ಆಲೂರು ಪಟ್ಟಣದ ಹಳೆಯ ಆಲೂರಿನಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿ ಮನೆಯಲ್ಲಿದ್ದ ದಂಪತಿಗಳು ಹಾಗೂ ಒಂದು ವರ್ಷದ ಮಗು ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಸ್ಫೋಟದಲ್ಲಿ ಗಾಯಗೊಂಡವರು ಮನೆಯ ಮಾಲೀಕ ಮೋಹನ್ ಅವರ ಮಗ ಸುದರ್ಶನ್ ಆಚಾರ್ (40), ಪತ್ನಿ ಕಾವ್ಯ (28) ಮತ್ತು ಅವರ ಮಗು. ಗಾಯಗೊಂಡ ಮೂವರನ್ನೂ ಸ್ಥಳೀಯರಿಂದ ತಕ್ಷಣವೇ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ತುರ್ತು ಚಿಕಿತ್ಸೆಗೆ ಒಳಪಡಿಸಿದ್ದಾರೆ.
ಸ್ಫೋಟದಿಂದ ಮನೆಯ ಭಾಗಶಃ ಹಾನಿಗೊಳಗಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಉಂಟಾಗಿದೆ. ಆಲೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಕಲೇಶಪುರ ಉಪವಿಭಾಗದ ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ವಿವಿಧ ಕೋಣಗಳಿಂದ ತನಿಖೆ ಮುಂದುವರೆಸಿದ್ದು, ಸ್ಫೋಟದ ಸ್ವರೂಪ ಹಾಗೂ ಕಾರಣವನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

[…] […]