
ಪೈಲ್ವಾನ್ʼ ಚಿತ್ರದ ನಟನೆಗಾಗಿ ʼಅತ್ಯುತ್ತಮ ನಟ ಪ್ರಶಸ್ತಿ
ಪೈಲ್ವಾನ್ʼ ಚಿತ್ರದ ನಟನೆಗಾಗಿʼಅತ್ಯುತ್ತಮ ನಟ ಪ್ರಶಸ್ತಿ
2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ (State Film Award) ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆ ಆಗಿರುವ ಕಿಚ್ಚ ಸುದೀಪ್ (Kiccha Sudeep) ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ʼಪೈಲ್ವಾನ್ʼ ಚಿತ್ರಕ್ಕಾಗಿ ಅವರಿಗೆ ʼಅತ್ಯುತ್ತಮ ನಟ ಪ್ರಶಸ್ತಿʼ ಬಂದಿದ್ದು, ಇದನ್ನು ಅವರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ಸುದೀಪ್ ಪೋಸ್ಟ್ನಲ್ಲಿ ಏನಿದೆ?:
“ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಗೌರವ ಕೊಟ್ಟ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದರೆ ಕಳೆದ ಕೆಲ ವರ್ಷಗಳಿಂದ ನಾನು ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ಇದಕ್ಕೆ ನಾನು ವಿವಿಧ ವೈಯಕ್ತಿಕ ಕಾರಣಗಳಿವೆ. ಪ್ರಶಸ್ತಿಗೆ ಅರ್ಹವಾಗಿರುವ ಅನೇಕ ನಟ – ನಟಿಯರು ಇದ್ದಾರೆ. ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರೆ ಅದು ನನಗೆ ಸಂತೋಷ” ಎಂದು ಹೇಳಿದ್ದಾರೆ.