀಡುವುದಾಗಿ ಘೋಷಿಸಿದ್ದಾರೆ.
*****
10 KPSC ಎಡವಟ್ಟು: ಸಿಎಂ ಸಿದ್ದರಾಮಯ್ಯಗೆ ಕನ್ನಡ ಪದಗಳ ಅರ್ಥ ಕೇಳಿದ ಕರವೇ
ರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ನಡೆಸಿದ ಕೆಎಎಸ್ ಮರುಪರೀಕ್ಷೆಯಲ್ಲೂ ಕನ್ನಡ ಪದಗಳ ಅನುವಾದವನ್ನು ತಪ್ಪಾಗಿ ಮಾಡಿರುವ ವಿಚಾರವಾಗಿ ಆಕ್ರೋಶ ಭುಗಿಲೆದ್ದಿದೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರು ಕೂಡ ಗರಂ ಆಗಿದ್ದು, ಪ್ರಶ್ನೆಪತ್ರಿಕೆಯಲ್ಲಿದ್ದ ಕನ್ನಡದ ತಪ್ಪು ಪದಗಳನ್ನು ಉಲ್ಲೇಖಿಸಿ ಅವುಗಳ ಅರ್ಥ ಹೇಳುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿದ್ದಾರೆ.
*****