
ಶುಭೋದಯ
ಇಂದಿನ ದಿನವನ್ನು ಸಾರ್ಥಕವಾಗುವಂತೆ ಉಪಯೋಗಿಸಿಕೊಳ್ಳದಿದ್ದರೆ, ನಾಳೆಗೆ ಅರ್ಥವೇ ಇಲ್ಲ.
ಎಷ್ಟೋ ನಾಳೆಗಳು ಬರುತ್ತವೆ, ಹೋಗುತ್ತವೆ. ಅದರಿಂದ ಏನು ಪ್ರಯೋಜನ?
ಇಂದಿನ ಕೆಲಸಗಳ ಮೇಲೆಯೇ ನಾಳೆ ಏನು ಮಾಡುತ್ತೇವೆ ಅನ್ನೋದು ನಿರ್ಧಾರವಾಗುತ್ತದೆ
***************
1. ಕೇಂದ್ರ ಸರ್ಕಾರ 10,000 ಕೋಟಿ ರೂ. ನೀಡಿದರೂ ಶಿಕ್ಷಣ ನೀತಿಯನ್ನು ಸ್ವೀಕರಿಸುವುದಿಲ್ಲ; ಸಿಎಂ ಎಂ.ಕೆ. ಸ್ಟಾಲಿನ್
ಕೇಂದ್ರ ಸರ್ಕಾರವು ರಾಜ್ಯಕ್ಕೆ 10,000 ಕೋಟಿ ರೂಪಾಯಿಗಳ ಹಣವನ್ನು ನೀಡಲು ಮುಂದಾದರೂ, ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ಜಾರಿಗೆ ತರುವುದಿಲ್ಲ ಎಂಬ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡಿನಲ್ಲಿ ನೀತಿ ಅನುಷ್ಠಾನ ಮತ್ತು ಎನ್ಇಪಿಯಲ್ಲಿ ತ್ರಿಭಾಷಾ ಸೂತ್ರದ ಕುರಿತಾದ ಗದ್ದಲ ಉಲ್ಬಣಗೊಂಡಿದ್ದು, ತಮಿಳುನಾಡು ಎನ್ಇಪಿಯನ್ನು ಜಾರಿಗೆ ತರದಿದ್ದರೆ, ಕೇಂದ್ರ ಪ್ರಾಯೋಜಿತ ಉಪಕ್ರಮವಾದ ಸಮಗ್ರ ಶಿಕ್ಷಾ ಅಭಿಯಾನಕ್ಕೆ 2,000 ಕೋಟಿ ರೂ.ಗಳನ್ನು ತಡೆಹಿಡಿಯುವುದಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬೆದರಿಕೆ ಹಾಕಿದ್ದಾರೆ ಎಂದು ದೂರಿ ಸಿಎಂ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.
***************************
2.ಪ್ರಧಾನಿ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ಆರ್ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ನೇಮಕ
ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಶಕ್ತಿಕಾಂತ ದಾಸ್ ಅವರ ನೇಮಕಾತಿಯು ಪ್ರಧಾನ ಮಂತ್ರಿಯವರ ಅವಧಿಯೊಂದಿಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಕೊನೆಗೊಳ್ಳುತ್ತದೆ ಎಂದು ಸರ್ಕಾರದ ಅಧಿಸೂಚನೆ ಇಂದು ತಿಳಿಸಿದೆ. ಶಕ್ತಿಕಾಂತ ದಾಸ್ ಅವರು ಡಿಸೆಂಬರ್ 2018ರಿಂದ 6 ವರ್ಷಗಳ ಕಾಲ ಆರ್ಬಿಐ ಮುಖ್ಯಸ್ಥರಾಗಿದ್ದರು.
****************************
3. ತೆಲಂಗಾಣದಲ್ಲಿ ಸುರಂಗ ಕುಸಿತ; 7 ಕಾರ್ಮಿಕರು ಸಿಲುಕಿರುವ ಶಂಕೆ
ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಎಸ್ಎಲ್ಬಿಸಿ ಸುರಂಗದ ಒಂದು ಭಾಗ ಕುಸಿದುಬಿದ್ದಿದ್ದು, ಇದರಡಿ 7 ಜನರು ಸಿಲುಕಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ದೋಮಲಪೆಂಟಾ ಬಳಿ ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಸುರಂಗದ ಒಂದು ಭಾಗ ಇಂದು ಬೆಳಿಗ್ಗೆ ಕುಸಿದಿದೆ. ರಕ್ಷಣಾ ಕಾರ್ಯಾಚರಣೆ ನಡೆದಿದೆ. ಈ ಘಟನೆಯ ಸಮಯದಲ್ಲಿ ಸ್ಥಳದಲ್ಲಿ 50 ಕಾರ್ಮಿಕರು ಇದ್ದರು. ಅವರಲ್ಲಿ ಸುಮಾರು 43 ಜನರು ಸುರಕ್ಷಿತವಾಗಿ ಹೊರಬಂದಿದ್ದಾರೆ.
**********************
4. ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿ; ಪಿಎಂ ನವೀನ್ ರಾಮ್ಗೂಲಂ ಘೋಷಣೆ
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮಾರಿಷಸ್ನ 57ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಮಾರಿಷಸ್ ಪ್ರಧಾನಿ ನವೀನ್ ರಾಮ್ಗೂಲಂ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್ ರಾಷ್ಟ್ರದ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. “ನನ್ನ ಆಹ್ವಾನದ ಮೇರೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮ ರಾಷ್ಟ್ರೀಯ ದಿನಾಚರಣೆಯ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ ಎಂದು ಸದನಕ್ಕೆ ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ” ಎಂದು ರಾಮ್ಗೂಲಂ ಹೇಳಿದ್ದಾರೆ.
********************
5. Maha Kumbh: ಮಾಘ ಪೂರ್ಣಿಮಾ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರ, 73 ಲಕ್ಷ ಮಂದಿ ಪುಣ್ಯಸ್ನಾನ
ಕುಂಭ ಮೇಳದ ಒಟ್ಟು 6 ಪುಣ್ಯ ಸ್ನಾನಗಳ ಪೈಕಿ ಮಾಘಿ ಪೂರ್ಣಿಮೆಯಂದು ನಡೆಯುವ ಪುಣ್ಯ ಸ್ನಾನ 5ನೆಯದ್ದಾಗಿದೆ. 6ನೇ ಪುಣ್ಯಸ್ನಾನ ಫೆ.26ರ ಮಹಾಶಿವರಾತ್ರಿಯಂದು ನಡೆಯಲಿದೆ.
******************
ಶುಭರಾತ್ರಿ