ಈಗಷ್ಟೇ ನಿರ್ಮೂಹಿ ನೆಡದಾಡುವ ವಿವೇಕಾನಂದ ಸ್ವಾಮಿ ಅಥವ ಶ್ರೀ ಸಿದ್ದೇಶ್ವರ ಸ್ವಾಮಿ ನಮ್ಮನೆಲ್ಲಾ ಅಗಲಿದ್ದಾರೆ. ಅವರ ಪ್ರವಚನಗಳನ್ನು ಕೇಳುತ್ತಾ ಬಂದಿದ್ದೇನೆ. ನನಗೆ ಅವರ ಒಂದು ಪ್ರವಚನದ ಸಂದೇಶ ಜ್ಞಾಪಕಕ್ಕೆ ಬಂತು. ಪ್ರಕೃತಿಯ ಕಣ ಕ್ಷಣ ಕ್ಷಣ ತನ್ನ ಸ್ಥಿತಪ್ರಜ್ಞೆಯಿಂದ ಮಾನವನಿಗೆ ಎಲ್ಲವನ್ನು ನೀಡಿದೆ. ಆದರೇ ಮಾನವ ತನ್ನ ಸ್ಥಿತಪ್ರಜ್ನೆಯನ್ನು ಕಳೆದುಕೊಂಡಿದ್ದಾನೆ. ಕಳೆದುಕೊಂಡನಾತ ಪ್ರಕೃತಿಗೆ ಏನು ಕೊಡಬಲ್ಲನು? ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಸ್ಥಿತಪ್ರಜ್ಞೆ ಬಗ್ಗೆ ಹೇಳುತ್ತಾ ಯಾವುದೇ ಸಂದರ್ಭದಲ್ಲೂ ಚಿತ್ತ ಚಂಚಲತೆ ಹೊಂದದೆ ಧೈರ್ಯವಾಗಿ ಧರ್ಮವನ್ನು ಎತ್ತಿ ಹಿಡಿಯಬೇಕೆಂದು ನುಡಿದಿರುವ ವಿವರಣೆಯು ಭಗವದ್ಗೀತ ಪುಸ್ತಕಗಳಲ್ಲಿ ಓದಲು ಸಿಗುವುದು. ಇಲ್ಲಿ ಸಿದ್ದೇಶ್ವರಶ್ರೀ ಹೇಳಿರುವ ಕಣ ಪರಮಾಣು.
ಶ್ರೀಗಳ ಈ ಕಣದ ಅರ್ಥ “ಅನುಬಂಧ” ವೇ ಆಗಿತ್ತು. ಶ್ರೀಗಳು ಶ್ರೀ ಕೃಷ್ಣನ ಸ್ಥಿತಪ್ರಜ್ಞೆ ಕುರಿತಂತೆ ಮುಂದುವರಿದು ಪ್ರಕೃತಿಯ ಕಣಗಳಲ್ಲಿ ಅಡಗಿರುವ ಸ್ಥಿತಪ್ರಜ್ಞೆಯನ್ನು ವಿವರಿಸಿದ್ದಾರೆ. ನಿರಂತರವಾಗಿ ಪರಮಾಣುಗಳ ನಡುವೆ ನೆಡೆಯುವ ನೃತ್ಯೋತ್ಸವೇ “ನಟರಾಜ” ನ ನರ್ತನ ಎನ್ನುಬಹುದಲ್ಲವೆ. ಈ ಅನುಬಂಧದ ನೃತ್ಯ ಇಲ್ಲದೆ ನಾವು ಬದುಕುತ್ತಿರಲಿಲ್ಲಾ. ಪರಮಾಣುಗಳ ಅನಪೇಕ್ಷಿತವೇ “ಸ್ಥಿತಪ್ರಜ್ನೆ”. ಆದಿಪುರುಷ ಭಗವಾನ್ ಬುದ್ಧ “ಸ್ಥಿತಪ್ರಜ್ನೆ” ಯನ್ನು ಅತಿ ಸರಳವಾಗಿ “ಆಲಿಸು, ಅರ್ಥೈಸು, ಕರುಣಿಸು” ಎಂದು ಹೇಳಿದ್ದಾರೆ. ಆಲಿಸ ಬೇಕಾದರೆ ವಿಚಲಿತನಾಗಬಾರದು. ಅರ್ಥೈಸಲು ಶುದ್ಧ ಚಿತ್ತವನ್ನು ಹೊಂದಿರಬೇಕು. ಕರುಣಿಸಲು ಅನಪೇಕ್ಷಿತ ಬಾಹುಗಳೇ ಮುಖ್ಯವಾದದ್ದು. ಈ ಮೂರು ಸೂತ್ರಗಳನ್ನು ಯಾರು ಅನುಸರಿಸುತ್ತಾರೋ ಆವರೇ “ಪರಂಧಾಮ”. ಈ ಎಲ್ಲಾ ಗುಣಗಳು ನಮ್ಮನ್ನು ಅಗಲಿದ ಸಿದ್ದೇಶ್ವರಶ್ರೀಗಳಲ್ಲಿ ಇತ್ತು. ಮತ್ತೆ ಮತ್ತೆ ಇಂತಹ ಪರಂಧಾಮ ಹುಟ್ಟಿ ಬರಲಿ ಎನ್ನುವುದೇ ನಮ್ಮೆಲ್ಲರ ಆಶಯ.
ಒಮ್ಮೆ ಜಗತ್ ಮೋಹಕ ಬುದ್ಧ ಕಣ್ಣು ತೆರೆದು ಧ್ಯಾನಿಸುತ್ತಿದ್ದಾಗ ಆತನ ಮುಂದಿದ್ದ ಕೆರೆಯಲ್ಲಿ ಒಬ್ಬ ಅಗಸ ಬಟ್ಟೆ ಒಗೆಯುತ್ತಿದ್ದನ್ನು ನೋಡಿ ವಿಶ್ವವು ಶೂನ್ಯಕಾರವಾಗಿ ಇದೆ ಎಂದು ತಾರ್ಕಿಕವಾಗಿ ಮನಗೊಂಡಿದ್ದ. ಒಗೆದ ಒದ್ದೆ ಬಟ್ಟೆಯನ್ನು ಬಡೆಯ ಬೇಕಾದಾಗ ಮೇಲೆ, ಮುಂದೆ, ಹಿಂದೆ ಮತ್ತೆ ಮೇಲೆ ಹೀಗೆ ಸೊನ್ನೆಯ ರೇಖೆಯನ್ನು ಹೋಲುತಿತ್ತು. ವಿಶ್ವವು ಗೋಳಾಕಾರ ಎನ್ನುವುದಾದರೆ ಅತಿ ಸೂಕ್ಷ್ಮ ಕಣದ ಆಕಾರ ಹೇಗಿರಬಹುದೆಂಬಾ ಆಲೋಚನೆ ಬುದ್ಧನದಾಗಿತ್ತು. ತನ್ನ ಅಸಾಮಾನ್ಯ ಬುದ್ದಿ ಶಕ್ತಿ ಪ್ರಯೋಗದಿಂದ ಪರಮಾಣುವೂ ಸಹ ಶೂನ್ಯಾಕಾರವೆಂದ.
ಅಗಾಧವಾದ ವಿಶ್ವದ ಒಳಗೆ ಅಥವ ಅತಿ ಸೂಕ್ಷ್ಮ ವಸ್ತುವಾದ ಪರಮಾಣುವಿನ ಒಳಗೆ ಶೂನ್ಯವಾಗಿ ಉಳಿಯದೇ ಅಪರಮಿತ ನಿರಂತರ ಕ್ರಿಯೆಗಳು ನೆಡೆಯುವುದರಿಂದ ನಾವೆಲ್ಲ ಬದುಕಿದ್ದೇವೆ. ನಮ್ಮ ಜೀವನ ಮತ್ತು ವಸ್ತುವಿನ ಅಂಶದ ಸಂಬಂಧಗಳೇ “ಅನುಬಂಧ”. ಯಾಂತ್ರಿಕವಾಗಿ ಪರಮಾಣುವಿನ ಅನುಬಂಧನಗಳನ್ನು ನೋಡಬೇಕಾದರೆ ನಾವು ಈ ಪರಮಾಣುವಿನ ಒಳಗೆ ಹೊಕ್ಕಬೇಕು. ಒಳಗೆ ಹೋದಾಗ ಮಾತ್ರ ಆ ಕಣಗಳ ಸೂಕ್ಷ್ಮತೆಯನ್ನು ಉಳಿಸಿಕೊಳ್ಳುವ ಉಪಪರಮಾಣುಗಳ ಪರಧಮನೀಯ (ಇಂಟರ್ ಪ್ಲೇ) ಕ್ರಿಯಾ ತಾಂತ್ರಿಕ ಕೆಲಸಗಳನ್ನು ನೋಡಬಹುದು. ಗಟ್ಟಿಯಾದ ವಸ್ತು ತನ್ನ ಘನ ಅಂಶಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಊಹಿಸಲು ಅಸಾಧ್ಯ.
ಉದಾಹರಣೆಗೆ ಬಂಗಾರ. ನಾವೇನೋ ಬಂಗಾರದ ಹೊಳಪಿಗೆ, ಉಜ್ವಲತೆಗೆ ಮತ್ತು ಮಿಣುಕುವಿಕೆಯ ಆಕರ್ಷಣೆಗೆ ಒಳಗಾಗಿ ಬಿಡುತ್ತೇವೆ. ಆದರೇ ಚಿನ್ನದ ಒಳಗೆ ನೆಡೆಯುವ ಕ್ರಿಯಾಶೀಲತೆಯು ಯಾರಿಗೂ ಕಾಣುವುದಿಲ್ಲ. ಇಂತಹ ಮೋಹಕವಾದ ಹಳದಿ ಲೋಹಕ್ಕೆ ಮಾರು ಹೋಗಬಿಡುತ್ತೇವೆ. ಚಿನ್ನ ಅಂದಾಕ್ಷಣ ಜ್ಞಾಪಕಕ್ಕೆ ಬರುವುದು “ದುಬೈ ಫೆಸ್ಟಿವಲ್”. ಈ ಸಮಯದಲ್ಲಿ ಪ್ರವಾಸ ಕೈಗೊಳ್ಳುವರು ಆ ದೇಶದಿಂದ ಚಿನ್ನ ಕೊಂಡು ತರುವುದು ವಾಡಿಕೆ. ನನಗು ಸಹ ಈ ದೇಶವನ್ನು ನೋಡಬೇಕೆಂದ್ದನಿಸಿತು. ಅ ಮುಹೂರ್ತ ಈಗಷ್ಟೇ ಕೂಡಿ ಬಂತು.

ದುಬೈ ವಿಮಾನ ನಿಲ್ದಾಣ ಪ್ರಪಂಚದಲ್ಲಿ ಅತಿ ದೊಡ್ಡದಾದ ವಿಮಾನ ನಿಲ್ದಾಣಗಳಲ್ಲಿ ಒಂದು. ಸುಮಾರು ಒಂದು ನಿಮಿಷಕ್ಕೆ ಮೂರು ವಿಮಾನಗಳು ಇಳಿಯುತ್ತವೆ ಮತ್ತು ಹಾರುತ್ತವೆ. ಈ ನಿಲ್ದಾಣವು ಮಾರ್ಗ ಬದಲಾವಣೆಗೆ ಹೆಸರಾಂತ ವಿಮಾನ ನಿಲ್ದಾಣ. ಈ ನಿಲ್ದಾಣವು ಚೂಕ್ಕ ಮತ್ತು ವಿನ್ಯಾಸ ಸುಂದರ. ದುಬೈಯನ್ನು “ಸಿಟಿ ಆಫ್ ಡ್ರೀಮ್ಸ್, ಪ್ರಾಸ್ಪರಿಟಿ, ಲೈಟ್ಸ, ಪೀಸ್, ವಿಷನ್” ಎಂದೆಲ್ಲಾ ಕರೆಯುತ್ತಾರೆ. ಯುನೈಟೆಡ್ ಅರಬ್ ಎಮಿರೇಟ್ಸ 7 ರಾಜ್ಯಗಳನ್ನು ಒಳಗೊಂಡ ಚಿಕ್ಕ ದೇಶ. ಈ ಎಲ್ಲಾ 7 ರಾಜ್ಯಗಳನ್ನು ಶೇಖ್ಗಳೇ ಆಳುತ್ತಿರುವರು. ಶೇಖ್ ಎಂದರೆ ದಕ್ಷಪತಿ ಎಂದರ್ಥ. ಇವರು ಅಲ್ಲಿಯ ಮೂಲ ನಿವಾಸಿಗಳು ಮತ್ತು ಗಿರಿ ನಿವಾಸಿಗಳು. ಇವರ ಮೂಲ ಉಧ್ಯೋಗ ಮೀನು ಮತ್ತು ನೈಸರ್ಗಿಕ ಮುತ್ತು ತರುವುದು. ಗಂಡಸರೆಲ್ಲರು ಮುಳುಗು ತಜ್ಞರು. ಇವರು ಮೂವತ್ತು ಮೀಟರ್ ನಷ್ಟು ಸಮುದ್ರ ನೀರಿನಲ್ಲಿ ಮುಳುಗಿ ಮುತ್ತುಗಳನ್ನು ಹೊರ ತರುತ್ತಿದ್ದರು. 1963 ನೇ ಇಸವಿ ಹಿಂದೆ ಇವರ ವ್ಯವಹಾರ ವಸ್ತು ವಿನಮಯವಾಗಿತ್ತು. ಮುತ್ತುಗಳ ಬದಲಿಗೆ ಅಕ್ಕಿ, ಗೋಧಿ ಮತ್ತು ಸ್ಪೈಸಸ್ ಗಳನ್ನು ಭಾರತ, ಇರಾನ್, ಇರಾಕ್ ಮತ್ತು ಹಲವಾರು ಹತ್ತಿರ ದೇಶಗಳ ಜೊತೆ ವಿನಮಯ ಮಾಡಿಕೊಳ್ಳುತ್ತಿದ್ದರು. ಇವರಿಗೆ ಭಾರತ ಮತ್ತು ಪಾಕಿಸ್ತಾನವೆಂದರೆ ಬಲು ಪ್ರೇಮ. ಇಲ್ಲಿಯವರಿಗೆ ಬಾಲಿವುಡ್ ಜೂತೆ ನಿಕಟ ಸಂಪರ್ಕ ಮತ್ತು ಅತಿಯಾದ ಪ್ರೀತಿ. ಇಂದಿನ ದುಬೈ ಯುವರಾಜ ಮತ್ತು ರಾಷ್ಟ್ರಾಧ್ಯಕ್ಷ ಶೇಖ್ ಮಹಮದ್ ಬಿನ್ ರಸಲ್ ಮುಖ್ತಯಾರ್ ಅಲ್ ನಹ್ಯಾಹ್ನ ಮತ್ತು ಸಲ್ಮಾನ್ ಖಾನ್ ಆತ್ಮೀಯ ಸ್ನೇಹಿತರಂತೆ.

ಇಂದಿನ ಅಧುನಿಕ ದುಬೈನ ಇತಿಹಾಸ 70 ವರ್ಷದ್ದು. ಇವರ ಆರ್ಥಿಕ ಅವಲಂಬನೆ ನೈಸರ್ಗಿಕ ಮುತ್ತುಗಳು ಮತ್ತು ಮೀನು. ಯಾವಾಗ ಜಪಾನಿಗರು ಕೃತಕ ಮುತ್ತಗಳನ್ನು ತಯಾರಿಸಿದರೋ ಇವರ ನೈಸರ್ಗಿಕ ಮುತ್ತುಗಳ ಬೇಡಿಕೆ ಕಮ್ಮಿ ಆಗತೊಡಗಿತು. ಆಗ ಇವರ ಹೂಸ ಉದ್ದಿಮೆ ಮರದ ದೋಣಿಗಳನ್ನು ನಿರ್ಮಾಣ ಮಾಡುವುದು ಮತ್ತು ಬೇರೆ ದೇಶಗಳ ಹಾಳಾದ ದೋಣಿಗಳನ್ನು ದುರಸ್ತಿ ಅಥವ ಸರಿಪಡಿಸಿ ಕಳಿಸುವುದು. ಈ ಸಮಯದಲ್ಲೇ ಇಲ್ಲಿಯ ಮೂಲ ನಿವಾಸಿಗಳು ಹಣವನ್ನು ನೋಡಿದ್ದು ಮತ್ತು ಹಣದಲ್ಲೇ ವಿನಿಮಯ ಮಾಡಿಕೊಂಡಿದ್ದು. ಇವರಿಗೆ ಆರ್ಥಿಕವಾಗಿ ಸಹಾಯ ಮಾಡಿದ ಮೊದಲ ದೇಶ ಭಾರತ.
ಈ ದೇಶ ಭಾರತವನ್ನೂ ಎಂದಿಗೂ ಮರೆಯಲಾರರು. 1965 ನೇ ಇಸವಿಯಲ್ಲಿ 22 ದಿರಾಮ್ಗಳಿಗೆ 1 ರುಪಾಯಿ ಇತ್ತು. ಆದರೆ ಇಂದು ಉಲ್ಟಾ. 1 ದಿರಾಮ್ಗೆ 23 ರೂಪಾಯಿಗಳು. ಇದರಿಂದಲೇ ಅವರ ಆರ್ಥಿಕತೆಯ ಅಭಿವೃದ್ಧಿಯನ್ನು ತಿಳಿಯುಬಹುದು. ಇದೆಲ್ಲಾ ಅಗಿದ್ದು 1971 ನೇ ಇಸವಿಯಿಂದ. ಹೂರ ದೇಶದ ಭೂವಿಜ್ಞಾನಿಗಳು ಈ ದೇಶದಲ್ಲಿ ಕಪ್ಪು ತೈಲ (ಪೆಟ್ರೋಲಿಯಮ್) ವನ್ನು ಕಂಡು ಹಿಡಿಯುವದರಲ್ಲಿ ಯಶಸ್ವಿಯಾದರೋ ಅಂದೇ ಅ ದೇಶದ ಆರ್ಥಿಕತೆ ಇಮ್ಮಡಿಸುತ್ತಾ ಸಾಗಿತು. ಇದರ ಆಸೆ ತಂಬಾ ದಿವಸ ಉಳಿಯಲಿಲ್ಲ. ಕಪ್ಪು ಚಿನ್ನವೆಂದೇ ಪ್ರಖ್ಯಾತವಾದ ತೈಲವನ್ನು ಹೂರತೆಗೆದು ಮಾರುತ್ತಾ ಬಂದರು. ಮತ್ತೆ ದೇಶದ ಆರ್ಥಿಕತೆಯ ಹಿನ್ನಡೆಯನ್ನು ಮನಗೊಂಡರು. ಆಗಿನ ಪ್ರಧಾನ ಮಂತ್ರಿ ಮತ್ತು ರಾಜ ಶೇಖ್ ರಶೀದ್ ಬಿನ್ ಸಯಾದ್ ಅಲಿ ಮಕ್ತೂಮ್ ಅಲ್ ನಹ್ಯಾಹ್ನರನ್ನು ಪಾದರ್ ಆಫ್ ದುಬೈ ಎಂದೇ ಕರೆಯುತ್ತಾರೆ. ಅಂದು ಅವರ ಕನಸಿನಲ್ಲಿ ಅಕಸ್ಮಾತ್ ತೈಲವೆಲ್ಲಾ ಕಾಲಿ ಆದರೇ ಮತ್ತೇನು ಎಂಬ ಪ್ರಶ್ನೆ ಕಾಡುತಿತ್ತು. ಆಗ ಅವರಿಗೆ ಹೊಳೆದ ಉಪಾಯ ದುಬೈಯನ್ನು ಪ್ರೇಕ್ಷಣೀಯ ತಾಣವಾಗಿ ಪರಿವರ್ತಿಸಿ ಪ್ರಪಂಚಾದ್ಯಂತ ಹೂಡಿಕೆದಾರರನ್ನು ಬರ ಮಾಡಿಕೊಳ್ಳುವುದು. ಆಗಲಿಂದಲೇ ದುಬೈನ ಮೇಲ್ಮೈ ಲಕ್ಷಣಗಳು ಕೇಳ್ ಅರಿಯದಂತೆ ಬೆಳೆಯುತ್ತಾ ಹೋಯಿತು.

ಹೇಗೆ ಹೂಡಿಕೆದಾರರನ್ನು ಬರಮಾಡಿದರೆಂಬಾ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನ ಮಾಡುವೆ. ದುಬೈನ್ನು ಕೆಲವಾರು ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದೆ. ಇವುಗಳಲ್ಲಿ ಒಂದು “ದುಬೈ ಮರೈನ್”. ದುಬೈನ ಸಮುದ್ರ ದಡ ಸುಮಾರು 75 ಕಿಲೋ ಮೀಟರ್ ಇತ್ತು. ಇಂದು ಕೃತಕವಾಗಿ ಮರುಳು ಮತ್ತು ರಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಿ ಸಮುದ್ರದ ನೀರಿಗೆ ತುಂಬಿಸಿ ಗಟ್ಟಿಯಾದ ಭೂಮಿಯನ್ನು ಸೃಷ್ಟಿಸಿ 750 ಕಿಲೋ ಮೀಟರಷ್ಟು ಕರಾವಳಿಯನ್ನು ವಿಸ್ತರಿಸಿದ್ದಾರೆ. ಉದಾಹರಣೆಗೆ “ಪಾಮ್ ಮರೈನ್”. ಇಂತಹ ನೆಲ ಗಡ್ಡೆಗಲ ಮೇಲೆ ಹೋಟೆಲ್, ಐಟಿ ಬಿಟಿ ಬಹು ಅಂತಸ್ತಿನ ಕಟ್ಟಡಗಳು, ವಾಸ ಯೋಗ್ಯ ಗಗನ ಚುಂಬಿ ಅಪಾರ್ಟ್ಮೆಂಟ್ಗಳು, ಬೆಲೆ ಬಾಳುವ ರೋ ಹೌಸ್ಗಳು, ಥೀಮ್ ಪಾರ್ಕ್ಗಳು, ಬೃಹತ್ತಾದ ಉಗ್ರಾಣಗಳು ಹೀಗೆ ಕಟ್ಟಲಾಗಿದೆ. ಕಟ್ಟುವುದಕ್ಕೆ ಮುನ್ನ ಮೂಲಭೂತ ಸೌಕರ್ಯ ಒದಗಿಸಬೇಕಲ್ಲವೆ. ಮೊದಲು ಮಾಡಿದ್ದು ಉನ್ನತ ರಹದಾರಿಗಳನ್ನು, 24 ಗಂಟೆ ಕುಡಿಯಲು ಯೋಗ್ಯವಾದ ನೀರು ಕೊಡುವುದು, ನಿರಂತರ ಅಣು ಸ್ಥಾವರಗಳಿಂದ ವಿಧ್ಯುತ್ ಸೇವೆ, ಗಾಳಿ ಸೇವಿಸಲು ಸಾವಿರಾರು ಎಕರೆಗಳ ಕಾಡು ನಿರ್ಮಾಣ ಮಾಡುವುದು. ಇಲ್ಲಿಯ ವಿಶೇಷತೆ ಎನೆಂದರೆ ಯ ಎ ಇ ಇನ್ನೂ ಶೇಖ್ರ ಆಳ್ವಿಕೆಯಲ್ಲೇ ಇವೆ. ಇಲ್ಲಿಯ ಮೂಲ ನಿವಾಸಿಗಳನ್ನು “ಎಮರಿತೀಸ್” ಎಂದು ಕರೆಯುವರು.

ಇವರ ಜನ ಸಂಖ್ಯೆಯು 15%. ಭಾರತಿಯರು 43%. ಇತರೆ ಜನ 190 ದೇಶದವರಿಗಿರುತ್ತಾರೆ. ಈ ದೇಶದ ಜನ ಸಂಖ್ಯೆ 1 ಕೋಟಿ ಅಷ್ಟೆ. ಹೂಡಿಕೆ ಮಾಡುವಾಗ ಕಪ್ಪು ಅಥವ ಬಿಳಿ ಹಣವೆಂಬ ವೆತ್ಯಾಸವಿಲ್ಲ. ಅವರಿಗೆ ಮುಖ್ಯವಾಗಿ ದುಡ್ಡು ಬೇಕು. ಹೀಗಾಗಿ ಪ್ರಪಂಚಾದ್ಯಂತ ರಾಜಕಾರಣಿಗಳು, ಫಿಲ್ಮ ಆಕ್ಟರ್ಸ, ಕುಬೇರರು ಹೀಗೆ ಇಲ್ಲಿ ಹೂಡಿಕೆ ಮಾಡಿದ್ದಾರೆ. ಎಮರಿತೀಸ್ ಜೂತೆ ಪಾಲುದಾರಿಕೆ ಇಲ್ಲದೆ ಈ ದೇಶದಲ್ಲಿ ವ್ಯಾಪಾರ ಮಾಡುವಹಾಗಿಲ್ಲ. ನಿರ್ಧಿಷ್ಟವಾದ ವಾಸ ಸ್ಥಳಗಳಲ್ಲಿ ಮಾತ್ರ ವಾಸದ ಮನೆಗಳನ್ನು ಕೂಳ್ಳಬಹುದು. ಮೂಲ ನಿವಾಸಿಗಳ ಮನೆ ಆಜು ಬಾಜು ನಾವು ವಾಸ ಮಾಡುವಹಾಗಿಲ್ಲ. ಇಲ್ಲಿಯವರು ತಮ್ಮ ಕಪ್ಪು ಚಿನ್ನದ ಹಣವನ್ನು ಕಟ್ಟಡಗಳಿಗೆ ಹಾಕಿದ್ದಾರೆ. ಪ್ರಸ್ತುತದಲ್ಲಿ 50% ಮನೆಗಳು ಮತ್ತು ವಾಣಿಜ್ಯ ಯೋಗ್ಯ ಸ್ಥಳಗಳು ಕಾಲಿ ಇವೆ.
ಯಾರಾದರೂ ಹೂಡಿಕೆ ಮಾಡಬೇಕು ಎನ್ನುವುದಾದರೆ ಒಂದು ಪ್ರಾಜಕ್ಟ್ ರಿಪೋರ್ಟ ಕೊಂಡಯ್ಯಬೇಕು. ದುಬೈ ಮೆರೇನ್ “ಫ್ರೀ ಜೋನ್” ಎಂದು ಕರೆಯಲಾಗುತ್ತೆ. ಇಲ್ಲಿಯ ಕಾರ್ಯಾಲಯದಲ್ಲಿ ನಾವು ಪ್ರಾಜಕ್ಟ ರಿಪೋರ್ಟನೊಂದಿಗೆ ಕೂತರೆ ಅಲ್ಲಿಯ ಎಮರಿತೀಸ್ ನಾಗರಿಕ, ಲೇ ಔಟ್ ಪ್ರಾಜಕ್ಟ ಹೆಡ್, ಸ್ಥಳೀಯ ಕಾರ್ಪೋರೇಟರ್, ರಾಜ್ಯದ ಲೆಕ್ಕ ಪರಿಶೋಧಕ, ಫೈನಾನ್ಸ ಮಿನಿಸ್ಟ್ರಿ ರೆಪ್ರಸೆಂಟೇಟಿವ್ ಎಲ್ಲರೂ ನಮ್ಮ ಹತ್ತಿರವೇ ಬಂದು ಚರ್ಚಿಸಿದ ನಂತರ ವ್ಯಾಪಾರ ಈಷ್ಟವಾಯಿತೆಂದರೆ ನಮಗೆ ಉಗ್ರಾಣದ ಛಾವಿ ನೀಡುತ್ತಾರೆ. ಉದಾಹರಣೆಗೆ ನಮಗೆ ಒಂದು ವರ್ಷಕ್ಕೆ ಒಂದು ಕೋಟಿಯ ಲಾಭ ಎಂದುಕೊಳ್ಳೊಣ, ಆಗ ಅಲ್ಲಿನ ಎಮರತೀಸ್ಗೆ ಹತ್ತು ಲಕ್ಷ ನೀಡಬೇಕು. ಇವರಿಗೆ ಅತಿ ಆಸೆ ಇಲ್ಲ. ನಮ್ಮ ಗೈಡ್ನ ಪ್ರಕಾರ ಅಲ್ಲಿಯ ನಿವಾಸಿಗಳು ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರಂತೆ. ನಮಗೆ ಲಾಭ 50 ಲಕ್ಷ ಬರಲಿ ಅಥವ 2 ಕೋಟಿ ಮಾಡಿದರೂ ಕೇಳುವದು 10 ಲಕ್ಷ ಅಷ್ಟೆ. 3 ಅಥವ 4 ಕೋಟಿ ಮಾಡಿದ್ದೇವೆಂದು ಜಾಸ್ತಿ ಹಣ ಕೇಳುವುದಿಲ್ಲವಂತೆ.

ನಾನು ನೋಡಿದ ಕಾಲಿ ಜಾಗಗಳೆಲ್ಲಾ ಬೃಹತ್ತಾದ ಕಟ್ಟಡಗಳು ತಲೆ ಎತ್ತುತ್ತಿವೆ. ಇದನ್ನು ಕಂಡು ಅಬುದುಬೈನ ರಾಜ ಶೇಖ್ ಮಹಮದ್ ಬಿನ್ ಜಯದ್ ಅಲಿ ಅಲ್ ನಹ್ಯಾಹ್ನ ಅವರು ಸಹ ನವ ನಗರವನ್ನು ನಿರ್ಮಾಣಿಸಿ ಹೂಡಿಕೆದಾರರನ್ನು ಸೆಳೆಯುವ ಹುನ್ನಾರದಲ್ಲಿ ಇದ್ದಾರೆ. ಕಾರಣ, ದುಬೈ ಆರ್ಥಿಕತೆಯು ಪಾತಾಳಕ್ಕೆ ಇಳಿದ ಸಮಯದಲ್ಲಿ ಮೇಲೆತ್ತಿದ್ದು ಈ ರಾಜನೇ. ಇವರೇ ಈ ದೇಶವನ್ನು ಆಳುತ್ತಿರುವ ಮಾನಾರ್ಕ ಮತ್ತು ಪ್ರಧಾನ ಮಂತ್ರಿ. ಈಗ ಇವರು ಅತ್ಯಾಧುನಿಕ ನಗರವನ್ನು ಕಟ್ಟಿ ಬುರ್ಜ(ಟವರ್) ಕಲೀಫಾಗಿಂತಾ ಎತ್ತರದ ಟವರ್ ನಿರ್ಮಾಣ ಮಾಡುವ ಹಂತದಲ್ಲಿ ಇದ್ದಾರೆ. ಆಗ ದುಬೈನ ಸ್ಥಿತಿ ಅಯೋಮಯ ಆಗಬಹುದೆಂದು ನಮ್ಮ ಗೈಡ್ ಊಹೆ. ಇಲ್ಲಿ ಪ್ರಜಾಪ್ರಭುತ್ವ ಇಲ್ಲ. ಯು ಎ ಇ ಸಾಮ್ರಾಜ್ಯ 42 ಪ್ರತಿನಿಧಿಗಳನ್ನು ಒಳಗೊಂಡಿದೆ.
ಈ ದೇಶದ ರಾಜಧಾನಿ ಅಬುದಾಬಿ. ಆ 7 ರಾಜ್ಯಗಳು ದುಬೈ, ಅಬುದಾಬಿ, ಶಾರ್ಜಾ, ಅಜಮನ್, ಉಮ್ ಅಲ್ ಕ್ವೈನ್, ಫುಜೈರಾ ಮತ್ತು ರಜ ಅಲ್ ಕೈಮ್ಹಾ. 2 ರಾಜ್ಯಗಳು (ದುಬೈ, ಅಬುದಾಬಿ)ತಲಾ 8, 3 ರಾಜ್ಯಗಳು (ಶಾರ್ಜ, ಅಜಮನ್, ಉಮ್ ಅಲ್ ಕ್ವೈನ್)ತಲಾ 6 ಮತ್ತು ಉಳಿದ ರಾಜ್ಯಗಳು ತಲಾ 4. ಇದರಲ್ಲಿ ಅರ್ಧದಷ್ಟು ರಾಜ ಮನೆತನದವರು ಮತ್ತು ಇನ್ನರ್ಧ ರಾಜರು ಆರಿಸಿದವರು. ಈ ರಾಜರು ಯಾವುದೇ ಕಾರಣಕ್ಕು ತಮ್ಮ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಈ ದೇಶದಲ್ಲಿ ಬಿಟ್ಟಿ ಯಾವುದೂ ಇಲ್ಲ. ಆಸ್ಪತ್ರೆ ಮತ್ತು ವಿದ್ಯಾ ಕೇಂದ್ರಗಳಲ್ಲಿ ಫ್ರೀ ಎನ್ನುವುದೇ ಇಲ್ಲ. ಆದರೆ ಅಲ್ಲಿಯ ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಮುಂಗಡ ಹಣವನ್ನು ನೀಡಿ ರೋಗಿಗಳಿಗೆ ಮತ್ತು ವಿಧ್ಯಾರ್ಥಿಗಳಿಗೆ ಸಹಾಯ ಮಾಡುತ್ತಾರೆ.

ಇಲ್ಲಿ ಎಲ್ಲಾ ಕಡೆಯೂ ಕಣ್ಗಾವಲು ಇರುತ್ತೆ. ಅಪರಾಧ ಮಾಡಿ ಶಿಕ್ಷೆಗೆ ಒಳಗಾದರೆ ಕಠಿಣ ದಂಡ. ವಾಹನ ಚಲಾಯಿಸುವಾಗ ತಪ್ಪು ಮಾಡಿದರೆ ಮತ್ತು ನಾಗರಿಕರು ರಹ ದಾರಿಗಳಲ್ಲಿ ಅಡ್ಡ ದಿಡ್ಡಿ ಓಡಾಡಿದರೆ 500 ದಿರಾಮ್ ದಂಡ. ಒಂದು ವರ್ಷದಲ್ಲಿ ಹೀಗೆ ಸುಮಾರು 1 ಮಿಲಿಯನ್ ದಿರಾಮ್ಸ ದಂಡದ ರೂಪದಲ್ಲಿ ಅಲ್ಲಿಯ ಸರ್ಕಾರಕ್ಕೆ ಲಾಭ ಬರುತ್ತದೆ. ಪೋಲಿಸರು ಕಾಣುವುದಿಲ್ಲ. ಆದರೆ ಪೋಲಿಸರು ಮುಫ್ತಿಯಲ್ಲಿ ಕಾಣ ಸಿಗುತ್ತಾರೆ. ಇಲ್ಲಿಯ ಜೀವನ ದುಬಾರಿ. 1 ಇಡ್ಲಿ ಅಥವ ವಡೆ 10 ದಿರಾಮ್ಸ. ಅಂದರೆ 230/- ರೂಪಾಯಿಗಳು. ಈ ರಾಜ್ಯ ಐಷಾರಾಮಿ ಜೀವನಕ್ಕೆ ಹೆಸರುವಾಸಿ. ಈ ನಗರವನ್ನು “ಸಿಟಿ ಆಫ್ ಶಾಪಿಂಗ್” ಎಂಬುದಾಗಿ ಸಹ ಕರೆಯುತ್ತಾರೆ.

ಎಲ್ಲಿ ನೋಡಿದರೆ ಅಲ್ಲಿ ಶಾಪಿಂಗ್ ಮಾಲ್ ಕಾಣಲು ಸಿಗುವುದು. ಹಲವಾರು ಶಾಪಿಂಗ್ ಮಾಲ್ 24 ಗಂಟೆ ತೆಗೆದಿರುತ್ತವೆ. ಅವುಗಳಲ್ಲಿ ಡೆ ಟು ಡೆ ಮತ್ತೆ 1 ಟು 20 ದಿರಾಮ್ಸ ಮಾಲ್ಸ್. ಇವೆಲ್ಲವು ನಮಗೆ ಎಟುಕುವ ಮಾಲ್ಸ್. ಕೇರ್ ಫೋರ್ ಡಿಜಿಟಲ್ ಮಾರ್ಕೆಟ್, ನಮ್ಮ ಭಾರತಕ್ಕಿಂತ ಎಲಾಕ್ಟ್ರಾನಿಕ್ ಐಟಮ್ಸನ ಬೆಲೆ ಇಲ್ಲಿ ಕಮ್ಮಿ. ಕಾರಣ ಇಲ್ಲಿ ತೆರಿಗೆ ಇಲ್ಲ. ಎಮಿರೇಟ್ಸ ಮಾಲ್ ಮತ್ತು ದುಬೈ ಮಾಲ್ ಐಷಾರಾಮಿ ಬ್ರಾಂಡೇಡ್ ಅಂಗಡಿಗಳು. ದುಬೈ ಮಾಲ್ ಒಂದರಲ್ಲೇ ಅಂತಹ ಅಂಗಡಿಗಳು 1500 ಇವೆ. ಇವೆಲ್ಲವನ್ನು ನೋಡಲು 3 ದಿವಸ ಬೇಕು. ಇಲ್ಲೇ ಬುರ್ಜ ಕಲೀಫಾ ಒಂದು ಕಿಲೋಮೀಟರ್ ಎತ್ತರದ ಕಟ್ಟಡವಿದೆ. 125 ನೇ ಮಹಡಿಗೆ ಲಿಪ್ಟನಲ್ಲಿ ಹೋಗಲು ಒಂದು ನಿಮಿಷ ಸಾಕು. ಇಲ್ಲಿಯ ಮ್ಯೂಸಿಕ್ ಫೌಂಟನ್ ನಮ್ಮ ಕಣ್ಣುಗಳಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಇಲ್ಲಿ ನೋಡಬೇಕಾದ ಸ್ಥಳಗಳು ದುಬೈ ಫ್ರೇಮ್, ದುಬೈ ಗ್ಲೋಬಲ್ ವಿಲೇಜ್, ದುಬೈ ನ್ಯಾಷನಲ್ ಮ್ಯೂಸಿಯಮ್, ದುಬೈ ಮೆರೇನ್, ಮಕ್ಕಳಿಗೆ ಥೀಮ್ ಪಾರ್ಕ್ಗಳು, ಡೆಸರ್ಟ ಸಫಾರಿ, ಮರೇನ್ ಬೋಟ್ ರೈಡ್, ಪಾಮ್ ಮರೈನಾ, ಪಾಮ್ ಅಟ್ಲಾಂಟಿಸ್ ಹೋಟೆಲ್, ಲಾಸ್ಟ ಚೇಂಬರ್ ಅಕ್ವೇರಿಯಮ್ ಮತ್ತು ವಾಟರ್ ಥೀಮ್ ಪಾರ್ಕ್, ಬುರ್ಜ ಅಲ್ ಅರಬ್ ಹೋಟೆಲ್, ಅಬುದಾಬಿ ಮಸೀದಿ, ಖರ್ಜೂರದ ಸೂಕ್ (ಮಾರ್ಕೇಟ್), ಶಾರ್ಜ ಗಗನೇತರ ಬಹು ಮಹಡಿ ಕಟ್ಟಡಗಳು. ಇವುಗಳ ಮಾಹಿತಿಗೆ ಗೂಗಲ್ ಹುಡುಕಬಹುದು.

ನಮ್ಮ ಮನಸ್ಸಿಗೆ ಸಂತೋಷ ಸಿಗಬೇಕೆಂದರೆ ಮತ್ತು ಧ್ಯಾನಾಸಕ್ತಿ ಪಡೆದುಕೊಳ್ಳಬೇಕಂದರೆ ಪ್ರವಾಸಿಗರು “ಮಿರಾಕಲ್ ಉದ್ಯಾನವನ” ನೋಡಲೇಬೇಕು. ಈ ಉದ್ಯಾನವನ್ನು ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿರುತ್ತೆ. ಬೇಸಿಗೆಯ ಉರಿ ಬಿಸಿಲಿನಲ್ಲಿ ಯತೇಚ್ಛವಾಗಿ ನೀರು ಬೇಕಾಗುವುದರಿಂದ ಮತ್ತು ಹೂಗಳು ಬಾಡು ಹೋಗುವುದರಿಂದ ಉದ್ಯಾನವನ್ನು ಬಂದ್ ಮಾಡುತ್ತಾರೆ. ಪಕ್ಕದಲ್ಲೆ ಚಿಟ್ಟೆಯ ಉದ್ಯಾನವನ ಮತ್ತು ವಿಜ್ಞಾನ ಪಾರ್ಕ್ ಇವೆ.
ಪ್ರಸ್ತುತ ಯುಗ ಕೃತಕ ಬುದ್ದಿಮತೆಯ ಯುಗ. ಈ ಹೂಸಾ ಕೈಗಾರಿಕಾ ಕ್ರಾಂತಿಯನ್ನು “ಫೋರ್ತ ಇಂಡಸ್ಟ್ರಿಯಲ್ ರೆವಲ್ಯೂಷನ್” ಎಂದು ನಾಮಕರಣ ಮಾಡಿದ್ದಾರೆ. 2050 ನೇ ಇಸವಿಗೆ ದುಬೈ ನಗರ ಹೇಗೆ ಇರಬಹುದೆಂಬ ವರ್ಚುವಲ್ ರಿಯಾಲಿಟಿ ಮೂವೀ ಶೋ ತೋರಿಸುತ್ತಾರೆ. ಅಪಘಾತ ಸಂಭವಿಸಿದರೆ ಮತ್ತು ಮೆಡಿಕಲ್ ಎಮರ್ಜನ್ಸಿ ಇದ್ದರೆ ಆ ಸ್ಥಳಗಳಿಗೆ ಒಂದು ನಿಮಿಷದಲ್ಲಿ ಆಂಬುಲೆನ್ಸ ಬರಬೇಕೆಂಬಾ ಮಹತ್ವಾಕಾಂಕ್ಷೆಯ ಕನಸು ಕಾಣುತ್ತಿದ್ದಾರೆ. ಚಂದ್ರಲೋಕದಲ್ಲಿ ಮಾನವ ತನ್ನ ಮನೆಯನ್ನು ಕಟ್ಟಿ ಹೇಗೆ ಜೀವನ ನಡೆಸಬಹುದು ಎಂಬ ಆಲೋಚನೆ ಅವರಲ್ಲಿ ಇದೆ. ಈ ಶೋಗಳನ್ನು ಫ್ಯೂಚರ್ ಮ್ಯೂಸಿಯಮಲ್ಲಿ ನೋಡಬಹುದು.

ಯಾರೇ ದುಬೈಗೆ ಹೋಗಿಬಂದರೂ ಸ್ನೇಹಿತರು, ಬಂಧುಗಳು ಮತ್ತು ಅಕ್ಕ ಪಕ್ಕ ಮನೆಯವರು ಕೇಳುವುದು “ಚಿನ್ನದ ಒಡವೆ ತರಲಿಲ್ಲವೆ?”. ವ್ಯಾಮೋಹ ಅಥವ ಮೋಹ ನಮ್ಮ ಹುಟ್ಟಿನ ನೆಂಟು. ನಾವು ನೀವು ಇದರಿಂದ ದೂರ ಸರಿಯಲು ಸಾಧ್ಯವಿಲ್ಲ. ಈ ಮೋಹವನ್ನು ತ್ಯಜಿಸಿದವನೇ “ಪರಂಧಾಮ”. ಅಂತಹ ಕೆಲವು ಸಂತರು ಇದ್ದಾರೆ. ಈ ಚಿನ್ನದ ಮಾರ್ಕೇಟ್ (ಗೋಲ್ಡ್ ಸೂಕ್) ನೋಡಬೇಕಾದ ಸ್ಥಳ. ಹಲವಾರು ಅಂಗಡಿಗಳು ಇವೆ. ವಿಶೇಷ ಏನಂದರೆ ತ್ಯಾಮಾನ ಅಥವ ವೇಷ್ಟೇಜ್ ಇಲ್ಲ ಮತ್ತು ಡಿಸೈನ್ ಮೇಲೆ ಮೇಕಿಂಗ್ ಚಾರ್ಜ ಹಾಕುತ್ತಾರೆ. ಜೀರೊ ಮೇಕಿಂಗ್ ಚಿನ್ನದ ಆಭರಣಗಳು ಇಲ್ಲಿ ಲಭ್ಯ. ಇಲ್ಲಿ ಭಾರತ ಮತ್ತು ಇಟಾಲಿಯನ್ ಡಿಸೈನ್ಸ್ ಹೆಚ್ಚು. ತೆರಿಗೆ ಇಲ್ಲದೇ ಇರುವದರಿಂದ ಪ್ರವಾಸಿಗರು ಚಿನ್ನವನ್ನು ಕೊಂಡು ತಮ್ಮ ತಮ್ಮ ದೇಶಗಳಿಗೆ ಒಯ್ಯುತ್ತಾರೆ.
ನಮಗೆ ನಮ್ಮ ದೇಶದಲ್ಲಿ ಎಲ್ಲಿ ನೋಡಿದರೂ ಗಿಡ ಮರ, ಅಲ್ಲಿ ಕಣ್ಣು ಹಾಯಿಸಿದಷ್ಟು ಮೋಡ ಮುಟ್ಟುವ ಕಾಂಕ್ರಿಟ್ ಕಟ್ಟಡಗಳು. ಈ ಕಟ್ಟಡಗಳನ್ನು ಕಟ್ಟುವ ಪ್ರಮುಖ ಕಂಪನಿಗಳು ಎಮಾರ್, ದಮಾಕ್, ಶೋಭ ಇತ್ಯಾದಿ…ಅಲ್ಲಿಯ ಗೈಡ್ ಕನ್ನಡದವ “ಗೆಸ್ ಶೋಭಾ ಯಾರದ್ದು?”, ಈ ಪ್ರಶ್ನೆ ನನಗೆ ಹಾಕಿದ…..
-ಡಾ॥ ಎ. ಎಮ್ ನಾಗೇಶ
ಖ್ಯಾತ ಮನೋವೈದ್ಯ

