ಬೇಲೂರು- ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಬರುವ ಭಕ್ತಾಧಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಬೇಲೂರು ಪುರಸಭಾ ಅಧ್ಯಕ್ಷ ಎ ಆರ್ ಅಶೋಕ್ ಹೇಳಿದರು.
ಈ ವಿಚಾರವಾಗಿ ಇಂದು ಬೇಲೂರು ಪುರಸಭೆ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚನ್ನಕೇಶವ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಭರತನಾಟ್ಯ, ಡೊಳ್ಳುಕುಣಿತ, ಕೋಲಾಟ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ದೂರದ ಊರುಗಳಿಂದ ದೇವಸ್ಥಾನಕ್ಕೆ ಬರುವಂತಹ ಭಕ್ತಾಧಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ದೇವಸ್ಥಾನದ ಹಿಂಭಾಗದಲ್ಲಿ ಮಾಡಲಾಗಿದೆ.
ಅದೇ ರೀತಿ ಸುಮಾರು 12 ಮೊಬೈಲ್ ಟಾಯ್ಲೆಟ್ಗಳನ್ನು 8 ಮೊಬೈಲ್ ಟಾಯ್ಲೆಟ್ಗಳನ್ನು ಚನ್ನಕೇಶವ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಮತ್ತು ಉಳಿದ ೪ ಮೊಬೈಲ್ ಟಾಯ್ಲೆಟ್ಗಳನ್ನು ಬಿಕ್ಕೋಡು ರಸ್ತೆಯ ಕಲ್ಯಾಣಿ ಪಕ್ಕದಲ್ಲಿ ಇರಿಸಲಾಗಿದೆ. ಮಹಿಳೆಯರಿಗೆ ತೊಂದರೆಯಾಗದ ರೀತಿಯಲ್ಲಿ ಅಲ್ಲಿ ಮಹಿಳಾ ಪೋಲೀಸ್ ಸಿಬ್ಬಂದಿಗಳನ್ನು ಮಾನ್ಯ ಶಾಸಕರ ಆದೇಶದಂತೆ ನೇಮಕ ಮಾಡಲಾಗಿದೆ. ನಾಡಿನ ಎಲ್ಲಾ ಭಕ್ತಾಧಿಗಳು ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬಂದು ಈ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
