ಓಲಾ-ಊಬರ್ ಮಾದರಿಯಂತೆ ಆಂಬುಲೆನ್ಸ್ ಸೇವೆ : ಸರ್ಕಾರದ ಹೊಸ ಯೋಜನೆ

ಆಯ್ದ ಮೊಬೈಲ್ ಆ್ಯಪ್ ಬಳಸಿ ಓಲಾ-ಊಬರ್ ಶೈಲಿಯಲ್ಲಿ ಆ್ಯಂಬುಲೆನ್ಸ್ ಸೇವೆ ಪಡೆಯುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ರೂಪಿಸುತ್ತಿದ್ದು, ಸರ್ಕಾರದಿಂದ ದರ ನಿಗದಿಯೊಂದಿಗೆ ಖಾಸಗಿ ಆಂಬುಲೆನ್ಸ್ ಸೇವೆಗಳ ನಿಯಂತ್ರಣಕ್ಕೂ ತಯಾರಿ ನಡೆಯುತ್ತಿದೆ.