*ನಾಟಕೋತ್ಸವದಲ್ಲಿ ಮಹಿಳಾ ಕಲಾವಿದರ ಯಶಸ್ವಿ ಪ್ರದರ್ಶನದ ಕಲರವ*
ಕೆ.ಆರ್.ಪೇಟೆ ಪಟ್ಟಣದ ಶ್ರೀರಂಗ ಚಿತ್ರಮಂದಿರ ಆವರಣದಲ್ಲಿ ಡಾ.ರಾಜ್ ರಂಗ ಕಲಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಯುತ್ತಿರುವ ಜಿಲ್ಲಾ ಮಟ್ಟದ 23 ದಿನಗಳ ಕಾಲ ಯಶಸ್ವಿ ನಾಟಕೋತ್ಸವದಲ್ಲಿ ಕರ್ನಾಟಕ ರತ್ನ ಡಾ: ರಾಜ್ ಕುಮಾರ್ ಸಂಸ್ಕೃತಿ ಕಲಾ ಪರಿಷತ್ ವತಿಯಿಂದ ಪೌರಾಣಿಕ ನಾಟಕದಲ್ಲಿ ಸಂಪೂರ್ಣ ಮಹಿಳಾ ಕಲಾವಿದರೇ ಶಿವಭಕ್ತ ಚಂಡಾಸುರ ಅಥವಾ ಹೇಮಾವತಿ ಪರಿಣಯ ಎಂಬ ಸುಂದರ ನಾಟಕ ಲಯಬದ್ಧವಾಗಿ ಯಶಸ್ವಿ ಪ್ರದರ್ಶನ ಮಾಡಿದರು.

ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಸಮಾಜ ಸೇವಕ ಆರ್.ಟಿ. ಓ ಮಲ್ಲಿಕಾರ್ಜುನ್ ಪೌರಾಣಿಕ ನಾಟಕಗಳಲ್ಲಿ ಪುರುಷರೇ ಸ್ತ್ರೀ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ನಂತರ ಸ್ತ್ರೀ ಪಾತ್ರಕ್ಕೆ ಮಹಿಳಾ ಕಲಾವಿದರನ್ನು ಕರೆತರುವ ವಾಡಿಕೆ ಪ್ರಾರಂಭವಾಯಿತು. ಆದರೆ, ಪುರುಷ ಪಾತ್ರಗಳನ್ನು ಸ್ತ್ರೀಯರು ಅಭಿನಯಿಸುತ್ತಿದ್ದುದ್ದು ವಿರಳವಾಗಿತ್ತು. ನಾಟಕೋತ್ಸವದಲ್ಲಿ ಸಂಪೂರ್ಣ ಸ್ತ್ರೀಯರೇ ಪುರುಷ ಹಾಗೂ ಸ್ತ್ರೀ ಪಾತ್ರಗಳನ್ನು ಮಾಡುವ ಮೂಲಕ ಪೌರಾಣಿಕ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿ ಕಲೆ ಯಾರಪ್ಪನ ಸ್ವತ್ತಲ್ಲ ಎಂಬುವುದನ್ನು ಕರ್ನಾಟಕ ರತ್ನ ಡಾಕ್ಟರ್ ರಾಜ್ ಕುಮಾರ್ ಸಂಸ್ಕೃತಿಕ ಕಲಾ ವೇದಿಕೆಯ ಮಹಿಳಾ ಕಲಾವಿದರು ತೋರಿಸಿದ್ದಾರೆ ಎಂದರು.
ನಾಟಕದಲ್ಲಿ ಭೀಮನ ಪಾತ್ರ ಅಭಿನಯಿಸಿದ ಜಿ. ಸರಸತ್ವಮ್ಮ ಅವರಿಗೆ ಪೌರಾಣಿಕ ಕಲೆಯನ್ನೇ ಮೈಗೂಡಿಸಿಕೊಂಡಿರುವುದನ್ನ ಪರಿಗಣಿಸಿ ಕರ್ನಾಟಕ ರತ್ನ ಡಾ: ರಾಜಕುಮಾರ್ ಸಂಸ್ಕೃತಿಕ ಕಲಾಪರಿಷತ್ ರಂಗಕೌಸ್ತುಭ ಪ್ರಶಸ್ತಿ ನೀಡಿದ ಬಳಿಕ ಮಾತನಾಡಿದ ಡಾ: ರಾಜ್ ರಂಗ ಕಲಾ ವೇದಿಕೆ ಅಧ್ಯಕ್ಷ ರಾಗಿಮುದ್ದನಹಳ್ಳಿ ದೇವರಾಜು* ಕಾವೇಷು ನಾಟಕಂ ರಮ್ಯಂ ಎಂಬ ಮಹಾಕವಿ ಕಾಳಿದಾಸನ ಉಕ್ತಿಯಂತೆ ತಾವು ಕನ್ನಡ ರಂಗಭೂಮಿಯ ಭವ್ಯ ಸಾಂಸ್ಕೃತಿಕ ಪರಂಪರೆಯಾದ ಪೌರಾಣಿಕ ನಾಟಕ ಕ್ಷೇತ್ರದಲ್ಲಿ ಸಾರ್ಥಕ ಸೇವೆ ಸಚ್ಚಿಸುತ್ತಾ, ಪೌರಾಣಿಕ ರಂಗ ದೇವರ ಕಿಂಕರವಾಗಿ ಪೌರಾಣಿಕ ರಂಗಭೂಮಿಯನ್ನು ಸದಾ ಜೀವಂತವಾಗಿಸಲು ಅರ್ಹರೆನಿಸಿ ದುಡಿಯುತ್ತಾ ರಂಗದೇವಿಯ ದೇಗುಲದ ಬುನಾದಿಗೆ ಆಧಾರ ಸ್ತಂಭದಂತಿರುವ ತಾವು ತಮ್ಮ ಬದುಕಿನ ಅನೇಕ ವಸಂತಗಳನ್ನು ರಂಗಭೂಮಿ ಸೇವೆಯಲ್ಲಿ ತೊಡಗಿಸಿಕೊಂಡು ನಿಷ್ಠಾಮ ಕರ್ಮಿಯಾಗಿದ್ದೀರಿ. ಪೌರಾಣಿಕ ನಾಟಕ ಕ್ಷೇತ್ರದಲ್ಲಿ ರಂಗಕಲಾವಿದರಾಗಿ ತಾವು ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ನಮ್ಮ ಸಂಘವು ನಿಮಗೆ ರಂಗಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಭಗವಂತನು ತಮಗೆ ಮತ್ತಷ್ಟು ಕಲಾ ಉತ್ಸಾಹ ನೀಡಲಿ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ: ರಾಜಕುಮಾರ್ ಸಂಸ್ಕೃತಿಕ ಕಲಾಪರಿಷತ್ ರಾಜ್ಯಾಧ್ಯಕ್ಷ ಪರಶುರಾಮ್ ಗೋರಪ್ಪ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ರಾಜೇಗೌಡ,ಗ್ರಾ.ಪಂ ಅಧ್ಯಕ್ಷ ಶೀಳನೆರೆ ಸಿದ್ದೇಶ್, ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಯುವ ಘಟಕ ಅಧ್ಯಕ್ಷ ಕೆ.ಎನ್ ಮಹೇಶ್, ಕಲಾವಿದರದ ,ತಿಪ್ಪೇಸ್ವಾಮಿ ಜಗದೀಶ್, ದೀಪು ಶಂಕರ್,ರಂಗಸ್ವಾಮಿ,ಮೀನಾಕ್ಷಿ,ರಮೇಶ್, ಜಗದೀಶ್,ರಾಜಘಟ್ಟ ರಾಮಲಿಂಗೇಗೌಡ,ಕಾಂತರಾಜು,ರಾಜೇಗೌಡ,ಮಂಜುನಾಥ್,ನಂಜೇಗೌಡ,ರತ್ನಮ್ಮ,ಶಾಂತವ್ವ, ಅನುಪಮಾ, ದೇವಿರಮ್ಮ, ಡಾ: ರಾಜ್ ರಂಗ ಕಲಾ ಸಂಘದ ಅಧ್ಯಕ್ಷರಾಗಿ ಮುದ್ದನಹಳ್ಳಿ ದೇವರಾಜು,ಸಂಘಟನಾ ಕಾರ್ಯದರ್ಶಿ ಹೊಸಹೊಳಲು ರಘು,ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷ ವಿಠಲಪುರ ಸಣ್ಣತಮ್ಮೆಗೌಡ, ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ದೇವರಾಜು,ಖಜಾಂಚಿ ಮರಟಿಕೊಪ್ಪಲು ಮಂಜುನಾಥ್, ಸಹಾ ಕಾರ್ಯದರ್ಶಿ ಮಂಜುನಾಥ್,ಸೇರಿದಂತೆ ಕಲಾಪೋಷಕರಿಗೆ ಯಶಸ್ವಿಗರಿ ಸಲ್ಲುತ್ತದೆ.

[…] […]
[…] […]