ಕೆ ಆರ್ ಪೇಟೆ: ಪಾಂಡವಪುರ ತಾಲ್ಲೂಕಿನ ಚಾಗಶೆಟ್ಟಹಳ್ಳಿ ಗ್ರಾಮದ ಸುಮಂತ್ ಶೋಭಸುಮಂತ್ ದಂಪತಿಗಳ ಪ್ರೀತಿಯ ಸುಪುತ್ರ ಪುಟ್ಟ ಬಾಲಕ ಚಿರಾಗ್. ಎಸ್
ಇದೇ ತಿಂಗಳು 25 ರಂದು ಕರ್ನಾಟಕದ ಹೆಸರಾಂತ ಕಲಾ ನವೀನ್ ಫಿಲಂ ಅಕಾಡೆಮಿ ಅವರು ಆಯೋಜಿಸಲಾಗಿದ್ದ ಟಾಪ್ ಮಾಡೆಲ್ ಆಫ್ ಇಂಡಿಯಾ 2025 -26ನೇ ವರ್ಷದ ಮಾಡೆಲಿಂಗ್ ಶೋ ಅತ್ಯಂತ ದೊಡ್ಡ ಮಟ್ಟದಲ್ಲಿ, ಮಿಲ್ಲರ್ಸ್ ರೋಡ್ ಡಾ. ಬಿ ಆರ್ ಅಂಬೇಡ್ಕರ್ ಭವನ ಬೆಂಗಳೂರಿನಲ್ಲಿ ಯಶಸ್ವಿಗೊಂಡಿದೆ.
ಇದೇ ಶೋನಲ್ಲಿ ಕೆ ಆರ್ ಪೇಟೆ ತಾಲ್ಲೂಕಿನ ಪಕ್ಕದ ಪಾಂಡವಪುರ ತಾಲ್ಲೂಕಿನ ಚಾಗಶೆಟ್ಟಹಳ್ಳಿ ಗ್ರಾಮದ ಸುಮಂತ್ ಹಾಗೂ ಶೋಭಸುಮಂತ್ ದಂಪತಿಗಳ ಸುಪುತ್ರ ಚಿರಾಗ್ ಎಸ್ ಎಂಬ ಎರಡನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಎಂಡವರ್ ಅಕಾಡೆಮಿ ಜಿಗಣಿ ಬೆಂಗಳೂರು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಚಿಕ್ಕ ವಯಸ್ಸಿನಲ್ಲಿ ದೊಡ್ಡ ಶೋ ನಲ್ಲಿ ಬಾಗವಹಿಸಿ ವಿಜೇತರಾಗಿ ಮೊದಲನೆ ಸ್ಥಾನ ಪಡೆದುಕೊಂಡಿದ್ದಾರೆ.ಹಾಗೂ ಬೆಸ್ಟ್ ಟ್ಯಾಲೆಂಟ್ ಅವಾರ್ಡ್ ಮತ್ತು ಬೆಸ್ಟ್ ಪಾಪ್ಯುಲರ್ ಫೇಸ್ ಅವಾರ್ಡ್ ಗಳನ್ನು ಪಡೆದು ಕೊಂಡಿದ್ದಾರೆ.ಇದೆ ರೀತಿ ಚಿರಾಗ್ ಮುಂದಿನ ದಿನಗಳಲ್ಲಿ ಇಂಟರ್ನ್ಯಾಷನಲ್ ಮಟ್ಟಕ್ಕೆ ಬೆಳೆಯಲಿ ಭಗವಂತನ ಆಶೀರ್ವಾದ ಸದಾ ಚಿರಾಗ್ ಮೇಲಿರಲಿ.ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆದು ಮಂಡ್ಯ ಜಿಲ್ಲೆಗೆ ಕೀರ್ತಿ ತರಲಿ ಎಂಬುದು ಎಲ್ಲರ ಆಶಯವಾಗಿದೆ.

ಕಾರ್ಯಕ್ರಮಕ್ಕೆ ನಟ ಮನೋರಂಜನ್ ರವಿಚಂದ್ರನ್ , ಶ್ರೀ ನಗರ ಕಿಟ್ಟಿ, ಬಿಗ್ ಬಾಸ್ ಖ್ಯಾತಿಯ ಸತೀಶ್, ಅಮೃತಂಜನ ಚಿತ್ರದ ನಟ ನಟಿ , ಸೀಟ್ ಎಡ್ಜ್ ಚಿತ್ರ ದ ನಾಯಕ ಸಿದ್ದು ಅಲವಾರು ಚಲನಚಿತ್ರ ನಾಯಕ ನಾಯಕಿ ಹಾಗೂ ಹಲವಾರು ಗಣ್ಯರೂ ಹಾಜರಾಗಿದ್ದರು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
