ಶುಭೋದಯ
ನಾವು ತಿಳಿದುಕೊಳ್ಳಬೇಕಾದ ಏಕಮಾತ್ರ ವಿಷಯವೆಂದರೆ,
ದೋಷದ ವಿರುದ್ಧವಾಗಿ ಮಾಡುವ ಕೆಲಸವೆಲ್ಲ ವ್ಯಕ್ತಿದೃಷ್ಟಿಯಿಂದ ಮಾತ್ರ,
ವಸ್ತುದೃಷ್ಟಿಯಿಂದಲ್ಲ.
-ಸ್ವಾಮಿ ವಿವೇಕಾನಂದ
*******************
ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು; ಬಹುಮಾನ ಘೋಷಿಸಿದ ಹಾಕಿ ಇಂಡಿಯಾ
India women’s hockey: ಭಾರತದ ಮಹಿಳಾ ಹಾಕಿ ತಂಡವು ಎಫ್ಐಎಚ್ ಹಾಕಿ ಪ್ರೊ ಲೀಗ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಶೂಟೌಟ್ನಲ್ಲಿ 2-1 ಅಂತರದಿಂದ ಗೆದ್ದ ಭಾರತ ತಂಡವು ಒಂದು ಹಂತದಲ್ಲಿ 0-2 ಅಂತರದಲ್ಲಿ ಹಿನ್ನಡೆಯಲ್ಲಿದ್ದರೂ ಅದ್ಭುತವಾದ ಪುನರಾಗಮನ ಮಾಡಿತು. ದೀಪಿಕಾ ಮತ್ತು ಬಲ್ಜೀತ್ ಕೌರ್ ಭಾರತದ ಪರ ಗೋಲು ಗಳಿಸಿದರು. ಈ ಐತಿಹಾಸಿಕ ಗೆಲುವಿಗೆ ಹಾಕಿ ಇಂಡಿಯಾ ತಂಡಕ್ಕೆ ಭರ್ಜರಿ ನಗದು ಬಹುಮಾನವನ್ನೂ ಘೋಷಿಸಿದೆ.
*************************
ಮುಡಾ ಹಗರಣದ ನಿಗೂಢತೆ ಬಯಲು ಮಾಡಲು ಸಿಬಿಐ ತನಿಖೆಗೆ ವಹಿಸಿ; ಲಹರ್ ಸಿಂಗ್ ಒತ್ತಾಯ
ಮುಡಾ ಹಗರಣದ ಕುರಿತಂತೆ ಲೋಕಾಯುಕ್ತ ವರದಿಯನ್ನು ಗಮನಿಸಿದರೆ, ಅಧಿಕಾರಿಗಳ ಮೇಲಿನ ರಾಜಕೀಯ ಒತ್ತಡ ಸ್ಪಷ್ಟವಾಗಿದೆ. ಹೀಗಾಗಿ, ಈ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಲು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಆಗ್ರಹಿಸಿದ್ದಾರೆ. ಬಿಜೆಪಿ ಸಂಸದ ಲಹರ್ ಸಿಂಗ್ ಮುಡಾ ಹಗರಣದ ಬಗ್ಗೆ ಕೆಲವು ಪ್ರಶ್ನೆಗಳನ್ನು ಪಟ್ಟಿ ಮಾಡಿದ್ದಾರೆ.

*********************************
3.ಮಹಾಕುಂಭಕ್ಕೆ ನಾಳೆ ಅದ್ಧೂರಿ ತೆರೆ: ಮಹಾಶಿವರಾತ್ರಿ ದಿನದ ‘ಅಮೃತ ಸ್ನಾನ’ಕ್ಕಾಗಿ ಭಕ್ತರ ದಾಂಗುಡಿ, ಅದಾಗಲೇ 64 ಕೋಟಿ ಭಕ್ತರಿಂದ ಪುಣ್ಯಸ್ನಾನ!
ಭೂಮಿಯ ಮೇಲಿನ ಅತಿದೊಡ್ಡ ಮಹೋತ್ಸವ ಅಂತ್ಯಕ್ಕೂ ಮುನ್ನವೇ ಮಹಾಶಿವರಾತ್ರಿ ದಿನದ ಅಮೃತ ಸ್ನಾನಕ್ಕಾಗಿ ತ್ರಿವೇಣಿ ಸಂಗಮದಲ್ಲಿ ಭಾರಿ ಜನದಟ್ಟಣೆ ಕಂಡುಬರುತ್ತಿದೆ. 45 ದಿನಗಳ ಮಹಾಕುಂಭ ಮಹೋತ್ಸವಕ್ಕೆ ನಾಳೆ ಅದ್ಧೂರಿ ತೆರೆಬೀಳುತ್ತಿದೆ. ನಾಳೆ ಮಹಾಶಿವರಾತ್ರಿ ಸಹ ಇರುವುದರಿಂದ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಸಲುವಾಗಿ ಕೋಟ್ಯಾಂತರ ಸಂಖ್ಯೆಯ ಭಕ್ತರು ತ್ರಿವೇಣಿ ಸಂಗಮಕ್ಕೆ ಆಗಮಿಸುತ್ತಿರುವುದರಿಂದ, ಪ್ರಯಾಗ್ರಾಜ್ನಲ್ಲಿ ಇಂದು ಸಂಜೆ 6 ಗಂಟೆಯಿಂದಲೇ ವಾಹನ ಸಂಚಾರಕ್ಕೆ ತೀವ್ರ ನಿರ್ಬಂಧ ಹೇರಲಾಗಿದೆ.

4.
SSLC, PUC ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ KSRTC ಉಚಿತ ಬಸ್ ಪ್ರಯಾಣ
ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, KSRTC ತನ್ನ ಬಸ್ಗಳಲ್ಲಿ (ನಗರ, ಉಪನಗರ, ಸಾಮಾನ್ಯ ಮತ್ತು ಎಕ್ಸ್ಪ್ರೆಸ್) ತಮ್ಮ ನಿವಾಸದಿಂದ ಅವರಿಗೆ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲು ನಿರ್ಧರಿಸಿದೆ ಎಂದು KSRTC ಪ್ರಕಟಣೆಯಲ್ಲಿ ತಿಳಿಸಿದೆ.

****************************
5.ಎಚ್ ಡಿ ಕುಮಾರಸ್ವಾಮಿಗೆ ಹಿನ್ನಡೆ: ಡಿನೋಟಿಫಿಕೇಷನ್ ಪ್ರಕರಣದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಕೇಂದ್ರ ಬೃಹತ್ ಕೈಗಾ ರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿಗೆ ಸಂಕಷ್ಟ ತಂದಿಟ್ಟಿದೆ. ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಮೀನು ಡಿನೋಟಿಷಿಕೇಷನ್ ಸಂಬಂಧ ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ದ್ವಿಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ.

*****************************

