ಬೆಂಗಳೂರು, ಜುಲೈ 5: ಒಂದೇ ಹುದ್ದೆಯಲ್ಲಿ ಯಾವುದೇ ಪದೋನ್ನತಿ ಪಡೆಯದೆ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಒಂದು ಹೆಚ್ಚುವರಿ ವೇತನ ಭಡ್ತಿ ನೀಡಬೇಕೆಂದು ದಿನಾಂಕ 9.5.2002ರ ಸರಕಾರಿ ಆದೇಶ ಇದೆ. ಆದರೆ ಈ ಆದೇಶವನ್ನು ದಿನಾಂಕ 1.4.2002 ರಿಂದ ಜಾರಿಗೆ ತಂದ ಕಾರಣದಿಂದಾಗಿ, ಅದಕ್ಕೂ ಮುನ್ನ 20 ವರ್ಷಗಳ ಸೇವೆ ಪೂರ್ಣಗೊಳಿಸಿದ ನೌಕರರು ಇದರಿಂದ ವಂಚಿತರಾಗಿದ್ದರು.
ಇದಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ 33 ವರ್ಷ ಸೇವೆ ಸಲ್ಲಿಸಿ 2005ರಲ್ಲಿ ನಿವೃತ್ತರಾದ ಶ್ರೀ ಮಂಜುನಾಥ ಜಿ.ಎಸ್. ಅವರು ತಮ್ಮ ಹಕ್ಕಿಗಾಗಿ ನ್ಯಾಯದ ಹಾದಿ ಅನುಸರಿಸಿ ಹೈಕೋರ್ಟ್ ಮೆಟ್ಟಿಲೇರಿದರು. ಇಲಾಖೆಗಳು ಜೇಷ್ಠತಾ ನಿಯಮ, ಬೇರೆ ಘಟಕಗಳ ಸೇವೆ ಇತ್ಯಾದಿ ಕಾರಣಗಳನ್ನು ನೀಡಿ ಅವರ ಅರ್ಜಿಯನ್ನು ನಿರಾಕರಿಸಿದ್ದವು.
ಇದನ್ನು ಓದಿ: GOOD NEWS : ರಾಜ್ಯ `ಅರಣ್ಯ ಇಲಾಖೆ’ಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕಾತಿ : ಸಚಿವ ಈಶ್ವರ್ ಖಂಡ್ರೆ ಘೋಷಣೆ.!
ಆದರೆ ದಿನಾಂಕ 4.3.2022ರಂದು ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಜಿ. ನರೇಂದರ್ ಮತ್ತು ಎಂ. ಜಿ. ಎಸ್. ಕಮಲ್ ಅವರ ವಿಭಾಗೀಯ ನ್ಯಾಯಪೀಠ, ಈ ವಿಷಯದಲ್ಲಿ ಮಹತ್ವದ ತೀರ್ಪು ನೀಡಿತು. 20 ವರ್ಷಗಳ ಕಾಲ ನಿರಂತರವಾಗಿ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅರ್ಜಿದಾರರು ದಿನಾಂಕ 1.4.2002ರಂದು ಹೆಚ್ಚುವರಿ ವೇತನ ಭಡ್ತಿಗೆ ಅರ್ಹರಾಗಿದ್ದು, ಅವರ ಪರಿಷ್ಕೃತ ಪಿಂಚಣಿ ಮತ್ತು ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಈ ತೀರ್ಪಿನಿಂದ ಅನೇಕ ವಂಚಿತ ನಿವೃತ್ತ ನೌಕರರಿಗೆ ಧೈರ್ಯ ಮತ್ತು ಆಶಾಕಿರಣ ಮೂಡಿದೆ. ಅವರಿಗೂ ಕೂಡ ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಅವಕಾಶ ಒದಗಿದೆ.

[…] ಇದನ್ನು ಓದಿ: ಹುದ್ದೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಸರ್ಕ… […]