
ರಾಯಚೂರು: ಇವರು ಮನುಷ್ಯರೋ ಅಥವಾ ಮೃಗಗಳೋ.. ರಾಯಚೂರಿನಲ್ಲಿ ನಡೆದ ಘಟನೆ ನೋಡಿದ್ರೆ ನೀವೂ ಹೀಗೇ ಟೀಕೆ ಮಾಡ್ತೀರ.
ಹೌದು..ವ್ಯಕ್ತಿಯೊಬ್ಬರ ಸಾವಿಗೆ ಮಹಿಳೆಯೇ ಕಾರಣವಾಗಿದ್ದಾಳೆಂದು ಆರೋಪಿಸಿ ಆಕೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಇಲ್ಲಿನ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಮಹಿಳೆಯನ್ನು ಗ್ರಾಮಸ್ಥರ ಎದುರು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಲಾಗಿದೆ
ವ್ಯಕ್ತಿಯೋರ್ವನ ಸಾವಿಗೆ ಪರಿಚಯಸ್ಥ ಮಹಿಳೆಯೇ ಕಾರಣ ಎಂದು ಆರೋಪಿಸಿ, ಜನವರಿ 27ರ ಸಂಜೆ ವೇಳೆಯಲ್ಲಿ ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ ಮತ್ತು ರೇಣುಕಾ ಎಂಬುವವರು ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.
ಕಳೆದ 20 ದಿನಗಳ ಹಿಂದೆ ರಂಗಪ್ಪ ಸಾವನ್ನಪ್ಪಿದ್ರು. ರಂಗಪ್ಪ ಈ ಮಹಿಳೆ ಜೊತೆ ತೆರಳಿದ್ದ ವೇಳೆ ಮೃತಪಟ್ಟಿದ್ದಾರೆ ಎಂಬ ಶಂಖೆಯ ಮೇಲೆ ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇಡೀ ಗ್ರಾಮಸ್ಥರ ಎದುರು ಮಹಿಳೆಗೆ ಥಳಿಸಿ ನಿಂದಿಸಲಾಗಿದೆ.
ಘಟನೆಯ ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ಪೊಲೀಸರು ತೆರಳಿ, ಮಹಿಳೆಯನ್ನು ರಕ್ಷಿಸಿ, ಹಲ್ಲೆ ಆರೋಪದಡಿ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.