ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾಮದ ಡಾ|| ಬಿ.ಆರ್ ಅಂಬೇಡ್ಕರ್ ಯುವಕರ ಸಂಘದಿಂದ ಸಂವಿಧಾನ ಶಿಲ್ಪಿ, ಡಾ:ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಬೆಳ್ಳಿ ರಥದ ಮೂಲಕ ಬಾಬಾ ಸಾಹೇಬ್ ಭಾವಚಿತ್ರವನ್ನು ಅದ್ದೂರಿ ಮೆರವಣಿಗೆ ನಡೆಯಿತು.
ಕಾರ್ಯಕ್ರಮದ ನೇತೃತ್ವದ ವಹಿಸಿ ಮಾತನಾಡಿದ ಮುಖಂಡ ಹರಿಹರಪುರ ನರಸಿಂಹ ಯಾವುದೇ ಖಡ್ಗದಿಂದ ಆಗದೇ ಇರುವ ಮಹತ್ವದ ಕಾರ್ಯವನ್ನು ಬಾಬಾ ಸಾಹೇಬರು ಪೆನ್ನು, ಪುಸ್ತಕದಿಂದ ಮಾಡಿ ತೋರಿಸಿದ್ದಾರೆ. ಭಾರತ ದೇಶದ ಕೋಟ್ಯಂತರ ಜನರಿಗೆ ಪೆನ್ನು, ಪುಸ್ತಕ ಮೂಲಕ ಸ್ವಾತಂತ್ರ್ಯ ಸಮಾನತೆ, ನ್ಯಾಯ ಹಾಗೂ ಭಾತ್ರತ್ವವನ್ನು ನೀಡಿದ್ದಾರೆ. ಅಂಬೇಡ್ಕರ್ ಅವರನ್ನು ಆರಾಧನೆಗಷ್ಟೇ ಸೀಮಿತಗೊಳಿಸದೆ ಅವರ ವಿದ್ವತ್ತು, ಪ್ರೀತಿ, ಕರುಣೆ ನಾವೆಲ್ಲರೂ ಮೈಗೂಡಿಸಿಕೊಂಡರೆ ಮಾತ್ರ ಪ್ರಬುದ್ಧ ಭಾರತ ನಿರ್ಮಾಣವಾಗಲು ಸಾಧ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಕೊನೆಗೊಳ್ಳಬಾರದು. ಬಾಬಾ ಸಾಹೇಬರ ಸಂದೇಶಗಳನ್ನು ಎದೆಯೊಳಗೆ ಇಳಿಸಿಕೊಂಡು ಸಮಾಜದಲ್ಲಿ ನಿರಂತರವಾಗಿ ಬಿತ್ತಬೇಕಾಗಿದೆ. ಒಡೆದು ಹೋಗುತ್ತಿರುವ ಎಲ್ಲಾ ಜಾತಿ ಸಮುದಾಯಗಳನ್ನು ಒಗ್ಗೂಡಿಸುವುದು ಇಂದು ಅಗತ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪರ್ವತರಾಜ್,ಕೃಷ್ಣಯ್ಯ ರಾಮಚಂದ್ರ, ಜಗದೀಶ್,ಸುನಿಲ್ ಕುಮಾರ್, ಹೆಚ್.ಆರ್ ವಿಜಿಕುಮಾರ್,ಶೇಖರ್, ವೈರಮುಡಿ, ಬಸವರಾಜ್,ಸಂಘದ ಗೌರವಧ್ಯಕ್ಷ ಚಲುವಯ್ಯ, ಅಧ್ಯಕ್ಷ ರಂಗರಾಮು, ಕಾರ್ಯದರ್ಶಿ ಹೆಚ್ ಬಿ ಶಿವಕುಮಾರ್, ನರಸಿಂಹ, ಪೃಥ್ವಿ ಎನ್,ಸೇರಿದಂತೆ ಗ್ರಾಮಸ್ಥರು ಇದ್ದರು.
– ಮನು ಮಾಕವಳ್ಳಿ, ಕೆ ಆರ್ ಪೇಟೆ
