ನವದೆಹಲಿ : ಅಗ್ನಿ – 5 ಕ್ಷಿಪಣಿ ಪರೀಕ್ಷೆ ಯಶಸ್ವಿಗೊಂಡಾಗಲೆಲ್ಲಾ ಚೀನಾಗೆ ನಡುಕ ಹುಟ್ಟಿತ್ತು. ಪಾಕಿಸ್ತಾನದ ಎಲ್ಲಾ ನಗರಗಳನ್ನೂ ತಲುಪಬಲ್ಲ ಕ್ಷಿಪಣಿಗಳು ಭಾರತದ ಬಳಿ ಇದ್ದವು. ಆದರೆ, ಚೀನಾದ ರಾಜಧಾನಿ ಬೀಜಿಂಗ್ ಸೇರಿದಂತೆ ಎಲ್ಲ ನಗರಗಳನ್ನೂ ತಲುಪಬಲ್ಲ ಕ್ಷಿಪಣಿ ಭಾರತದ ಬಳಿ ಇರಲಿಲ್ಲ.
ಆಗ ತಯಾರಾಗಿದ್ದೇ ಅಗ್ನಿ 5. ಈಗ ಭಾರತ ಅಗ್ನಿ 6 ತಯಾರಿಸುತ್ತಿದೆ.
ಏನಿದು ಭಾರತದ ಅಗ್ನಿ 6..?
ಪಾಕ್ ಸೋಲಿನಿಂದ ಜಗತ್ತಿನಲ್ಲಿ ಭಾರತದ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲೂ ಭಾರತದ ಸ್ವದೇಶಿ ಶಸ್ತ್ರಗಳ ಬಗ್ಗೆಯೇ ಚರ್ಚೆ ಹೆಚ್ಚಾಗಿದೆ. ಇದೀಗ ಇಡೀ ಜಗತ್ತಿನ ಕಣ್ಣು ಅಗ್ನಿ 6 ಮೇಲೆ ನೆಟ್ಟಿದೆ. ಇದು ಭಾರತ ನಿರ್ಮಿಸಿದ ಅಗ್ನಿ ಸೀರೀಸ್ನ 7ನೇ ಕ್ಷಿಪಣಿ. ಭಾರತದ ಬಳಿ ಈಗಾಗಲೇ ಅಗ್ನಿ 1, ಅಗ್ನಿ P, ಅಗ್ನಿ 2, ಅಗ್ನಿ 3, ಅಗ್ನಿ 4, ಅಗ್ನಿ 5 ಎಂಬ ಖತರ್ನಾಕ್ ಮಿಸೈಲ್ಗಳಿವೆ. ಡಿಆರ್ಡಿಓ ಈಗಾಗಲೇ ಅಗ್ಬಿ 6ನ ಕೊನೇ ಹಂತದ ಕೆಲಸ ಮಾಡುತ್ತಿದ್ದು, ಶೀಘ್ರವೇ ಅಗ್ನಿ 6 ಭಾರತ ಸೇನೆ ಸೇರುವ ಸಾಧ್ಯತೆ ಇದೆ.
ಅಗ್ನಿ 6 ಖತರ್ನಾಕ್ ಕ್ಷಿಪಣಿಯಾಗಿದ್ದು ಅಮೆರಿಕ, ಯೂರೋಪ್, ಇಡೀ ಏಷ್ಯಾ ತಲುಪುತ್ತೆ. ಇದು 8 ರಿಂದ 12 ಸಾವಿರ ಕಿ.ಮೀ ದೂರದ ಟಾರ್ಗೆಟ್ ಹೊಡೆಯುತ್ತೆ ಎಂದು ಭಾರತ ಹೇಳಿಕೊಳ್ಳುತ್ತದೆ. ಅದರೆ, ಅಗ್ನಿ 6 ರೇಂಜ್ ಇನ್ನೂ ಹೆಚ್ಚಿರಬಹುದು ಎಂದು ಚೀನಾ ಹೇಳುತ್ತದೆ. ನಮ್ಮ ಅಗ್ನಿ 6 ಅಣ್ವಸ್ತ್ರಗಳನ್ನು ಹೊತ್ತೊಯ್ಯುಬಲ್ಲದು. ಒಂದೇ ಅಗ್ನಿ 6 ಮಿಸೈಲ್ 10 ಟಾರ್ಗೆಟ್ ಹೊಡೆಯಬಲ್ಲದು.
ಪರಮಾಣು ಸಿಡಿತಲೆ ಒಯ್ಯಬಲ್ಲ ಅಗ್ನಿ ಕ್ಷಿಪಣಿ
ಅಗ್ನಿ ಪ್ರೈಮ್ ಎನ್ನುವುದು ಅಗ್ನಿ ಕ್ಲಾಸ್ ಕ್ಷಿಪಣಿಗಳ ಆಧುನಿಕ ಆವೃತ್ತಿಯಾಗಿದೆ. ಇದು ಎರಡು ಹಂತಗಳ, ಕ್ಯಾನಿಸ್ಟರೈಸ್ಡ್ ಘನ ಇಂಧನ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದರಲ್ಲಿ ಎರಡು ರಿಡಂಡಂಟ್ ನ್ಯಾವಿಗೇಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿದ್ದು, ಈ ಕ್ಷಿಪಣಿಯನ್ನು ರೈಲಿನಿಂದಲೂ, ರಸ್ತೆಯಿಂದಲೂ ಉಡಾಯಿಸಬಹುದು. ಈ ಕ್ಷಿಪಣಿಯನ್ನು ದೀರ್ಘಕಾಲದ ತನಕ ಸಂಗ್ರಹಿಸಿ ಇಡಬಹುದು. ಇದನ್ನು ಭಾರತದಾದ್ಯಂತ ಅಗತ್ಯಕ್ಕೆ ತಕ್ಕಂತೆ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು.

[…] AGNI 6 MISSILE : ಸೇನೆಗೆ ಅಗ್ನಿ 6 ಮಹಾಬಲ..! […]