ಬೆಂಗಳೂರು/ಮಂಗಳೂರು/ಮೈಸೂರು, ಜೂನ್ 11, 2025: ಭಾರ್ತಿ ಏರ್ಟೆಲ್ (“ಏರ್ಟೆಲ್”) ತನ್ನ ಗ್ರಾಹಕರನ್ನು ಆನ್ಲೈನ್ ವಂಚನೆಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಕೇವಲ 25 ದಿನಗಳ ಅವಧಿಯಲ್ಲಿ, ಕಂಪನಿಯ AI-ಚಾಲಿತ ವಂಚನೆ ಪತ್ತೆ ವ್ಯವಸ್ಥೆಯು ಕರ್ನಾಟಕದಲ್ಲಿ 1.8 ಲಕ್ಷಕ್ಕೂ ಹೆಚ್ಚು ದುರುದ್ದೇಶಪೂರಿತ ಲಿಂಕ್ಗಳನ್ನು ತಡೆಹಿಡಿದಿದ್ದು, 2.3 ಮಿಲಿಯನ್ ಬಳಕೆದಾರರನ್ನು ರಕ್ಷಿಸಿದೆ.
ನೈಜ ಸಮಯದ ಬೆದರಿಕೆ ಪತ್ತೆ ತಂತ್ರಜ್ಞಾನದೊಂದಿಗೆ, ಈ ವ್ಯವಸ್ಥೆಯು ಪ್ರತಿದಿನ 1 ಬಿಲಿಯನ್ URL ಗಳನ್ನು ಪರಿಶೀಲಿಸಲಿದೆ. 100 ಮಿಲಿಸೆಕೆಂಡುಗಳಲ್ಲಿ ಲಿಂಕ್ಗಳನ್ನು ಸ್ಕ್ಯಾನ್ ಮಾಡಿ, ಅಪಾಯಕಾರಿ ಅಂತರ್ಜಾಲ ತಾಣಗಳಿಗೆ ಪ್ರವೇಶವನ್ನು ತಡೆಯುವ ಮೂಲಕ ಗ್ರಾಹಕರಿಗೆ ತಕ್ಷಣ ಎಚ್ಚರಿಕೆ ನೀಡುತ್ತದೆ.
ಕಂಪನಿಯು ನೀಡಿದ ಉದಾಹರಣೆ: ಮಂಗಳೂರು ನಿವಾಸಿಯೊಬ್ಬರು “ನಿಮ್ಮ ಪ್ಯಾಕೇಜ್ ವಿಳಂಬವಾಗಿದೆ…” ಎಂಬ ಸಂದೇಶ ಪಡೆದರೆ, ಲಿಂಕ್ ಕ್ಲಿಕ್ ಮಾಡಿದ ಕ್ಷಣದಲ್ಲೇ ಏರ್ಟೆಲ್ ವ್ಯವಸ್ಥೆಯು ಆ ಲಿಂಕ್ ಅನ್ನು ತಡೆದುಬಿಡುತ್ತದೆ ಹಾಗೂ “ನಿರ್ಬಂಧಿಸಲಾಗಿದೆ! ಏರ್ಟೆಲ್ ಈ ಸೈಟ್ ಅನ್ನು ಅಪಾಯಕಾರಿ ಎಂದು ಪರಿಗಣಿಸಿದೆ!” ಎಂಬ ಎಚ್ಚರಿಕೆ ಸಂದೇಶವನ್ನು ತೋರಿಸುತ್ತದೆ.
ಏರ್ಟೆಲ್ ಕರ್ನಾಟಕದ ಸಿಇಒ ರಜನಿಷ್ ವರ್ಮಾ :
“ಡಿಜಿಟಲ್ ಬೆದರಿಕೆಗಳೆದುರಿನ ಪೈಪೋಟಿಯಲ್ಲಿ, ಗ್ರಾಹಕರಿಗಾಗಿ ನಾವೇ ಮುನ್ನಡೆಯುತ್ತಿದ್ದೇವೆ. ಈ AI ವ್ಯವಸ್ಥೆಯು ಯಾವುದೇ ಅಪ್ಲಿಕೇಶನ್ ಅಥವಾ ಸೆಟ್ಟಿಂಗ್ಗಳ ಅಗತ್ಯವಿಲ್ಲದೆ, ನೇರವಾಗಿ ನಮ್ಮ ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸುತ್ತದೆ.” ಎಂದು ತಿಳಿಸಿದ್ದಾರೆ.
ಕರ್ನಾಟಕವು ಡಿಜಿಟಲ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಇಲ್ಲಿ ಫಿಶಿಂಗ್, ನಕಲಿ ವಿತರಣೆ ಸಂದೇಶಗಳು, ಭ್ರಾಂತಿಪಡಿಸುವ ಬ್ಯಾಂಕಿಂಗ್ ಎಚ್ಚರಿಕೆಗಳು ಮುಂತಾದ ವಂಚನೆಗಳು ಹೆಚ್ಚುತ್ತಿರುವುದನ್ನು ಗಮನಿಸಿ ಈ ತಂತ್ರಜ್ಞಾನ ಪರಿಹಾರವು ಪರಿಚಯಿಸಲಾಗಿದೆ. ಈ ಪರಿಹಾರವು ಕನ್ನಡ ಸೇರಿದಂತೆ ವಿವಿಧ ಸ್ಥಳೀಯ ಭಾಷೆಗಳಲ್ಲಿ ಬಳಕೆದಾರರಿಗೆ ಎಚ್ಚರಿಕೆಗಳನ್ನು ನೀಡುತ್ತದೆ.
AI ಚಾಲಿತ ವ್ಯವಸ್ಥೆಯು ವ್ಯವಹಾರಗಳಿಗೆ ಆರಂಭಿಕ ಬಳಕೆದಾರರಿಂದ ವೃತ್ತಿಪರರಿಗೆ ಎಲ್ಲರಿಗೂ ಸಮಾನವಾಗಿ ಪರಿಣಾಮಕಾರಿಯಾಗಿದೆ. ಇದು ಹೆಚ್ಚಿನ ಭದ್ರತೆ ಮತ್ತು ನಂಬಿಕೆಯನ್ನು ಒದಗಿಸುವ ಮೂಲಕ ಕರ್ನಾಟಕದಲ್ಲಿ ಡಿಜಿಟಲ್ ಪರಿವರ್ತನೆಗೆ ಪೂರಕವಾಗಿದೆ.
ಭಾರ್ತಿ ಏರ್ಟೆಲ್ ಲಿಮಿಟೆಡ್ ಕುರಿತು:
ಭಾರತದ ಪ್ರಮುಖ ಸಂವಹನ ಸೇವಾ ಪೂರೈಕೆದಾರರಿಗೆ, ಏರ್ಟೆಲ್ 15 ದೇಶಗಳಲ್ಲಿ 550 ಮಿಲಿಯನ್ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಇದು ಭಾರತದಲ್ಲಿ 4G/5G ಮೊಬೈಲ್, ಫೈಬರ್ ಬ್ರಾಡ್ಬ್ಯಾಂಡ್, ಡಿಜಿಟಲ್ ಪಾವತಿಗಳು, ಕ್ಲೌಡ್ ಸೇವೆಗಳು ಮತ್ತು ಇತರೆ ಬೃಹತ್ ಎಂಟರ್ಪ್ರೈಸ್ ಪರಿಹಾರಗಳನ್ನು ಒದಗಿಸುತ್ತದೆ.
ಹೆಚ್ಚಿನ ಮಾಹಿತಿಗೆ: www.airtel.com ಸಂಪರ್ಕಿಸಬಹುದಾಗಿದೆ.
