ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಸ್ಥಾಪನೆ- ನಂದಿನಿ ಮಳಿಗೆಗಿಲ್ಲ ಅವಕಾಶ-ಸಾರ್ವಜನಿಕ ಆಕ್ರೋಶ

ಬೆಂಗಳೂರು ಮೆಟ್ರೋ ನಿಗಮ (BMRCL) ನಗರದ ಹತ್ತು ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ ಮಳಿಗೆ ಸ್ಥಾಪಿಸಲು ಗುಜರಾತ್‌ನ GCMMF (ಅಮುಲ್) ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಈ ನಿರ್ಧಾರ ಸಾರ್ವಜನಿಕ ಆಕ್ರೋಶ ಹಾಗೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆದರೆ ಕರ್ನಾಟಕದ ಕೆಎಂಎಫ್ ನಂದಿನಿ ಇರುವಾಗಲೇ ಅಮುಲ್‌ಗೆ ಅವಕಾಶ ನೀಡಿದ್ದು ಕನ್ನಡ ಪರ ಸಂಘಟನೆಗಳು ಹಾಗೂ ಕೆಲ ರಾಜಕೀಯ ಪಕ್ಷಗಳಿಂದ ಟೀಕೆ ಎದುರಿಸುತ್ತಿದೆ.